
ಪುಣೆ(ಜ.05): ಅಕ್ಸರ್ ಪಟೇಲ್, ಶಿವಂ ಮಾವಿ ಹೋರಾಟಕ್ಕೆ ಶ್ರೀಲಂಕಾ ತಂಡ ಬೆಚ್ಚಿ ಬಿದ್ದಿತು. ಟೀಂ ಇಂಡಿಯಾ ಘನಾನುಘಟಿ ವಿಕೆಟ್ ಕಬಳಿಸಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಶ್ರೀಲಂಕಾ ತಂಡಕ್ಕೆ ಭಾರತ ತಲೆನೋವು ಹೆಚ್ಚಿಸಿತು. ಅಕ್ಸರ್ ಹಾಗೂ ಶಿವಂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು. ಈ ಮೂಲಕ 16 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಭಾರತ ಮಣಿಸಿದ ಶ್ರೀಲಂಕಾ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಇದೀಗ 3ನೇ ಹಾಗೂ ಅಂತಿಮ ಟಿ20 ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.
ಶ್ರೀಲಂಕಾ ನೀಡಿದ 207ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಂಕಷ್ಟಕ್ಕೆ ಸಿಲುಕಿತು. ಇಶಾನ್ ಕಿಶನ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಶುಭಮನ್ ಗಿಲ್ 5 ರನ್ ಗಳಿಸಿ ಔಟಾದರು. ರಾಹುಲ್ ತ್ರಿಪಾಠಿ 5 ರನ್‌ಗೆ ಸುಸ್ತಾದರು. ಇತ್ತ ಸೂರ್ಯಕುಮಾರ್ ಯಾದವ್ ಹೋರಾಟ ಮುಂದುವರಿಸಿದರು.
ನಾಯಕ ಹಾರ್ದಿಕ್ ಪಾಂಡ್ಯ 12 ರನ್ ಸಿಡಿಸಿ ಔಟಾದರು. ದೀಪಕ್ ಹೂಡ 9 ರನ್ ಗಳಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ ಜೊತೆ ಸೇರಿದ ಅಕ್ಸರ್ ಪಟೇಲ್ ಹೋರಾಟ ನಡೆಸಿದರು. ಸೂರ್ಯಕುಮಾರ್ ಯಾದವ್ ಹಾಗೂ ಅಕ್ಸರ್ ಪಟೇಲ್ ಪಂದ್ಯಕ್ಕೆ ತಿರುವು ನೀಡುವ ಪ್ರಯತ್ನ ನಡೆಸಿದರು. ಅಕ್ಸರ್ ಪಟೇಲ್ ಸಿಕ್ಸರ್ ಮೂಲಕ ಅಬ್ಬರ ಆರಂಭಿಸಿದರು.
ಕೇವಲ 20 ಎಸತದಲ್ಲಿ ಅಕ್ಸರ್ ಪಟೇಲ್ ಹಾಫ್ ಸೆಂಚುರಿ ಸಿಡಿಸಿದರು. ಈ ವೇಳೆ ಅಕ್ಸರ್ 6 ಸಿಕ್ಸರ್ ಹಾಗೂ 2 ಬೌಂಡರಿ ಸಿಡಿಸಿದ್ದರು. ಈ ಮೂಲಕ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಗರಿಷ್ಠ ಮೊತ್ತ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೂ ಪಾತ್ರರಾದರು. ಅಕ್ಸರ್ ಪಟೇಲ್‌ಗೂ ಮೊದಲು ರವೀಂದ್ರ ಜಡೇಜಾ 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ 23 ಎಸೆತದಲ್ಲಿ ಅಜೇಯ 44 ರನ್ ಸಿಡಿಸಿದ್ದರು.
ಇತ್ತ ಸೂರ್ಯಕುಮಾರ್ ಯಾದವ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇರ ಪರಿಣಾಮ ಅಂತಿಮ 30 ಎಸೆತದಲ್ಲಿ ಭಾರತದ ಗೆಲುವಿಗೆ 68 ರನ್ ಅವಶ್ಯಕತೆ ಇತ್ತು. ಇದೇ ವೇಳೆ ಸೂರ್ಯಕುಮಾರ್ ಯಾದವ್ ಹಾಫ್ ಸೆಂಚುರಿ ಪೂರೈಸಿದರು. ಆದರೆ ಸೂರ್ಯಕುಮಾರ್ ಯಾದವ್ ಹೋರಾಟ ಮುಂದುವರಿಯಲಿಲ್ಲ. 36 ಎಸೆತದಲ್ಲಿ 51 ರನ್ ಸಿಡಿಸಿ ಸೂರ್ಯಕುಮಾರ್ ಯಾದವ್ ಔಟಾದರು.
ಅಕ್ಸರ್ ಪಟೇಲ್ ಹಾಗೂ ಶಿವ ಮಾವಿ ಅಬ್ಬರ ಆರಂಭಗೊಂಡಿತು. ಇದರ ಪರಿಣಾಮ ಪಂದ್ಯದ ರೋಚಕತೆ ಹೆಚ್ಚಿತು. ಅಂತಿಮ 6 ಎಸೆತದಲ್ಲಿ ಭಾರತದ ಗೆಲುವಿಗೆ 21 ರನ್ ಅವಶ್ಯಕತೆ ಇತ್ತು. ಇತ್ತ 31 ಎಸೆತದಲ್ಲಿ 65 ರನ್ ಸಿಡಿಸಿದ ಅಕ್ಸರ್ ಪಟೇಲ್ ವಿಕೆಟ್ ಪತನಗೊಂಡಿತು. 25 ರನ್ ಸಿಡಿಸಿದ್ದ ಅಂತಿಮ ಎಸೆತದಲ್ಲಿ ಔಟಾದರು. ಈ ಮೂಲಕ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.