
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರದಿಂದ (ಜ.11) ಆರಂಭಗೊಳ್ಳಲಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ (Team India) ಆಟಗಾರರು ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಇಲ್ಲಿನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಈವರೆಗೆ ಒಂದೂ ಟೆಸ್ಟ್ ಗೆಲ್ಲದ ಭಾರತ, ಪಂದ್ಯ ಗೆಲ್ಲುವುದರ ಜೊತೆಗೆ ಐತಿಹಾಸಿಕ ಸರಣಿ ಗೆಲುವನ್ನೂ ಸಾಧಿಸಲು ಎದುರು ನೋಡುತ್ತಿದೆ. ಆಟಗಾರರು ಶನಿವಾರ ಜೋಹಾನ್ಸ್‌ಬರ್ಗ್‌ನಿಂದ ಇಲ್ಲಿಗೆ ಆಗಮಿಸಿದ್ದು, ಭಾನುವಾರ ಅಭ್ಯಾಸ ಆರಂಭಿಸಿದರು. ಬೆನ್ನು ನೋವಿನಿಂದಾಗಿ 2ನೇ ಟೆಸ್ಟ್‌ನಿಂದ ಹೊರಗುಳಿದಿದ್ದ ನಾಯಕ ವಿರಾಟ್ ಕೊಹ್ಲಿ(Virat Kohli) ಸೇರಿದಂತೆ ಎಲ್ಲಾ ಆಟಗಾರರು ನೆಟ್ಸ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾದರು.
ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ (Wriddhiman Saha) ಹೆಚ್ಚು ಸಮಯ ಅಭ್ಯಾಸ ನಡೆಸುವುದು ಕಂಡುಬಂತು. ರಿಷಭ್ ಪಂತ್ (Rishabh Pant) ಬದಲಿಗೆ ಅವರಿಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಗಾಯಾಳು ಮೊಹಮದ್ ಸಿರಾಜ್ ಹೆಚ್ಚು ಓವರ್ ಬೌಲ್ ಮಾಡಲಿಲ್ಲ ಎಂದು ತಿಳಿದುಬಂದಿದ್ದು, ಅವರ ಬದಲಿಗೆ ಇಶಾಂತ್ ಶರ್ಮಾ ಅವರನ್ನು ಆಡಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
3ನೇ ಟೆಸ್ಟ್: ಹನುಮ ವಿಹಾರಿಗೆ ಕೊಕ್?
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ದದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ವಾಪಸಾಗುವುದು ಖಚಿತವಾಗಿದೆ. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ಹನುಮ ವಿಹಾರಿ ತಮ್ಮ ಸ್ಥಾನವನ್ನು ಕೊಹ್ಲಿಗೆ ಬಿಟ್ಟುಕೊಡಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Rahul Dravid on Rishabh Pant: ರಿಷಭ್ ಪಂತ್‌ಗೆ ಕೋಚ್ ರಾಹುಲ್ ದ್ರಾವಿಡ್ ಕ್ಲಾಸ್..!
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಗೆ ಆಯ್ಕೆಯಾಗದ ವಿಹಾರಿ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಕೊಹ್ಲಿ ಬೆನ್ನು ನೋವಿನ ಕಾರಣ 2ನೇ ಟೆಸ್ಟ್‌ನಿಂದ ಹೊರಬಿದ್ದ ಕಾರಣ, ವಿಹಾರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಅವರು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದರು. ಹನುಮ ವಿಹಾರಿ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 40 ರನ್ ಬಾರಿಸಿದ್ದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲವಾದ್ದರಿಂದ ಅರ್ಧಶತಕ ಬಾರಿಸಲು ಸಾಧ್ಯವಾಗಿರಲಿಲ್ಲ
ಸೆಂಚೂರಿಯನ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ್ದ ಟೀಂ ಇಂಡಿಯಾ, ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಸೋಲಿನ ಕಹಿಯುಂಡಿತ್ತು. ಹೀಗಾಗಿ ಕೇಪ್‌ಟೌನ್ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಲು ವಿರಾಟ್ ಕೊಹ್ಲಿ ಪಡೆ ಎದುರು ನೋಡುತ್ತಿದೆ. ಹರಿಣಗಳ ನಾಡಿನಲ್ಲಿ ಇದುವರೆಗೂ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿರುವ ಟೀಂ ಇಂಡಿಯಾ, ಇದೀಗ ಕೇಪ್‌ಟೌನ್ ಚಾಲೆಂಜ್ ಮೆಟ್ಟಿನಿಲ್ಲಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಅದರಲ್ಲೂ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಮಯೋಚಿತ ಅರ್ಧಶತಕ ಬಾರಿಸಿ ಮಿಂಚಿರುವ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಡಲಾಗಿದೆ.
ಮೊದಲ ಏಕದಿನ: ಐರ್ಲೆಂಡ್ ವಿರುದ್ಧ ವಿಂಡೀಸ್‌ಗೆ ಜಯ
ಜಮೈಕ್: ಐರ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 24 ರನ್ ಜಯಗಳಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಶಮಾರ್‌್ಹ ಬ್ರೂಕ್ಸ್(93), ನಾಯಕ ಕೀರನ್ ಪೊಲ್ಲಾರ್ಡ್ (69)ರ ಆಕರ್ಷಕ ಆಟದ ನೆರವಿನಿಂದ 48.5 ಓವರ್‌ಗಳಲ್ಲಿ 269 ರನ್‌ಗೆ ಆಲೌಟಾಯಿತು.
ಗುರಿ ಬೆನ್ನತ್ತಿದ ಐರ್ಲೆಂಡ್ 49.1 ಓವರ್‌ಗಳಲ್ಲಿ 245 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನಾಯಕ ಆ್ಯಂಡ್ರೂ ಬಾಲ್ಬರ್ನಿ (71), ಹ್ಯಾರಿ ಟೆಕ್ಟರ್(53) ಹೋರಾಟ ವಿಫಲವಾಯಿತು. ಜೋಸೆಫ್, ಶೆಫರ್ಡ್ ತಲಾ 3 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.