Ind vs SA 3rd T20I: ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಗುರಿ

Published : Dec 14, 2023, 11:28 AM IST
Ind vs SA 3rd T20I: ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಗುರಿ

ಸಾರಾಂಶ

ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿಯಂತಹ ಅನುಭವಿಗಳನ್ನೇ ಹೆಚ್ಚು ನೆಚ್ಚಿಕೊಳ್ಳದೆ 2024ರ ಜೂನ್‌ನಲ್ಲಿ ವೆಸ್ಟ್‌ಇಂಡೀಸ್‌ ಹಾಗೂ ಅಮೆರಿಕದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಯುವ ವೇಗದ ಬೌಲಿಂಗ್‌ ಪಡೆಯನ್ನು ಸಿದ್ಧಪಡಿಸಲು ಟೀಂ ಇಂಡಿಯಾದ ಆಡಳಿತ ಪ್ರಯತ್ನಿಸುತ್ತಿದ್ದು, ಆ ಪ್ರಯತ್ನ ಸದ್ಯಕ್ಕೆ ಫಲ ನೀಡುವಂತೆ ಕಾಣುತ್ತಿಲ್ಲ.

ಜೋಹಾನ್ಸ್‌ಬರ್ಗ್‌(ಡಿ.14): 2024ರ ಟಿ20 ವಿಶ್ವಕಪ್‌ಗೆ ಹೆಚ್ಚು ಸಮಯ ಉಳಿದಿಲ್ಲವಾದ್ದರಿಂದ ಭಾರತ ತಂಡ ಆಡುವ ಪ್ರತಿ ಪಂದ್ಯವೂ ಮಹತ್ವದ್ದೇ ಆಗಿರಲಿದೆ. ದ.ಆಫ್ರಿಕಾ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯ ಗುರುವಾರ ನಡೆಯಲಿದ್ದು, 0-1ರಿಂದ ಹಿಂದಿರುವ ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಒತ್ತಡದ ಜೊತೆಗೆ ವಿಶ್ವಕಪ್‌ ಸಿದ್ಧತೆಗೆ ಸಿಕ್ಕಿರುವ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಮತ್ತೊಂದು ಕಡೆ.

ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿಯಂತಹ ಅನುಭವಿಗಳನ್ನೇ ಹೆಚ್ಚು ನೆಚ್ಚಿಕೊಳ್ಳದೆ 2024ರ ಜೂನ್‌ನಲ್ಲಿ ವೆಸ್ಟ್‌ಇಂಡೀಸ್‌ ಹಾಗೂ ಅಮೆರಿಕದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಯುವ ವೇಗದ ಬೌಲಿಂಗ್‌ ಪಡೆಯನ್ನು ಸಿದ್ಧಪಡಿಸಲು ಟೀಂ ಇಂಡಿಯಾದ ಆಡಳಿತ ಪ್ರಯತ್ನಿಸುತ್ತಿದ್ದು, ಆ ಪ್ರಯತ್ನ ಸದ್ಯಕ್ಕೆ ಫಲ ನೀಡುವಂತೆ ಕಾಣುತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಪಂದ್ಯದಲ್ಲಿ ಅರ್ಶ್‌ದೀಪ್‌ ಸಿಂಗ್‌ ಹಾಗೂ ಮುಕೇಶ್‌ ಕುಮಾರ್‌ ದುಬಾರಿಯಾದರೂ ಎನ್ನುವುದಕ್ಕಿಂತ ಹೆಚ್ಚಾಗಿ ಇಬ್ಬರೂ ಯಾವುದೇ ಯೋಜನೆಗಳಿಲ್ಲದೆ ಬೌಲ್‌ ಮಾಡಿದ್ದು, ತಂಡದ ಆಡಳಿತಕ್ಕೆ ತಲೆಬಿಸಿ ತಂದಿರುವುದರಲ್ಲಿ ಅನುಮಾನವಿಲ್ಲ.

KCC ಕ್ರಿಕೆಟ್ ಟೂರ್ನಿಗೂ ಮುನ್ನ ಕಿಚ್ಚ ಸುದೀಪ್‌ಗೆ ಖಡಕ್ ವಾರ್ನಿಂಗ್ ಕೊಟ್ಟ ರಾಬಿನ್ ಉತ್ತಪ್ಪ..!

