IND vs SA 2nd Test ಟೀಕೆಗಳ ನಡುವೆ ಪೂಜಾರ, ರಹಾನೆ ಹೋರಾಟ, ಕುತೂಹಲ ಘಟ್ಟದಲ್ಲಿ 2ನೇ ಟೆಸ್ಟ್ ಪಂದ್ಯ!

By Suvarna NewsFirst Published Jan 4, 2022, 9:30 PM IST
Highlights
  • ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 2ನೇ ಟೆಸ್ಟ್
  • ಮೊದಲ ಇನ್ನಿಂಗ್ಸ್‌ನಲ್ಲಿ 229ರನ್‌ಗೆ ಸೌತ್ ಆಫ್ರಿಕಾ ಆಲೌಟ್
  • 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತದ 2 ವಿಕೆಟ್ ಪತನ

ಜೋಹಾನ್ಸ್‌ಬರ್ಗ್(ಜ.04): ಭಾರತ(Team India) ಹಾಗೂ ಸೌತ್ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ(IND vs SA 2nd test) ಕುತೂಹಲ ಘಟಕ್ಕೆ ತಲುಪಿದೆ. ಕಾರಣ ಕೇವಲ 2ನೇ ದಿನಕ್ಕೆ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ ಮುಗಿಸಿದ್ದರೆ, ಭಾರತ 2ನೇ ಇನ್ನಿಂಗ್ಸ್ ಆಡುತ್ತಿದೆ. 2ನೇ ದಿನದಾಟದಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 85 ರನ್ ಸಿಡಿಸಿದೆ. ಮೂಲಕ 58 ರನ್ ಮುನ್ನಡೆಯಲ್ಲಿದೆ. ಇದೀಗ 3ನೇ ದಿನದಾಟದಲ್ಲಿ ಉತ್ತಮ ಮೊತ್ತ ಪೇರಿಸಿ ಸೌತ್ ಆಫ್ರಿಕಾಗೆ(South Africa) ಬೃಹತ್ ಟಾರ್ಗೆಟ್ ನೀಡಲು ಸಜ್ಜಾಗಿದೆ.

ದ್ವಿತೀಯ ದಿನದಾಟದಲ್ಲಿ(2nd Day) ಸೌತ್ ಆಫ್ರಿಕಾ ತಂಡವನ್ನು ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಕೀನ್ ಪೀಟರ್ಸನ್, ತೆಂಬಾ ಬುವುಮಾ ಸೇರಿದಂತೆ ಹರಿಣಗಳ ಹೋರಾಟದಿಂದ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 27 ರನ್ ಮುನ್ನಡೆ ಪಡೆದುಕೊಂಡಿತು. 

Latest Videos

COVID Threat For Ranji Trophy: ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಕೊರೋನಾಘಾತ..!

ಕೀಗನ್ ಪೀಟರ್ಸ್ ದಿಟ್ಟ ಹೋರಾಟ ನೀಡಿ 67 ರನ್ ಸಿಡಿಸಿದರೆ, ತೆಂಬಾ ಬವುಮಾ 51 ರನ್ ಸಿಡಿಸಿ ಔಟಾದರು. ಇನ್ನು ಕೈಲ್ ವೈರ್ಯಾನ್ 21 ರನ್ ಕಾಣಿಕೆ ನೀಡಿದರು. ಇನ್ನು ಮಾರ್ಕೋ ಜಾನ್ಸೆನ್ 21 ರನ್ ಸಿಡಿಸಿ ಔಟಾದರು. ಕೇಶವ್ ಮಹಾರಾಜ್ 21 ರನ್ ಸಿಡಿಸಿ ಔಟಾದರು. ವಿಶೇಷ ಅಂದರೆ ಸೌತ್ ಆಫ್ರಿಕಾದ ಮೂವರು ಬ್ಯಾಟರ್ 21 ರನ್ ಸಿಡಿಸಿ ಔಟಾದರು. ಈ ಮೂಲಕ ಸೌತ್ ಆಫ್ರಿಕಾ 229 ರನ್‌ಗೆ ಆಲೌಟ್ ಆಯಿತು.

ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಅಬ್ಬರಿಸುವ ಸೂಚನೆ ನೀಡಿತ್ತು. ಆದರೆ ಶಾರ್ದೂಲ್ ಠಾಕೂರ್(shardul thakur) ಅವಕಾಶ ನೀಡಲಿಲ್ಲ. ಮಿಂಚಿನ ದಾಳಿ ಸಂಘಚಿಸಿದ ಶಾರ್ದೂಲ್ ಠಾಕೂರ್ ಸೌತ್ ಆಫ್ರಿಕಾಗೆ ಶಾಕ್ ಮೇಲೆ ಶಾಕ್ ನೀಡಿದರು. ಠಾಕೂರ್ ಸೌತ್ ಆಫ್ರಿಕಾದ ಪ್ರಮುಖ 7 ವಿಕೆಟ್ ಕಬಳಿಸಿ ಮಿಂಚಿದರು. ಠಾಕೂರ್ ಅಬ್ಬರದಿಂದ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಭಾರಿ ಲೀಡ್ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಶಾರ್ದೂಲ್ ಠಾಕೂರ್ 7 ವಿಕೆಟ್ ಕಳಬಿಸಿದರೆ, ಮೊಹಮ್ಮದ್ ಶಮಿ 2 ವಿಕೆಟ್ ಕಬಳಿಸಿದರು. ಇನ್ನು ಜಸ್ಪ್ರೀತ್ ಬುಮ್ರಾ 1 ವಿಕೆಟ್ ಕಬಳಿಸಿ ಮಿಂಚಿದರು. ಟೀಂ ಇಂಡಿಯಾ ವೇಗಿಗಳ ದಾಳಿಗೆ 10 ವಿಕೆಟ್ ಉರುಳಿಬಿತ್ತು. 

