IND vs SL T20 ಧರ್ಮಶಾಲಾದಲ್ಲಿ ಲಂಕಾ ಹೋರಾಟ, ಟೀಂ ಇಂಡಿಯಾಗೆ 184 ರನ್ ಟಾರ್ಗೆಟ್!

By Suvarna News  |  First Published Feb 26, 2022, 8:52 PM IST
  • ಪಥುಮ್ ಹಾಗೂ ದಸೂನ್ ಶನಕಾ ಹೋರಾಟ
  • 5 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿದ ಶ್ರೀಲಂಕಾ
  • ಧರಮಶಾಲಾದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯ
     

ಧರ್ಮಶಾಲಾ(ಫೆ.26): ಆರಂಭಿಕರ ದಿಟ್ಟ ಹೋರಾಟ, ಅಂತಿಮ ಹಂತದಲ್ಲಿ ನಾಯಕನ ಜವಾಬ್ದಾರಿಯುತ ಆಟದಿಂದ ಭಾರತ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ(Srilanka) 5 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿದೆ. 3 ಪಂದ್ಯಗಳ ಟಿ20 ಸರಣಿಯಲ್ಲಿ(T20 Series) 2ನೇ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸರಣಿ ಗೆಲುವಿಗೆ ಹೊಂಚು ಹಾಕಿರುವ ಟೀಂ ಇಂಡಿಯಾ(Team India) ಗೆಲುವಿಗ 184 ರನ್ ಟಾರ್ಗೆಟ್(Target) ಸಿಕ್ಕಿದೆ.

ಲಂಕಾ ತಂಡದ ಆರಂಭಿಕರಾದ ಪಥುಮ್ ನಿಸ್ಸಾಂಕ ಹಾಗೂ ಧನುಷ್ಕಾ ಗುಣತಿಲಕ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿತು.ದನುಷ್ಕಾ ಗುಣತಿಲಕ 29 ಎಸೆತದಲ್ಲಿ 38 ರನ್ ಸಿಡಿಸಿ ಮಿಂಚಿದರು. ಗುಣತಿಲಕ ವಿಕೆಟ್ ಪತನದ ಬೆನ್ನಲ್ಲೇ ಚಾರಿತ್ ಅಸಲಂಕಾ ವಿಕೆಟ್ ಪತನಗೊಂಡಿದೆ. ಅಸಲಂಕಾ ಕೇವಲ 2 ರನ್ ಸಿಡಿಸಿ ಔಟಾದರು.

Latest Videos

undefined

IPL 2022: ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಆರಂಭಕ್ಕೆ ಡೇಟ್ ಫಿಕ್ಸ್‌, ಅಧಿಕೃತ ಪ್ರಕಟಣೆ ಬಾಕಿ..!

ಪಥುಮ್ ನಿಸ್ಸಾಂಕ ಹೋರಾಟ ಮುಂದುವರಿಸಿದರೆ, ಇತರ ಲಂಕಾ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಇತ್ತ ದಿನೇಶ್ ಚಾಂಡಿಮಲ್ ಕೇವಲ 9 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ನಾಯಕ ದಸೂನ್ ಶನಕ ಹಾಗೂ ಪಥುಮ್ ಹೋರಾಟ ಲಂಕಾ ತಂಡಕ್ಕೆ ನರವಾಯಿತು.

ಅಬ್ಬರಿಸಿದ ಪಥುಮ್ 53 ಎಸೆತದಲ್ಲಿ 75 ರನ್ ಸಿಡಿಸಿದರು. ಇತ್ತ ದಸೂನ್ ಶನಕ 19 ಎಸೆತದಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 47 ರನ್ ಸಿಡಿಸಿದರು. ಈ ಮೂಲಕ ಶ್ರೀಲಂಕಾ 5 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿತು.

IPL 2022: ಈ ಬಾರಿ ಹೊಸ ರೂಪದಲ್ಲಿ ಐಪಿಎಲ್‌ ಝಲಕ್‌..!

