Ind vs SA ಅವಕಾಶ ಸಿಕ್ಕಾಗ ನಾನೇನು ಎನ್ನುವುದನ್ನು ಸಾಬೀತು ಮಾಡುತ್ತೇನೆಂದ ಇಶಾನ್ ಕಿಶನ್

Published : Jun 11, 2022, 01:21 PM ISTUpdated : Jun 11, 2022, 01:22 PM IST
Ind vs SA ಅವಕಾಶ ಸಿಕ್ಕಾಗ ನಾನೇನು ಎನ್ನುವುದನ್ನು ಸಾಬೀತು ಮಾಡುತ್ತೇನೆಂದ ಇಶಾನ್ ಕಿಶನ್

ಸಾರಾಂಶ

* ದಕ್ಷಿಣ ಆಫ್ರಿಕಾ ಎದುರು ಮೊದಲ ಟಿ20 ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕಿಶನ್ * ರೋಹಿತ್-ರಾಹುಲ್ ತಂಡದಲ್ಲಿದ್ದಾಗ ನಾನು ಸ್ಥಾನ ಕೇಳೊಲ್ಲವೆಂದ ಇಶಾನ್ ಕಿಶನ್ * ರಾಹುಲ್-ರೋಹಿತ್ ಅನುಪಸ್ಥಿತಿಯಲ್ಲಿ ಮಿಂಚುತ್ತಿರುವ ಎಡಗೈ ಬ್ಯಾಟರ್  

ನವದೆಹಲಿ(ಜೂ.11): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು 1-0 ಅಂತರದ ಮುನ್ನಡೆ ಸಾಧಿಸಿದೆ. ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಎಡಗೈ ಬ್ಯಾಟರ್‌ ಇಶಾನ್ ಕಿಶನ್ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದರು.

ಮೊದಲ ಟಿ20 ಪಂದ್ಯದಲ್ಲಿ ಹಂಗಾಮಿ ನಾಯಕ ರಿಷಭ್ ಪಂತ್ (Rishabh Pant) ನೇತೃತ್ವದ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತಾದರೂ, ಡೇವಿಡ್ ಮಿಲ್ಲರ್, ರಾಸ್ಸಿ ವ್ಯಾನ್ ಡರ್‌ ಡುಸೇನ್ ಅವರ ಅಜೇಯ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದ್ದರೂ ಸಹಾ, ಸಾಕಷ್ಟು ಸಕಾತ್ಮಕ ಅಂಶಗಳು ಟೀಂ ಇಂಡಿಯಾಗೆ ಸಿಕ್ಕಿವೆ. ಈ ಪೈಕಿ ಜಾರ್ಖಂಡ್ ಮೂಲದ 23 ವರ್ಷದ ಇಶಾನ್ ಕಿಶನ್ (Ishan Kishan) ಅವರ ಪ್ರದರ್ಶನ ಕೂಡಾ ಒಂದು ಎನಿಸಿದೆ. ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಟ್ಟು 10 ಪಂದ್ಯಗಳನ್ನಾಡಿದ್ದರು. ಆದರೆ ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 120ರ ಆಸುಪಾಸಿನಲ್ಲಿತ್ತು. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಶಾನ್ ಕಿಶನ್ 400+ ರನ್ ಬಾರಿಸಿದ್ದರಾದರೂ, ಮುಂಬೈ ಇಂಡಿಯನ್ಸ್‌ (Mumbai Indians) ತಂಡವನ್ನು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್‌ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೆ ಮೊದಲ ಟಿ20 ಪಂದ್ಯದಲ್ಲಿ ಈ ಒತ್ತಡವನ್ನು ಸವಾಲಾಗಿ ಸ್ವೀಕರಿಸಿದ ಇಶಾನ್ ಕಿಶನ್‌, ಕೇವಲ 48 ಎಸೆತಗಳಲ್ಲಿ 76 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾಗೆ ಭರ್ಜರಿ ಆರಂಭ ಒದಗಿಸಿಕೊಟ್ಟಿದ್ದರು.  

