IND vs SA ಮತ್ತೆ ಟಾಸ್ ಗೆದ್ದ ಸೌತ್ ಆಫ್ರಿಕಾ, 2 ಬದಲಾವಣೆ!

By Suvarna NewsFirst Published Jun 12, 2022, 6:38 PM IST
Highlights
  • ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 2ನೇ ಟಿ20
  • ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ
  • ಭಾರತ ತಂಡದಲ್ಲಿ ಬದಲಾವಣೆ ಇಲ್ಲ

ಕಟಕ್(ಜೂ.12): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯಕ್ಕೆ ಅಖಾಡ ಸಜ್ಜಾಗಿದೆ. ಟಾಸ್ ಗೆದ್ದ ಸೌತ್ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಸೌತ್ ಆಫ್ರಿಕಾದಲ್ಲಿ ತಂಡದಲ್ಲಿ ಎರಡು ಬದಲಾವಣೆ ಮಾಡಿದ್ದರೆ, ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡಿಲ್ಲ. ಕ್ವಿಂಟನ್ ಡಿಕಾಕ್ ಇಂಜುರಿಗೆ ತುತ್ತಾಗಿರುವ ಕಾರಣ ತಂಡದಿಂದ ಹೊರಗುಳಿದಿದ್ದಾರೆ. 

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್(ನಾಯಕ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಅವೇಶ್ ಖಾನ್

Latest Videos

ಟೂರ್ನಿಗೆ ಟೀಂ ಇಂಡಿಯಾ ಈ ವೇಗಿಯನ್ನು ಆಯ್ಕೆ ಮಾಡಬಾರದೆಂದ ರವಿಶಾಸ್ತ್ರಿ..!

ಸೌತ್ ಆಫ್ರಿಕಾ ಪ್ಲೇಯಿಂಗ್ 11
ತೆಂಬಾ ಬವುಮಾ(ನಾಯಕ), ರೀಜಾ ಹೆಂಡ್ರಿಕ್ಸ್, ರಸಿ ವಾಂಡರ್ ಡಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಡ್ವೇನ್ ಪ್ರೆಟ್ರೋರಿಯಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಕಾಗಿಸೋ ರಬಾಡ, ಅನ್ರಿಜ್ ನೋರ್ಜೆ

ಬ್ಯಾಟಿಂಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಹೊರತಾಗಿಯೂ ಕಳಪೆ ಬೌಲಿಂಗ್‌ನಿಂದಾಗಿ ಮೊದಲ ಟಿ20 ಪಂದ್ಯವನ್ನು ಕಳೆದುಕೊಂಡಿದ್ದ ಟೀಂ ಇಂಡಿಯಾ ಗೆಲುವಿನ ಲಯಕ್ಕೆ ಮರಳಲು ಕಾತರಿಸುತ್ತಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಸರಣಿಯ 2ನೇ ಪಂದ್ಯವನ್ನು ಭಾನುವಾರ ಆಡಲಿದೆ. ಈ ಪಂದ್ಯಕ್ಕೆ ಕಟಕ್‌ನ ಬಾರಬತಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ರೋಹಿತ್‌, ಕೊಹ್ಲಿ, ಬೂಮ್ರಾ, ಶಮಿ ಸೇರಿದಂತೆ ಹಿರಿಯ ಆಟಗಾರರ ಗೈರು, ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ಕೆ.ಎಲ್‌.ರಾಹುಲ್‌ ಗಾಯಗೊಂಡು ಹೊರಬಿದ್ದಿದ್ದು ರಿಷಬ್‌ ಪಂತ್‌ಗೆ ನಿಜವಾದ ಸವಾಲಾಗಿ ಪರಿಣಮಿಸಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಯುವ ಆಟಗಾರರೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೂ, ಯುವ ಬೌಲರ್‌ಗಳು ಕೈಕೊಟ್ಟಪರಿಣಾಮ ಮೊದಲ ಪಂದ್ಯದಲ್ಲಿ ಪರಾಭವಗೊಂಡಿತ್ತು.

ನಾನು ಮಾಡಿದ ತ್ಯಾಗ ಯಾರಿಗೂ ಗೊತ್ತಿಲ್ಲ..! ಕಮ್‌ಬ್ಯಾಕ್ ಸೀಕ್ರೇಟ್ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ

ಅನುಭವಿ ವೇಗಿ ಭುವನೇಶ್ವರ್‌, ಆವೇಶ್‌ ಖಾನ್‌, ಹರ್ಷಲ್‌ ಪಟೇಲ್‌ ದ.ಆಫ್ರಿಕಾ ಬ್ಯಾಟರ್‌ಗಳ ಎದುರು ಮಂಕಾದರು. ಹಾರ್ದಿಕ್‌ ಪಾಂಡ್ಯ ಒಂದು ಓವರ್‌ ಎಸೆದರಾದರೂ 18 ರನ್‌ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದರು. ಯಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌ ಕೂಡಾ ಸ್ಪಿನ್‌ ಮೋಡಿ ಮಾಡಲು ವಿಫಲರಾದರು. ಆವೇಶ್‌ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳು 10ಕ್ಕಿಂತ ಹೆಚ್ಚಿನ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದು ದ.ಆಫ್ರಿಕಾ ಬ್ಯಾಟರ್‌ಗಳ ಪ್ರಾಬಲ್ಯಕ್ಕೆ ಸಾಕ್ಷಿ. ಈ ಪಂದ್ಯದಲ್ಲಿ ಸುಧಾರಿತ ಬೌಲಿಂಗ್‌ ಪ್ರದರ್ಶನ ತೋರದಿದ್ದರೆ ಮತ್ತೊಂದು ಸೋಲು ಎದುರಾಗುವುದು ಖಚಿತ. ಹರ್ಷಲ್‌, ಆವೇಶ್‌ ಬದಲು ಪ್ರಚಂಡ ವೇಗಿ ಉಮ್ರಾನ್‌ ಮಲಿಕ್‌, ಡೆತ್‌ ಓವರ್‌ ಸ್ಪೆಷಲಿಸ್ಟ್‌ ಅರ್ಶದೀಪ್‌ ಸಿಂಗ್‌ಗೆ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ.

ಇನ್ನು, ಬ್ಯಾಟರ್‌ಗಳು ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಇಶಾನ್‌ ಕಿಶನ್‌, ಋುತುರಾಜ್‌ ಗಾಯಕ್ವಾಡ್‌ ಆರಂಭಿಕರಾಗಿ ಯಶಸ್ವಿಯಾಗಿದ್ದು, ಶ್ರೇಯಸ್‌ ಅಯ್ಯರ್‌ 3ನೇ ಕ್ರಮಾಂಕದಲ್ಲಿ ಮತ್ತೊಮ್ಮೆ ಸಾಮರ್ಥ್ಯ ಸಾಬೀತುಪಡಿಸುವ ಕಾತರದಲ್ಲಿದ್ದಾರೆ. ರಿಷಬ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌ ಮಧ್ಯಮ ಕ್ರಮಂಕಾದಲ್ಲಿ ಅಬ್ಬರಿಸಿದರೆ ದ.ಆಫ್ರಿಕಾ ಬೌಲರ್‌ಗಳಿಗೆ ಉಳಿಗಾಲವಿಲ್ಲ

click me!