
ದುಬೈ(ಅ.24): ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ T20 World Cup ಪಂದ್ಯ ಆರಂಭದಲ್ಲೇ ರೋಚಕ ತಿರುವು ಪಡೆದುಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಬಹುಬೇಗನೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
T20 World Cup IND vs PAK; ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!
ಪಾಕಿಸ್ತಾನ ವೇಗೆ ಶಾಹೀನ್ ಆಫ್ರಿದಿ ದಾಳಿಗೆ ನಲುಗಿದ ಟೀಂ ಇಂಡಿಯಾ ಪ್ರಮುಖ 2 ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ವಿಕೆಟ್ ಕೈಚೆಲ್ಲಿದ್ದಾರೆ. ರೋಹಿತ್ ಶರ್ಮಾ LBWಗೆ ಬಲಿಯಾದರೆ, ಕೆಎಲ್ ರಾಹುಲ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಸೂರ್ಯಕುಮಾರ್ ಯಾದವ್ ಚೇತರಿಸಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ 11 ರನ್ ಸಿಡಿಸಿ ಯಾದವ್ ಪೆವಿಲಿಯನ್ ಸೇರಿಕೊಂಡರು ಹಸನ್ ಆಲಿ ದಾಳಿಗೆ ಸೂರ್ಯಕುಮಾರ್ ಯಾದವ್, ರಿಜ್ವಾನ್‌ಗೆ ಕ್ಯಾಚ್ ನೀಡಿ ಹೊರನಡೆದರು. 31 ರನ್‌ಗಳಿಸುವಷ್ಟರಲ್ಲೇ ಭಾರತ 3 ವಿಕೆಟ್ ಕಳೆದುಕೊಂಡಿದೆ.
T20 World Cup IND vs PAK; ಈ ಪಂದ್ಯ ನಮಗೆ ಬಿಟ್ಟು ಬಿಡಿ, ಧೋನಿಗೆ ಪಾಕ್ ಯುವತಿಯ ಮನವಿ!
ಪಾಕಿಸ್ತಾನ ವಿರುದ್ದ ಪ್ರತಿ ಹೋರಾಟದಲ್ಲಿ ದಿಟ್ಟ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಇದೀಗ ಮಹತ್ವದ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ದುಬೈ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ ತೀವ್ರ ಸಂಕಷ್ಟ ಸಿಲುಕುವ ಪರಿಪಾಠ ಮುಂದುವರಿದಿದೆ.
ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅಭಿಮಾನಿಗಳಲ್ಲೂ ಆತಂಕಕ್ಕೆ ಕಾರಣಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಅಭಿಮಾನಿಗಳು ಟೀಂ ಇಂಡಿಯಾ ಟ್ರೋಲ್ ಆರಂಭಿಸಿದ್ದಾರೆ. ಇದು ಚಾಂಪಿಯನ್ಸ್ ಟ್ರೋಫಿ ಫೈನಲ್ ಎರಡನೇ ಭಾಗ ಎಂದು ಟ್ರೋಲ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.