ರೋಹಿತ್-ರಾಹುಲ್ ತಂಡದಲ್ಲಿದ್ದಾಗ ನಾನು ಸ್ಥಾನ ಕೇಳಲ್ಲ:

ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ರೋಹಿತ್ ಶರ್ಮಾ (Rohit Sharma) ಹಾಗೂ ಕೆ ಎಲ್ ರಾಹುಲ್ ಅಲಭ್ಯರಾಗಿದ್ದಾರೆ. ಹೀಗಾಗಿ ಮುಂದಿನ 4 ಪಂದ್ಯಗಳಲ್ಲೂ ಇಶಾನ್ ಕಿಶನ್ ಅವರೇ ಟೀಂ ಇಂಡಿಯಾ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ತಮ್ಮ ಸಾಮರ್ಥ್ಯವನ್ನು ಅನಾವರಣ ಮಾಡಲು ಇಶಾನ್ ಕಿಶನ್‌ಗೆ ಈ ಸರಣಿ ಸುವರ್ಣಾವಕಾಶ ಎನಿಸಿದೆ. ಆದರೆ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್, ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದರೆ ಇಶಾನ್ ಕಿಶನ್ ಕಥೆ ಏನು ಎನ್ನುವ ಪ್ರಶ್ನೆ ಉದ್ಭವಿಸಿದೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಟೀಂ ಇಂಡಿಯಾ ಮೊದಲ ಆಯ್ಕೆಯ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾದಲ್ಲಿ ಇಶಾನ್ ಕಿಶನ್ ಬೆಂಚ್ ಕಾಯಿಸಬೇಕಾಗುತ್ತದೆ. ಈ ಬಗ್ಗೆ ಮೊದಲ ಟಿ20 ಪಂದ್ಯ ಮುಕ್ತಾಯದ ಬಳಿಕ ಪ್ರಶ್ನೆ ಕೇಳಿದಾಗ ಇಶಾನ್ ಕಿಶನ್ ಸೊಗಸಾದ ಉತ್ತರ ನೀಡಿದ್ದಾರೆ.

IND vs SA ಕಿಲ್ಲರ್ ಮಿಲ್ಲರ್ ಆಟಕ್ಕೆ ಟೀಮ್ ಇಂಡಿಯಾ ಪಂಚರ್!

ನನ್ನ ಪ್ರಕಾರ ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಇಬ್ಬರು ವಿಶ್ವದರ್ಜೆಯ ಆಟಗಾರರಾಗಿದ್ದಾರೆ. ಅವರು ತಂಡದೊಳಗಿದ್ದಾಗ ನಾನು ನನ್ನ ಸ್ಥಾನವನ್ನು ಕೇಳುವುದಿಲ್ಲ. ಹೀಗಾಗಿ ಆ ಸಂದರ್ಭದಲ್ಲಿ ಪ್ರಾಕ್ಟೀಸ್ ಸೆಷನ್‌ನಲ್ಲಿ ಒಳ್ಳೆಯ ರೀತಿಯಲ್ಲಿ ಅಭ್ಯಾಸ ನಡೆಸುತ್ತೇನೆ ಹಾಗೂ ಯಾವಾಗೆಲ್ಲ ನನಗೆ ಆಡಲು ಅವಕಾಶ ಸಿಗುತ್ತದೋ ಆಗ ನಾನು ಏನು ಎನ್ನುವುದನ್ನು ಸಾಬೀತು ಮಾಡುತ್ತೇನೆ ಅಥವಾ ತಂಡಕ್ಕೆ ನೆರವಾಗುವಂತಹ ಪ್ರದರ್ಶನ ತೋರುತ್ತೇನೆ. ಹೀಗಾಗಿ ನನ್ನ ಗಮನವೇನಿದ್ದರೂ ನನ್ನನ್ನು ಉತ್ತಮಪಡಿಸಿಕೊಳ್ಳುವತ್ತ ಇರಲಿದೆ ಎಂದು ಇಶಾನ್ ಕಿಶನ್ ಹೇಳಿದ್ದಾರೆ.

ಆಯ್ಕೆಗಾರರು, ಕೋಚ್‌ಗಳು ಏನಾದರೂ ತೀರ್ಮಾನಿಸಲಿ ಅದರೆ ನಾನು ಸದಾ ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸುತ್ತೇನೆ. ಯಾವಾಗ ನನಗೆ ಆಡುವ ಅವಕಾಶ ದೊರೆಯುತ್ತದೆಯೋ ಆಗ ನನ್ನಿಂದ ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸುತ್ತೇನೆ ಎಂದು ಇಶಾನ್ ಕಿಶನ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?