ಮೊದಲ ಟಿ20 ಪಂದ್ಯ:
ವಿಶ್ವ ನಂ.1 ಭಾರತ, ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಮೊದಲ ಪಂದ್ಯವನ್ನು 62 ರನ್‌ಗಳಿಂದ ಗೆದ್ದ ಭಾರತ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಟೀಂ ಇಂಡಿಯಾ ಸತತ 10ನೇ ಟಿ20 ಪಂದ್ಯವನ್ನು ಗೆದ್ದಿದ್ದು, ಅಷ್ಘಾನಿಸ್ತಾನದ ಸತತ 12 ಗೆಲುವುಗಳ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದೆ.

ಗುರುವಾರ ನಡೆದ ಪಂದ್ಯದಲ್ಲಿ 6 ಬದಲಾವಣೆಯೊಂದಿಗೆ ಕಣಕ್ಕಿಳಿದ ಭಾರತವನ್ನು, ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು. ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌ ಹಾಗೂ ರೋಹಿತ್‌ ಶರ್ಮಾ ಅವರ ಸ್ಫೋಟಕ ಆಟದ ನೆರವಿನಿಂದ ಭಾರತ 20 ಓವರಲ್ಲಿ 2 ವಿಕೆಟ್‌ಗೆ 199 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು.

ದೊಡ್ಡ ಗುರಿ ಬೆನ್ನತ್ತಲು ಇಳಿದ ಶ್ರೀಲಂಕಾ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಆಗದೆ 20 ಓವರಲ್ಲಿ 6 ವಿಕೆಟ್‌ಗೆ 137 ರನ್‌ಗಳಿಸಲಷ್ಟೇ ಶಕ್ತವಾಯಿತು. ಲಂಕಾ ಮೊದಲ ಎಸೆÜತದಲ್ಲೇ ವಿಕೆಟ್‌ ಕಳೆದುಕೊಂಡಿತು. ಪವರ್‌-ಪ್ಲೇನಲ್ಲಿ ದೊಡ್ಡ ಮೊತ್ತ ಗಳಿಸದ ಲಂಕಾ, 2 ವಿಕೆಟ್‌ ಸಹ ಕಳೆದುಕೊಂಡಿತು. ಆ ಬಳಿಕ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ಲಂಕಾಕ್ಕೆ ಚರಿತ್‌ ಅಸಲಂಕ ಅರ್ಧಶತಕ ಬಾರಿಸಿ ತಕ್ಕಮಟ್ಟಿಗೆ ನೆರವಾದರು. ಅವರ 53 ರನ್‌ಗಳ ಆಟ ತಂಡ ಆಲೌಟ್‌ ಆಗುವುದನ್ನು ತಪ್ಪಿಸಿತು.

ಶತಕದ ಜೊತೆಯಾಟ: ಭಾರತಕ್ಕೆ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಅಮೋಘ ಆರಂಭ ನೀಡಿದರು. ಇವರಿಬ್ಬರು 11.5 ಓವರಲ್ಲಿ 111 ರನ್‌ ಸೇರಿಸಿದರು. ರೋಹಿತ್‌ 44 ರನ್‌ ಗಳಿಸಿ ಔಟಾದ ಬಳಿಕ ಕ್ರೀಸ್‌ಗಿಳಿದ ಶ್ರೇಯಸ್‌ ನಿಧಾನಗತಿಯ ಆರಂಭ ಪಡೆದರೂ, ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಕಿಶನ್‌ 56 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್‌ನೊಂದಿಗೆ 89 ರನ್‌ ಗಳಿಸಿದರು. ಶ್ರೇಯಸ್‌ 28 ಎಸೆತಗಳಲ್ಲಿ ಔಟಾಗದೆ 57 ರನ್‌ ಕಲೆಹಾಕಿದರು.

click me!