IND vs SA T20 ಭಾರತದ ಕ್ವೀನ್ ಸ್ವೀಪ್ ಸರಣಿ ಗೆಲುವಿಗೆ ರೋಸೋ ಬ್ರೇಕ್, ಅಂತಿಮ ಪಂದ್ಯದಲ್ಲಿ ಸೋಲಿನ ಶಾಕ್!

Published : Oct 04, 2022, 10:43 PM ISTUpdated : Oct 04, 2022, 11:56 PM IST
IND vs SA T20  ಭಾರತದ ಕ್ವೀನ್ ಸ್ವೀಪ್ ಸರಣಿ ಗೆಲುವಿಗೆ ರೋಸೋ ಬ್ರೇಕ್, ಅಂತಿಮ ಪಂದ್ಯದಲ್ಲಿ ಸೋಲಿನ ಶಾಕ್!

ಸಾರಾಂಶ

ಸೌತ್ ಆಫ್ರಿಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಸೌತ್ ಆಫ್ರಿಕಾ ಸಿಡಿಸಿದ ಬೃಹತ್ ಮೊತ್ತ ಚೇಸ್ ಮಾಡಲು ಟೀಂ ಇಂಡಿಯಾ ವಿಫಲವಾಗಿದೆ. ಇದರೊಂದಿಗೆ ರೋಹಿತ್ ಸೈನ್ಯ 2-1 ಅಂತರದಲ್ಲಿ ಸರಣಿ ತನ್ನದಾಗಿಸಿದೆ. 

ಇಂದೋರ್(ಅ.04):  ಸೌತ್ ಆಫ್ರಿಕಾ ಬ್ಯಾಟ್ಸ್‌ಮನ್ ರಿಲೋ ರೋಸೋ ಶತಕದ ಅಬ್ಬರಕ್ಕೆ ಟೀಂ ಇಂಡಿಯಾ ಲೆಕ್ಕಾಚಾರ ಉಲ್ಟಾ ಆಗಿದೆ. ಸೌತ್ ಆಫ್ರಿಕಾ ನೀಡಿದ 228ರನ್ ಬೃಹತ್ ಮೊತ್ತ ಚೇಸ್ ಮಾಡಲು ಟೀಂ ಇಂಡಿಯಾ ಹರಸಾಹಸ ಪಟ್ಟಿತು. ದಿನೇಶ್ ಕಾರ್ತಿಕ್, ದೀಪಕ್ ಚಹಾರ್ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಟೀಂ ಇಂಡಿಯಾ 18.3 ಓವರ್‌ಗಳಲ್ಲಿ 178 ರನ್ ಸಿಡಿಸಿ ಆಲೌಟ್ ಆಯಿತು. ಇದರೊಂದಿಗೆ ಸೌತ್ ಆಫ್ರಿಕಾ 49 ರನ್ ಗೆಲುವು ದಾಖಲಿಸಿತು. ಅಂತಿಮ ಟಿ20 ಪಂದ್ಯ ಗೆದ್ದು ಟಿ20 ಸರಣಿ ಕ್ಲೀನ್ ಸ್ಪೀಪ್ ಗುರಿ ಹೊಂದಿದ್ದ ಟೀಂ ಇಂಡಿಯಾ ಇದೀಗ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.  

ರಿಲೋ ರೋಸೋ ಸೆಂಚುರಿಯಿಂದ ಸೌತ್ ಆಫ್ರಿಕಾ 228 ರನ್ ಟಾರ್ಗೆಟ್ ಪಡೆದಿತ್ತು. ಇಂದೋರ್‌ನ ಹೋಲ್ಕರ್ ಕ್ರೀಡಾಂಗಣ ಹೈಸ್ಕೋರಿಂಗ್ ಗೇಮ್ ಮೈದಾನ. ಹೀಗಾಗಿ ಟೀಂ ಇಂಡಿಯಾ ಕೂಡ ಅದೇ ಸ್ಫೋಟಕ ಬ್ಯಾಟಿಂಗ್ ಮಾಡುವ ವಿಶ್ವಾಸದಲ್ಲಿತ್ತು. ಇತ್ತ ಅಭಿಮಾನಿಗಳು ಮತ್ತೊಂದು ಹೊಡಿ ಆಡಿ ಆಟಕ್ಕೆ ಸಜ್ಜಾಗಿದ್ದರು. ಆದರೆ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಒಂದರ ಮೇಲೊಂದರಂತೆ ಆಘಾತ ಅನುಭವಿಸಿತು. ಖಾತೆ ತೆರೆಯುವ ಮುನ್ನವೇ ನಾಯಕ ರೋಹಿತ್ ಶರ್ಮಾ ವಿಕೆಟ್ ಪತನಗೊಂಡಿತು. ಶ್ರೇಯಸ್ ಅಯ್ಯರ್ 1 ರನ್ ಸಿಡಿಸಿ ನಿರ್ಗಮಿಸಿದರು. 

