ವಿರಾಟ್ ಕೊಹ್ಲಿ ಅಜೇಯ 166 ರನ್, ಶುಭಮನ್ ಗಿಲ್ ಸೆಂಚುರಿಯಿಂದ ಶ್ರೀಲಂಕಾ ವಿರುದ್ದ 3ನೇ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಸಿಡಿಸಿದೆ. ಇದೀಗ ಶ್ರೀಲಂಕಾಗೆ 391 ರನ್ ಟಾರ್ಗೆಟ್ ನೀಡಲಾಗಿದೆ.
ತಿರುವನಂತಪುರಂ(ಜ.15): ಶುಭಮನ್ ಗಿಲ್ ಶತಕ, ವಿರಾಟ್ ಕೊಹ್ಲಿ ಶತಕ, ನಾಯಕ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ದಿಟ್ಟ ಹೋರಾಟದ ಮೂಲಕ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ 390 ರನ್ ಸಿಡಿಸಿದೆ. ಲಂಕಾ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಈಗಾಗಲೇ ಕೈವಶ ಮಾಡಿದೆ. ಕ್ಲೀನ್ ಸ್ವೀಪ್ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿತು. ಹೀಗಾಗಿ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 390 ರನ್ ಸಿಡಿಸಿದೆ. ಶ್ರೀಲಂಕಾ ತಂಡಕ್ಕೆ 391 ರನ್ ಚೇಸ್ ಅತ್ಯಂತ ಸವಾಲಾಗಿ ಪರಿಣಮಿಸಲಿದೆ.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಶಭಮನ್ ಗಿಲ್ ಹೋರಾಟ ಟೀಂ ಇಂಡಿಯಾಗೆ ನೆರವಾಯಿತು. ತಿರುವನಂತಪುರಂ ಬ್ಯಾಟಿಂಗ್ ಪಿಚ್ ಲಾಭ ಪಡೆದುಕೊಂಡ ಟೀಂ ಇಂಡಿಯಾ, ಲಂಕಾ ಬೌಲರ್‌ಗ ಮೇಲೆ ಸವಾರಿ ಮಾಡಿದರು. ಆದರೆ ನಾಯಕ ರೋಹಿತ್ ಶರ್ಮಾ 42 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಶುಬಮನ್ ಗಿಲ್ ಜೋಡಿ 95 ರನ್ ಜೊತೆಯಾಟ ನೀಡಿತು.
IND vs SL ಮತ್ತೊಂದು ಶತಕ ಸಿಡಿಸಿದ ವಿರಾಟ್, ಹೊಸ ವರ್ಷದಲ್ಲಿ ಹೊಸ ದಾಖಲೆ!
ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟ ಟೀಂ ಇಂಡಿಯಾದದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಈ ಜೊತೆಯಾಟಕ್ಕೆ ಬ್ರೇಕ್ ಹಾಕಲು ಲಂಕಾ ಬೌಲರ್ಸ್ ಇನ್ನಿಲ್ಲದ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಗಿಲ್ ಹಾಗೂ ಕೊಹ್ಲಿ ನಿರಾಯಾಸವಾಗಿ ರನ್ ಕಲೆಹಾಕಿದರು. ಇದರ ನಡುವೆ ಶುಭಮನ್ ಗಿಲ್ ಆಕರ್ಷಕ ಸೆಂಚುರಿ ಸಿಡಿಸಿ ಮಿಂಚಿದರು. ಗಿಲ್ ಏಕದಿನದಲ್ಲಿ 2ನೇ ಶತಕ ಸಾಧನೆ ಮಾಡಿದರು.
ಶುಭಮನ್ ಗಿಲ್ 97 ಎಸೆತದಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 116 ರನ್ ಸಿಡಿಸಿ ಔಟಾದರು. 95 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 226ರನ್‌ಗೆ ಎರಡನೇ ವಿಕೆಟ್ ಕಳೆದುಕೊಂಡಿತು. ಗಿಲ್ ಬಳಿಕ ಕೊಹ್ಲಿ ಅಬ್ಬರ ಮುಂದುವರಿಯಿತು. ದಿಟ್ಟ ಹೋರಾಟ ನೀಡಿದ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದರು. ಇದು ಕೊಹ್ಲಿಯ 46ನೇ ಏಕದಿನ ಸೆಂಚುರಿಯಾಗಿದೆ. ಈ ಸರಣಿಯಲ್ಲಿ 2ನೇ ಶತಕ ಅನ್ನೋದು ಮತ್ತಷ್ಟು ವಿಶೇಷ.
ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ಲಂಕಾಗೆ ಮತ್ತಷ್ಟು ತಲೆನೋವು ತಂದಿತು. ಸೆಂಚುರಿ ಬಲಿಕ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇತ್ತ ಶ್ರೇಯಸ್ ಅಯ್ಯರ್ 32 ಎಸೆತದಲ್ಲಿ 38 ರನ್ ಸಿಡಿಸಿ ಔಟಾದರು. ಇತ್ತ ಕೆಎಲ್ ರಾಹುಲ್ ನಿರೀಕ್ಷಿತ ರನ್ ಸಿಡಿಸಲಿಲ್ಲ. ಕೇವಲ 7 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ರಾಹುಲ್ ದಿಟ್ಟ ಹೋರಾಟ ನೀಡಿದ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದರು.
ವಾಸೀಂ ಅಕ್ರಂರಿಂದ ಕಾಪಾಡಿ ಎಂದು ಸಚಿನ್‌ಗೆ ಕೈಮುಗಿದಿದ್ದ ವಿರೇಂದ್ರ ಸೆಹ್ವಾಗ್..! ಯಾಕೆ?
ಇತ್ತ ಕೊಹ್ಲಿ ಅಬ್ಬರ ಮುಂದುವರಿಯಿತು. ಧೋನಿ ಹೆಲಿಕಾಪ್ಟರ್ ಶಾಟ್ ಸಿಕ್ಸರ್, ಬೌಂಡರಿ ಮೂಲಕ ಕೊಹ್ಲಿ ಮತ್ತೆ ರನ್ ವೇಗ ಹೆಚ್ಚಿಸಿದರು. ಸೂರ್ಯಕುಮಾರ್ ಯಾದವ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 110 ಎಸೆತದಲ್ಲಿ 13 ಬೌಂಡರಿ ಹಾಗೂ 8 ಸಿಕ್ಸರ್ ಮೂಲಕ ಅಜೇಯ 166 ರನ್ ಸಿಡಿಸಿದರು. ಇದರೊಂದಿಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 390 ರನ್ ಸಿಡಿಸಿತು.