Ind vs SA ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಚಾಲೆಂಜ್‌

By Kannadaprabha NewsFirst Published Oct 6, 2022, 10:51 AM IST
Highlights

* ಭಾರತ-ದಕ್ಷಿಣ ಆಫ್ರಿಕಾ ನಡುವಿನ ನಡುವಿನ 3 ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭ
* ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾದಲ್ಲಿ ಯುವ ಪಡೆಯದ್ದೇ ಕಾರುಬಾರು
* ಲಖನೌದಲ್ಲಿ ನಡೆಯಲಿದೆ ಇಂಡೋ-ಆಫ್ರಿಕಾ ಒನ್‌ಡೇ ಕದನ

ಲಖನೌ(ಅ.06): ಟಿ20 ವಿಶ್ವಕಪ್‌ನಲ್ಲಿ ಆಡಲು ಗುರುವಾರ ಒಂದು ತಂಡ ಹೊರಡಲಿದ್ದು, ಮತ್ತೊಂದು ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಏಕದಿನ ಸರಣಿಯನ್ನು ಆರಂಭಿಸಲಿದೆ. ಶಿಖರ್‌ ಧವನ್‌ ನೇತೃತ್ವದ, ಬಹುತೇಕ ಯುವ ಆಟಗಾರರೇ ಇರುವ ತಂಡವು 3 ಪಂದ್ಯಗಳ ಸರಣಿಯನ್ನು ಆಡಲಿದ್ದು ಮೊದಲ ಪಂದ್ಯ ಲಖನೌನಲ್ಲಿ ನಡೆಯಲಿದೆ.

ಮುಂದಿನ ವರ್ಷ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿರುವ ಯುವ ಆಟಗಾರರು ಆಯ್ಕೆಗಾರರ ಗಮನ ಸೆಳೆಯಲು ಇದು ಉತ್ತಮ ಅವಕಾಶವೆನಿಸಿದೆ. ನಾಯಕತ್ವ ವಹಿಸಿರುವ ಶಿಖರ್‌ ಧವನ್‌ ಕೂಡ ವಿಶ್ವಕಪ್‌ ಮೇಲೆ ಕಣ್ಣಿಟ್ಟಿರುವುದಾಗಿ ಹೇಳಿಕೊಂಡಿದ್ದು, ಅವರ ಆಟದ ಮೇಲೂ ಆಯ್ಕೆಗಾರರ ಗಮನ ಹರಿಸಲಿದ್ದಾರೆ.

Latest Videos

ಬ್ಯಾಟರ್‌ ರಜತ್‌ ಪಾಟಿದಾರ್‌, ವೇಗಿ ಮುಕೇಖ್‌ ಕುಮಾರ್‌ ಇದೇ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾಗಿದ್ದು, ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಟಿ20 ವಿಶ್ವಕಪ್‌ ಮೀಸಲು ತಂಡದಲ್ಲಿರುವ ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌ ಹಾಗೂ ರವಿ ಬಿಷ್ಣೋಯ್‌ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದಾರೆ. ಧವನ್‌ ಜೊತೆ ಇನ್ನಿಂಗ್ಸ್ ಆರಂಭಿಸಲಿರುವ ಶುಭ್‌ಮನ್‌ ಗಿಲ್‌ ಇತ್ತೀಚೆಗೆ ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ನಲ್ಲಿ ಮಿಂಚಿದ್ದು, ಅದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದಾರೆ. ರಾಹುಲ್‌ ತ್ರಿಪಾಠಿ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ.

ICC T20 Rankings: ನಂ.1 ಸ್ಥಾನಕ್ಕೆ ಮತ್ತಷ್ಟು ಹತ್ತಿರವಾದ ಸೂರ್ಯಕುಮಾರ್ ಯಾದವ್..!

ಋುತುರಾಜ್‌ ಗಾಯಕ್ವಾಡ್‌, ಸಂಜು ಸ್ಯಾಮ್ಸನ್‌ ಹಾಗೂ ಇಶಾನ್‌ ಕಿಶನ್‌ ಸಿಕ್ಕಿರುವ ಅವಕಾಶ ಬಳಸಿಕೊಂಡು ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಕಾತರಿಸುತ್ತಿದ್ದಾರೆ. ಶಾರ್ದೂಲ್‌, ಚಹರ್‌, ಆವೇಶ್‌ ಖಾನ್‌, ಸಿರಾಜ್‌ ತಂಡದಲ್ಲಿರುವ ವೇಗಿಗಳು.

ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಅನುಭವಿ ಡಿ ಕಾಕ್‌, ಬವುಮಾ, ಮಾರ್ಕ್ರಮ್‌, ಮಿಲ್ಲರ್‌, ರಬಾಡ, ಎನ್‌ಗಿಡಿಯಂತಹ ಆಟಗಾರರನ್ನು ಹೊಂದಿದೆ. ತಂಡದಲ್ಲಿ ಬಹುತೇಕರು ಸರಣಿ ಮುಗಿಸಿ ಟಿ20 ವಿಶ್ವಕಪ್‌ಗೆ ತೆರಳಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ವರ್ಷದ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಸೂಪರ್‌ ಲೀಗ್‌ ಅಂಕಗಳನ್ನು ಗಳಿಸಲು ದ.ಆಫ್ರಿಕಾಕ್ಕಿದು ಉತ್ತಮ ಅವಕಾಶವೆನಿಸಿದೆ.

ಸಂಭವನೀಯರ ಪಟ್ಟಿ

ಭಾರತ: ಶಿಖರ್‌ ಧವನ್‌(ನಾಯಕ), ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ರಾಹುಲ್ ತ್ರಿಪಾಠಿ/ರಜತ್ ಪಾಟಿದಾರ್‌, ಶಾರ್ದೂಲ್‌ ಠಾಕೂರ್, ದೀಪಕ್‌ ಚಹರ್‌, ಕುಲ್ದೀಪ್‌ ಯಾದವ್, ರವಿ ಬಿಷ್ಣೋಯ್‌, ಮೊಹಮ್ಮದ್ ಸಿರಾಜ್‌.

ದ.ಆಫ್ರಿಕಾ: ಕ್ವಿಂಟನ್ ಡಿ ಕಾಕ್‌, ಡೇವಿಡ್ ಮಲಾನ್‌, ತೆಂಬಾ ಬವುಮಾ(ನಾಯಕ), ಏಯ್ಡನ್ ಮಾರ್ಕ್ರಮ್‌, ಹೆನ್ರಿಚ್ ಕ್ಲಾಸೆನ್‌, ಡೇವಿಡ್ ಮಿಲ್ಲರ್‌, ಡ್ವೇನ್ ಪ್ರಿಟೋರಿಯಸ್‌, ಕೇಶವ್ ಮಹಾರಾಜ್‌, ಮಾರ್ಕೊ ಯಾನ್ಸನ್‌, ಲುಂಗಿ ಎನ್‌ಗಿಡಿ, ಕಗಿಸೋ ರಬಾಡ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!