ಈ ಸರಣಿಗೂ ಮುನ್ನ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ 4-1ರಲ್ಲಿ ಜಯ ಸಾಧಿಸಿತ್ತಾದರೂ, ಭಾರತೀಯ ಬೌಲರ್‌ಗಳಿಂದ ಗುಣಮಟ್ಟದ ಪ್ರದರ್ಶನ ಮೂಡಿಬರಲಿಲ್ಲ. ಬೆಂಗಳೂರಲ್ಲಿ ನಡೆದಿದ್ದ 5ನೇ ಪಂದ್ಯದಲ್ಲಿ ಅರ್ಶ್‌ದೀಪ್‌ ಆಕರ್ಷಕ ಕೊನೆ ಓವರ್‌ ಬೌಲ್‌ ಮಾಡಿದ್ದನ್ನು ಹೊರತುಪಡಿಸಿದರೆ, ಸರಣಿಯಲ್ಲಿ ಅವರಾಡಿದ 4 ಪಂದ್ಯಗಳಲ್ಲಿ 10.68ರ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದರು. ಮುಕೇಶ್‌ ತಮ್ಮ ಬೌಲಿಂಗ್‌ ವೇಗವನ್ನು ಹೆಚ್ಚಿಸಿಕೊಂಡಿದ್ದರೂ, ನಿಯಂತ್ರಣ ಸಾಧಿಸುವಲ್ಲಿ ಎಡವುತ್ತಿದ್ದಾರೆ. ಆಸೀಸ್‌ ವಿರುದ್ಧ ಅವರೂ ಸಹ 9.12ರ ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದರು. ಮಂಗಳವಾರ ಗೆರ್ಬೆಹಾದಲ್ಲಿ ದ.ಆಫ್ರಿಕಾ ವಿರುದ್ಧ ನಡೆದ 2ನೇ ಟಿ20ಯಲ್ಲಿ ಈ ಇಬ್ಬರೂ ತಮ್ಮ ಕಳಪೆ ಬೌಲಿಂಗ್‌ ಮುಂದುವರಿಸಿದ್ದು, ಭಾರತದ ಸೋಲಿಗೆ ಪ್ರಮುಖ ಕಾರಣಗಳಲ್ಲೊಂದು. 1 ವರ್ಷ 4 ತಿಂಗಳ ಬಳಿಕ ಅಂ.ರಾ.ಟಿ20 ಪಂದ್ಯವನ್ನಾಡಿದ ರವೀಂದ್ರ ಜಡೇಜಾ ಸಹ ಪರಿಣಾಮಕಾರಿಯಾಗಲಿಲ್ಲ. ಈ ಪಂದ್ಯದಲ್ಲಿ ಮತ್ತೊಮ್ಮೆ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ರನ್ನು ಆಡಿಸುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

2ನೇ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ರನ್ನು ಹೊರಗಿಟ್ಟು ಆಡಿದ್ದ ಭಾರತ, ಈ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಆದರೆ ಶ್ರೇಯಸ್‌ಗಾಗಿ ಜಾಗ ಬಿಟ್ಟುಕೊಡುವವರು ಯಾರು ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಆರಂಭಿಕರಾದ ಶುಭ್‌ಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌ ಲಯಕ್ಕೆ ಮರಳಲು ಕಾಯುತ್ತಿದ್ದರೆ, ನಾಯಕ ಸೂರ್ಯಕುಮಾರ್‌ ಹಾಗೂ ರಿಂಕು ಸಿಂಗ್‌ ಲಯ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಸರಣಿ ಜಯದ ನಿರೀಕ್ಷೆಯಲ್ಲಿದ್ದು, ವಿಶ್ವಕಪ್‌ ಮುಂದಿರುವಾಗ ವಿಶ್ವ ನಂ.1 ತಂಡದ ವಿರುದ್ಧದ ಗೆಲುವು ಸಹಜವಾಗಿಯೇ ಹರಿಣ ಪಡೆಯ ಆತ್ಮವಿಶ್ವಾಸ ಹೆಚ್ಚಿಸಲಿದೆ.

ಪಂದ್ಯ ಆರಂಭ: ರಾತ್ರಿ 8.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?