Ind vs SA: ಜೋಹಾನ್ಸ್‌ಬರ್ಗ್‌ ಟೆಸ್ಟ್ ಗೆಲ್ಲಲು ಹರಿಣಗಳಿಗೆ 240 ರನ್‌ ಗುರಿ ನೀಡಿದ ಟೀಂ ಇಂಡಿಯಾ

Suvarna News   | Asianet News
Published : Jan 05, 2022, 05:37 PM ISTUpdated : Jan 05, 2022, 05:46 PM IST
Ind vs SA: ಜೋಹಾನ್ಸ್‌ಬರ್ಗ್‌ ಟೆಸ್ಟ್ ಗೆಲ್ಲಲು ಹರಿಣಗಳಿಗೆ 240 ರನ್‌ ಗುರಿ ನೀಡಿದ ಟೀಂ ಇಂಡಿಯಾ

ಸಾರಾಂಶ

* ಜೋಹಾನ್ಸ್‌ಬರ್ಗ್‌ ಟೆಸ್ಟ್ ಪಂದ್ಯ ಗೆಲ್ಲಲು ಹರಿಣಗಳಿಗೆ ಕಠಿಣ ಗುರಿ * ಅಜೇಯ 40 ರನ್‌ ಬಾರಿಸಿ ತಂಡಕ್ಕೆ ಆಸರೆಯಾದ ಹನುಮ ವಿಹಾರಿ * ಎಂಗಿಡಿ, ಯಾನ್ಸೆನ್‌ ಹಾಗೂ ರಬಾಡಗೆ ತಲಾ 3 ವಿಕೆಟ್‌

ಜೋಹಾನ್ಸ್‌ಬರ್ಗ್‌(ಜ.05): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ (Team India) 266 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಜೋಹಾನ್ಸ್‌ಬರ್ಗ್ ಟೆಸ್ಟ್ (Johannesburg Test) ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ (South Africa Cricket Team) 240 ರನ್‌ಗಳ ಸವಾಲಿನ ಗುರಿ ನೀಡಿದೆ. ಚೇತೇಶ್ವರ್ ಪೂಜಾರ(53) ಹಾಗೂ ಅಜಿಂಕ್ಯ ರಹಾನೆ(58) ಬಾರಿಸಿದ ಸಮಯೋಚಿತ ಅರ್ಧಶತಕ ಹಾಗೂ ಹನುಮ ವಿಹಾರಿ ದಿಟ್ಟ ಬ್ಯಾಟಿಂಗ್(40*) ನೆರವಿನಿಂದ ಭಾರತ ತಂಡ ಸ್ಪರ್ಧಾತ್ಮಕ ಮುನ್ನಡೆ ಸಾಧಿಸಲು ನೆರವಾಗಿದೆ.

ಇಲ್ಲಿನ ವಾಂಡರರ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಆರಂಭದಲ್ಲಿ ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ಅಜಿಂಕ್ಯ ರಹಾನೆ (Ajinkya Rahane) ಶತಕದ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಅಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 111 ರನ್‌ಗಳ ಜತೆಯಾಟವಾಡುವ ಮೂಲಕ ಭಾರತ ತಂಡಕ್ಕೆ ಬಲ ತುಂಬಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕಗಿಸೋ ರಬಾಡ (Kagiso Rabada) ಯಶಸ್ವಿಯಾದರು. ಅಜಿಂಕ್ಯ ರಹಾನೆ 78 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 58 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಚೇತೇಶ್ವರ್ ಪೂಜಾರ ಕೂಡಾ ವಿಕೆಟ್ ಒಪ್ಪಿಸಿದರು. ಪೂಜಾರ 86 ಎಸೆತಗಳನ್ನು ಎದುರಿಸಿ 10 ಮನಮೋಹಕ ಬೌಂಡರಿ ಸಹಿತ 53 ರನ್ ಗಳಿಸಿ ರಬಾಡ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ರಿಷಭ್‌ ಪಂತ್ (Rishabh Pant) ದೊಡ್ಡ ಹೊಡೆತಕ್ಕೆ ಯತ್ನಿಸಿ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದರು.
 
ಮುನ್ನಡೆಯನ್ನು ಇನ್ನೂರರ ಗಡಿ ದಾಟಿಸಿದ ಠಾಕೂರ್, ವಿಹಾರಿ ಬ್ಯಾಟಿಂಗ್: ರಿಷಭ್ ಪಂತ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ರವಿಚಂದ್ರನ್ ಅಶ್ವಿನ್‌ (Ravichandran Ashwin) ಚುರುಕಾಗಿ ರನ್‌ಗಳಿಸುವ ಯತ್ನ ನಡೆಸಿದರು. ಒಟ್ಟು 14 ಎಸೆತಗಳನ್ನು ಎದುರಿಸಿದ ಅಶ್ವಿನ್‌ 2 ಬೌಂಡರಿ ಸಹಿತ 16 ರನ್‌ ಬಾರಿಸಿ ಲುಂಗಿ ಎಂಗಿಡಿಗೆ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ಶಾರ್ದೂಲ್ ಠಾಕೂರ್(Shardul Thakur) ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದರು. ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿ ಮಿಂಚಿದ್ದ ಶಾರ್ದೂಲ್ ಠಾಕೂರ್, ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ 24 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 28 ರನ್‌ ಗಳಿಸಿ ಮಾರ್ಕೊ ಯಾನ್ಸೆನ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮೊಹಮ್ಮದ್ ಶಮಿ ಕೂಡಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಬುಮ್ರಾ ಬ್ಯಾಟಿಂಗ್‌ 7 ರನ್‌ಗಳಿಗೆ ಸೀಮಿತವಾಯಿತು.

Ind vs SA: ಅರ್ಧಶತಕ ಬಾರಿಸಿದ ಪೂಜಾರ, ರಹಾನೆ, ರೋಚಕಘಟ್ಟದತ್ತ 2ನೇ ಟೆಸ್ಟ್..!

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಬ್ಯಾಟಿಂಗ್ ನಡೆಸಿದ ಹನುಮ ವಿಹಾರಿ (Hanuma Vihari) ದಕ್ಷಿಣ ಆಫ್ರಿಕಾ ಬೌಲರ್‌ಗಳೆದುರು ದಿಟ್ಟ ಪ್ರತಿರೋಧ ತೋರಿದರು. ಒಟ್ಟು 84 ಎಸೆತಗಳನ್ನು ಎದುರಿಸಿದ ಹನುಮ ವಿಹಾರಿ 6 ಬೌಂಡರಿ ಸಹಿತ 40 ರನ್‌ ಬಾರಿಸಿ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರ್
ಭಾರತ: 202/10
ಕೆ.ಎಲ್. ರಾಹುಲ್: 50
ರವಿಚಂದ್ರನ್ ಅಶ್ವಿನ್‌: 46
ಮಾರ್ಕೊ ಜಾನ್ಸನ್‌: 31/4

ದಕ್ಷಿಣ ಆಫ್ರಿಕಾ:229/10
ಕೀಗನ್ ಪೀಟರ್‌ಸನ್‌: 62
ತೆಂಬ ಬವುಮಾ: 51
ಶಾರ್ದೂಲ್ ಠಾಕೂರ್: 61/7

ಭಾರತ: 266/10
ಅಜಿಂಕ್ಯ ರಹಾನೆ: 58
ಚೇತೇಶ್ವರ್ ಪೂಜಾರ: 53
ಲುಂಗಿ ಎಂಗಿಡಿ: 43/3

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?