ಬೆಂಗಳೂರಿನ ಗಲ್ಲಿ ಕ್ರಿಕೆಟ್‌ಗೆ ಸಂಸ್ಕೃತದಲ್ಲಿ ಕಮೆಂಟರಿ, ಸಂಚಲನ ಸೃಷ್ಟಿಸಿದ ವೈರಲ್ ವಿಡಿಯೋ!

ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಜೊತೆಯಾಟ ಟೀಂ ಇಂಡಿಯಾಗೆ ಚೇತರಿಕೆ ನೀಡಿತು. ಆದರೆ ಪಂತ್ ಅಬ್ಬರ 27 ರನ್ ಸಿಡಿಸಿ ಔಟಾದರು. ಕಾರ್ತಿಕ್ ಹೋರಾಟ ಮುಂದುವರಿಸಿದರು. ಆದರೆ ಕಾರ್ತಿಕ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ದಿನೇಶ್ ಕಾರ್ತಿಕ್ 21 ಎಸೆತದಲ್ಲಿ 31 46 ರನ್ ಸಿಡಿಸಿ ಔಟಾದರು. ಸೂರ್ಯಕುಮಾರ್ ಯಾದವ್ 8 ರನ್ ಸಿಡಿಸಿ ಔಟಾದರು. ಹರ್ಷಲ್ ಪಟೇಲ್ 17 ರನ್ ಸಿಡಿಸಿ ಔಟಾದರು. ಆರ್ ಅಶ್ವಿನ್ 2 ರನ್ ಸಿಡಿಸಿ ನಿರ್ಗಮಿಸಿದರು.

ಅಂತಿಮ ಹಂತದಲ್ಲಿ ದೀಪಕ್ ಚಹಾರ್ ಹೋರಾಟ ನಡೆಸಿದರು. ಚಹಾರ್ 17 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು. ಉಮೇಶ್ ಯಾದವ್ ಅಜೇಯ 20 ರನ್ ಸಿಡಿಸಿದರು ಮೊಹಮ್ಮದ್ ಸಿರಾಜ್ 5 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ  178 ರನ್ ಸಿಡಿಸಿ ಆಲೌಟ್ ಆಯಿತು. ಆರಂಭಿಕ 2 ಪಂದ್ಯ ಸೋತ ಸೌತ್ ಆಫ್ರಿಕಾ ಕೊನೆಯ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿತು.

2023ರ ಮಹಿಳಾ ಟಿ20 ವಿಶ್ವಕಪ್‌: ಫೆ.12ಕ್ಕೆ ಭಾರತ-ಪಾಕ್‌ ಪಂದ್ಯ

ದುಬೈ: ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ತನ್ನ ಅಭಿಯಾನವನ್ನು ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ಆರಂಭಿಸಲಿದೆ. ಪಂದ್ಯ ಫೆ.12ರಂದು ಕೇಪ್‌ಟೌನ್‌ನಲ್ಲಿ ನಡೆಯಲಿದೆ ಎಂದು ಸೋಮವಾರ ಐಸಿಸಿ ಪ್ರಕಟಿಸಿದೆ. ಗುಂಪು 2ರಲ್ಲಿ ಇಂಗ್ಲೆಂಡ್‌, ವೆಸ್ಟ್‌ಇಂಡೀಸ್‌, ಪಾಕಿಸ್ತಾನ ಹಾಗೂ ಐರ್ಲೆಂಡ್‌ ತಂಡಗಳ ಜೊತೆ ಭಾರತ ಸ್ಥಾನ ಪಡೆದಿದೆ. ಫೆ.10ರಿಂದ 26ರ ವರೆಗೂ ಪಂದ್ಯಾವಳಿ ನಡೆಯಲಿದೆ. ಭಾರತ ತನ್ನ 2ನೇ ಪಂದ್ಯವನ್ನು ಫೆ.15ರಂದು ವಿಂಡೀಸ್‌ ವಿರುದ್ಧ ಆಡಲಿದೆ. ಬಳಿಕ ಫೆ.18ರಂದು ಇಂಗ್ಲೆಂಡ್‌, ಫೆ.20ರಂದು ಐರ್ಲೆಂಡ್‌ ತಂಡಗಳನ್ನು ಎದುರಿಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!