ರೋಹಿತ್ ಶರ್ಮಾ ನೋಡಿ ಆನಂದಭಾಷ್ಪ ಸುರಿಸಿದ ಪುಟ್ಟ ಅಭಿಮಾನಿ, ಸಂತೈಸಿದ ಹಿಟ್‌ಮ್ಯಾನ್‌..! ವಿಡಿಯೋ ವೈರಲ್

By Naveen KodaseFirst Published Jan 10, 2023, 2:15 PM IST
Highlights

ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಗುವಾಹಟಿ ಆತಿಥ್ಯ
ಮೊದಲ ಏಕದಿನ ಪಂದ್ಯಕ್ಕೂ ಅಭಿಮಾನಿಗಳನ್ನು ಭೇಟಿಯಾದ ಟೀಂ ಇಂಡಿಯಾ ನಾಯಕ
ರೋಹಿತ್ ಶರ್ಮಾ ನೋಡಿ ಕಣ್ಣೀರಿಟ್ಟ ಪುಟ್ಟ ಅಭಿಮಾನಿ

ಗುವಾಹಟಿ(ಜ.10): ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಆಧುನಿಕ ಕ್ರಿಕೆಟ್‌ನ ಅಪಾಯಕಾರಿ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ಶ್ರೀಲಂಕಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಇಲ್ಲಿನ ಬರ್ಸಾಪರ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. 

ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಸೋಮವಾರ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಅಭ್ಯಾಸ ಮಾಡುವಾಗ ದೊಡ್ಡ ಸಂಖ್ಯೆಯಲ್ಲಿ ಮೈದಾನಕ್ಕೆ ಬಂದು ನಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಂಡರು. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೆಲ ಅಭಿಮಾನಿಗಳ ಬಳಿ ಹೋಗಿ ಕೆಲಕಾಲ ಮಾತುಕತೆಯನ್ನು ನಡೆಸಿದರು. ಆದರೆ ರೋಹಿತ್ ಶರ್ಮಾ ಅವರ ಅಪ್ಪಟ ಅಭಿಮಾನಿಯಾಗಿರುವ ಪುಟ್ಟ ಬಾಲಕ, ಹಿಟ್‌ಮ್ಯಾನ್ ತಮ್ಮತ್ತ ಬರುತ್ತಿದ್ದಂತೆಯೇ ಖುಷಿಯಲ್ಲಿ ಆನಂದ ಭಾಷ್ಪ ಸುರಿಸಿದರು. ಆಗ ಆ ಅಭಿಮಾನಿಯ ಬಳಿ ಹೋಗಿ ಆತನನ್ನು ಸಂತೈಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯ ಬಳಿಕ ರೋಹಿತ್ ಶರ್ಮಾ, ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಬಾಂಗ್ಲಾ ಎದುರಿನ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಸ್ಲಿಪ್‌ನಲ್ಲಿ ವೇಳೆ ಕ್ಯಾಚ್ ಹಿಡಿಯುವ ಯತ್ನದಲ್ಲಿ ರೋಹಿತ್ ಶರ್ಮಾ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಇದಾದ ಬಳಿಕ ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಲಂಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯಿಂದಲೂ ರೋಹಿತ್ ಶರ್ಮಾ ಭಾರತ ತಂಡದಿಂದ ಹೊರಗುಳಿದಿದ್ದರು.
ಇದೀಗ ಲಂಕಾ ಎದುರು ರೋಹಿತ್ ಶರ್ಮಾ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ್ದಾರೆ.

ಹೀಗಿತ್ತು ನೋಡಿ ಆ ಸುಂದರ ಕ್ಷಣ:

Cricketer Rohit Sharma interacting with an young cricket fan from Assam in Guwahati.

Adorable Moments! pic.twitter.com/Nyzc4D9fHg

— Pramod Boro (@PramodBoroBTR)

ಸದ್ಯಕ್ಕೆ ಅಂ.ರಾ.ಟಿ20ಗಿಲ್ಲ ನಿವೃತ್ತಿ, ಐಪಿಎಲ್‌ ಬಳಿಕ ನಿರ್ಧರಿಸುವ: ರೋಹಿತ್‌

ಗುವಾಹಟಿ: ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸೇರಿ ಕೆಲ ಹಿರಿಯ ಆಟಗಾರರಿಗೆ ಇನ್ಮುಂದೆ ಟಿ20 ತಂಡದಲ್ಲಿ ಸ್ಥಾನವಿಲ್ಲ. ಸದ್ಯದಲ್ಲೇ ಈ ಇಬ್ಬರು ಅಂ.ರಾ.ಟಿ20ಗೆ ವಿದಾಯ ಘೋಷಿಸಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ನಿವೃತ್ತಿ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದಿದ್ದಾರೆ.

BCCI ಬಳಿ 130 ಕೋಟಿ ರುಪಾಯಿ ಡಿಸ್ಕೌಂಟ್‌ ಕೇಳಿದ ಸ್ಟಾರ್‌ ಸಂಸ್ಥೆ! ಬೈಜುಸ್‌ನಿಂದ್ಲೂ ಹೊಸ ಪ್ರಸ್ತಾಪ..!

‘ಯಾರಿಗೂ ಸತತವಾಗಿ ಕ್ರಿಕೆಟ್‌ ಆಡಲು ಸಾಧ್ಯವಿಲ್ಲ. ಹೀಗಾಗಿ ವಿಶ್ರಾಂತಿ ಪಡೆಯುವುದು ಅಗತ್ಯ. ಮುಂದೆ ನ್ಯೂಜಿಲೆಂಡ್‌ ಟಿ20 ಸರಣಿ ಇದೆ. ಐಪಿಎಲ್‌ ಬಳಿಕ ಏನಾಗಲಿದೆ ಎಂದು ನೋಡೋಣ. ಸದ್ಯಕ್ಕೆ ಅಂ.ರಾ. ಟಿ20 ಬಿಡುವ ಚಿಂತಿಸಿಲ್ಲ’ ಎಂದು ರೋಹಿತ್‌ ಹೇಳಿದ್ದಾರೆ.

click me!