Ind vs SA, 2nd Test: ರಹಾನೆ-ಪೂಜಾರಗೆ ಗೇಟ್‌ಪಾಸ್ ಕೊಡಿ, ಯುವಕರಿಗೆ ಚಾನ್ಸ್‌ ನೀಡಿ ಎಂದ ಫ್ಯಾನ್ಸ್‌..!

ಸೌತ್ ಆಫ್ರಿಕಾ ತಂಡವನ್ನು ಆಲೌಟ್ ಮಾಡಿದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ಆರಂಭಿಸಿತು. ಆದರೆ ಆರಂಭದಲ್ಲೇ ಟೀಂ ಇಂಡಿಯಾ ಆಘಾತ ಅನುಭವಿಸಿತು. ನಾಯಕ ಕೆಎಲ್ ರಾಹುಲ್(KL Rahul) ಕೇವಲ 8 ರನ್ ಸಿಡಿಸಿ ಔಟಾದರು.  ಮತ್ತೊರ್ವ ಆರಂಭಿಕ ಮಯಾಂಕ್ ಅಗರ್ವಾಲ್ 23 ರನ್ ಸಿಡಿಸಿ ಔಟಾದರು. 44 ರನ್‌ಗಳಿಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡಿತು. 

ಸತತ ವೈಫಲ್ಯದಿಂದ ಭಾರಿ ಟೀಕೆ ಎದುರಿಸಿದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕ್ರೀಸ್‌ಗಿಳಿಯುತ್ತಿದ್ದಂತೆ ಅಭಿಮಾನಿಗಳ ಆತಂಕ ಹೆಚ್ಚಾಗಿತ್ತು. ಆದರೆ ಪೂಜಾರ ಹಾಗೂ ರಹಾನೆ ಹೋರಾಟ ಟೀಂ ಇಂಡಿಯಾವನ್ನು 2ನೇ ದಿನದ ಆಪತ್ತಿನಿಂದ ಪಾರುಮಾಡಿತು. ಇದೀಗ 3ನೇ ದಿನದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಬೇಕಿದೆ. 2ನೇ ದಿನದಾಟದ ಅಂತ್ಯದಲ್ಲಿ ಟೀಂ ಇಂಡಿಯಾ 2 ವಿಕಟ್ ನಷ್ಟಕ್ಕೆ 85 ರನ್ ಸಿಡಿಸಿದೆ. ಈ ಮೂಲಕ 58 ರನ್ ಮುನ್ನಡೆ ಪಡೆದುಕೊಂಡಿದೆ.

ಭಾರತ ಮೊದಲ ಇನ್ನಿಂಗ್ಸ್:
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 202 ರನ್‌ಗೆ ಆಲೌಟ್ ಆಗಿತ್ತು. ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಡೀಸೆಂಟ್ ಆರಂಭ ನೀಡಿದ್ದರು, ಕೆಎಲ್ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದರು. ನಾಯಕನಾದ ಮೊದಲ ಪಂದ್ಯದಲ್ಲಿ ಅರ್ಧಶತಕ ಕಾಣಿಕೆ ನೀಡಿದ್ದರು. ಮಯಾಂಕ್ 26 ರನ್ ಕಾಣಿಕೆ ನೀಡಿದ್ದರು. ಇನ್ನು ಹನುಮಾ ವಿಹಾರಿ 20 ರನ್ ಸಿಡಿಸಿದರು. ರಿಷಬ್ ಪಂತ್ 17 ರನ್ ಕಾಣಿಕೆ ನೀಡಿದರು. ಆದರೆ ಕುಸಿದ ತಂಡಕ್ಕೆ ಆರ್ ಅಶ್ವಿನ್ ಆಸರೆಯಾದರು. ಅಶ್ವಿನ್ 46 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಜಸ್ರ್ಪೀತ್ ಬುಮ್ರಾ ಅಜೇಯ 19 ರನ್ ಕಾಣಿಕೆ ನೀಡಿದರು. ಈ ಮೂಲಕ ಟೀಂ ಇಂಡಿಯಾ 202 ರನ್‌ಗೆ ಆಲೌಟ್ ಆಯಿತು.

click me!