ಕ್ರಿಕೆಟ್ ರೋಚಕತೆ ಹೆಚ್ಚಿಸುವುದು ಕಮೆಂಟರಿ. ಇದೀಗ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳ ಕ್ರಿಕೆಟ್ ಕಮೆಂಟರಿ ಲಭ್ಯವಿದೆ. ಆದರೆ ಸಂಸ್ಕೃತದಲ್ಲಿ ಕಮೆಂಟರಿ ಕೇಳಿದ್ದೀರಾ? ಇಂಗ್ಲೀಷ್ ಕಮೆಂಟರಿಗಿಂತ ಅತ್ಯುತ್ತಮ ವೀಕ್ಷಕ ವಿವರಣೆ ದೇವ ಭಾಷೆಯಲ್ಲಿ ನೀಡಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು(ಅ.04): ಕ್ರಿಕೆಟ್‌ಗೆ ಜೀವ ನೀಡುವುದೇ ಕಮೆಂಟೇಟರಿ. ಮೊದಲು ಇಂಗ್ಲೀಷ್ ಭಾಷೆಯಲ್ಲ ಮಾತ್ರ ಲಭ್ಯವಿದ್ದ ಕಮೆಂಟರಿ ಬಳಿಕ ಹಿಂದಿ ಭಾಷೆಯಲ್ಲೂ ಲಭ್ಯವಾಯಿತು. ಇದೀಗ ಕನ್ನಡ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ ಲಭ್ಯವಿದೆ. ಆದರೆ ಇದೀಗ ದೇವ ಭಾಷೆ ಎಂದೇ ಗುರುತಿಸಿಕೊಂಡಿರುವ ಸಂಸ್ಕೃತದಲ್ಲಿ ಸುಲಲಿತ ಕ್ರಿಕೆಟ್ ಕಮೆಂಟರಿ ಭಾರಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ನಡೆದ ಗಲ್ಲಿ ಕ್ರಿಕೆಟ್ ಪಂದ್ಯದ ವಿಡಿಯೋ ತುಣುಕು ಹೊಸ ಸಂಚಲನ ಸೃಷ್ಟಿಸಿದೆ. ಸಂಸ್ಕೃತ ಭಾಷೆಯಲ್ಲಿ ಕಮೆಂಟರಿ ನೀಡಲಾಗಿದೆ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಈ ರೀತಿಯ ಕ್ರಿಕೆಟ್ ಕಾಣಬಹುದು. ಆದರೆ ಈ ಕ್ರಿಕೆಟ್ ವಿಡಿಯೋಗೆ ಹೊಸ ಮೆರುಗು ನೀಡಿದ್ದೆ ಸಂಸ್ಕೃತ ಭಾಷೆಯ ಕಮೆಂಟರಿ.
ಮನೆಯ ವಠಾರದಲ್ಲಿನ ಸಣ್ಣ ಜಾಗದಲ್ಲಿ ಆಡುತ್ತಿರುವ ಈ ಕ್ರಿಕೆಟ್ ರೋಚಕತೆಯನ್ನು ಸಂಸ್ಕೃತ ಭಾಷೆಯ ಕಮೆಂಟರಿ ಹೆಚ್ಚಿಸಿದೆ. ಬ್ಯಾಟಿಂಗ್, ರನೌಟ್ ಸಾಧ್ಯತೆ, ಅಭಿಮಾನಿಗಳ ಪ್ರತಿಕ್ರಿಯೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ಸಂಸ್ಕೃತದಲ್ಲಿ ವಿವರಿಸಲಾಗಿದೆ. ಸಂಸ್ಕೃತ ಅರ್ಥಮಾಡಿಕೊಳ್ಳುವುದು ಕಷ್ಟ ಅನ್ನೋ ಮಾತಿದೆ. ಆದರೆ ಎಲ್ಲಾ ಭಾಷೆಯ ಮೂಲ ಸಂಸ್ಕೃತವಾಗಿರುವ ಕಾರಣ ಈ ಕಮೆಂಟರಿ ಸುಲಭವಾಗಿ ಅರ್ಥವಾಗಲಿದೆ.
ಸಂಸ್ಕೃತ ಕಲಿಯೋಕೆ Chikkamagaluru ಗೆ ಬಂದ ಇಸ್ರೇಲ್ ತಂಡ
ಸಂಸ್ಕೃತ ಈ ವಿಶ್ವದ ಅತ್ಯಂತ ಪುರಾತನ ಭಾಷೆ. ರಿಗ್ವೇದಗಳು ಸಂಸ್ಕತದಲ್ಲೇ ರಚಿತವಾಗಿದೆ. 400 BCE ಹಾಗೂ 200 BCE ನಡುವೆ ರಚಿತವಾದ ಭಗವತ್ ಗೀತೆ ಕೂಡ ಸಂಸ್ಕೃದಲ್ಲಿ ರಚಿತವಾಗಿದೆ. 1500 BCE ಹಾಗೂ 1200 BCE ರಚಿವಾದ ರಿಗ್ವೇದ ಸಂಸ್ಕತದಲ್ಲಿದೆ. ಆದರೆ ಸದ್ಯ ಸಂಸ್ಕೃತ ಅಳಿವಿನಂಚಿನಲ್ಲಿರುವ ಭಾಷೆ. ಸಂಸ್ಕೃತ ಭಾಷೆ ಯಾವ ರಾಜ್ಯದಲ್ಲಿ ಮಾತನಾಡುವ ಭಾಷೆಯಾಗಿ ಉಳಿದಿಲ್ಲ. ಆದರೆ ಕರ್ನಾಟದ ಶಿವಮೊಗ್ಗ ಜಿಲ್ಲೆಯಲ್ಲಿರುವ ಮತ್ತೂರು ಗ್ರಾಮ ಸಂಪೂರ್ಣವಾಗಿ ಸಂಸ್ಕೃತ ಮಾತನಾಡುತ್ತಿದೆ. ಸಂಸ್ಕೃತದಲ್ಲಿ ಮಾತನಾಡುವ ಭಾರತದ ಏಕೈಕ ಗ್ರಾಮ ಇದಾಗಿದೆ.
2000 ವರ್ಷ ಬಳಿಕವೂ ಚೀನಾದಲ್ಲಿ ಸಂಸ್ಕೃತ ಜನಪ್ರಿಯ: ಚೀನೀ ಪಂಡಿತ
ಭಾರತದ ಪುರಾತನ ಭಾಷೆ ಸಂಸ್ಕೃತ ಚೀನಾಗೆ ಬಂದು ಬರೋಬ್ಬರಿ 2000 ವರ್ಷಗಳು ಗತಿಸಿದರೂ ದೇಶದಲ್ಲಿ ಸಂಸ್ಕೃತ ಭಾಷೆ ಇನ್ನೂ ಜನಪ್ರಿಯವಾಗಿದೆ. ಚೀನಾ ಪ್ರಭುತ್ವ ಮತ್ತು ವಿದ್ವಾಂಸರ ಮೇಲೆ ಶತಮಾನಗಳಿಂದಲೂ ಪ್ರಭಾವ ಬೀರಿದೆ ಎಂದು ಇಲ್ಲಿನ ಪ್ರಸಿದ್ಧ ಪ್ರಾಧ್ಯಾಪಕ ವಾಂಗ್ ಬಾಂಗ್ವೈ ಅವರು ಅಭಿಪ್ರಾಯಪಟ್ಟಿದ್ದಾರೆ. ಬಾಂಬ್ವೈ ಅವರು ಚೀನಾ ಜನಪ್ರಿಯ ಸಂಸ್ಕೃತ ವಿದ್ವಾಂಸರೂ ಹೌದು. ತಾವಿರುವ ಪೇಕಿಂಗ್ ವಿಶ್ವವಿದ್ಯಾಲಯವು ಸಂಸ್ಕೃತವನ್ನು ಪಠ್ಯವಾಗಿ ಆರಂಭಿಸಿ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಚೀನಾಕ್ಕೆ ಸಂಸ್ಕೃತ ಭಾಷೆ ಪರಿಚಯಿಸಿದ ಕ್ರಿ.ಪೂ 4ನೇ ಶತಮಾನದ ಭಾರತೀಯ ವಿದ್ವಾಂಸ ಕಾಮರಾಜೀವ ಅವರಿಗೆ ಧನ್ಯವಾದ ಅರ್ಪಿಸಿದರು.2000 ವರ್ಷಗಳ ಹಿಂದೆ ಕಾಶ್ಮೀರದ ಕಾಮರಾಜೀವ ಅವರು ಬೌದ್ಧ ಸೂತ್ರಗಳನ್ನು ಚೀನೀ ಭಾಷೆಗೆ ಭಾಷಾಂತರಿಸಿದ್ದರು. ಇದಾದ ನಂತರದಲ್ಲಿ ಚೀನಾದ ಬೌದ್ಧ ಭಿಕ್ಷುಕರು ಭಾರತದ ಪುಸ್ತಕಗಳನ್ನು ಚೀನಾ ಭಾಷೆಗೆ ಭಾಷಾಂತರಿಸಲು ಆರಂಭಿಸಿದರು. ಅಲ್ಲಿಂದ ಚೀನಾದಲ್ಲಿ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನೆ ಆರಂಭವಾಯಿತು.
ಈ ಏರ್‌ಪೋರ್ಟ್‌ನಲ್ಲಿ ನೀವಿನ್ನು ಸಂಸ್ಕೃತದಲ್ಲೂ ಅನೌನ್ಸ್‌ಮೆಂಟ್ ಕೇಳ್ಬಹುದು