T20 World Cup IND vs PAK; ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!

Published : Oct 24, 2021, 07:06 PM ISTUpdated : Oct 24, 2021, 07:12 PM IST
T20 World Cup IND vs PAK; ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!

ಸಾರಾಂಶ

ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಪಂದ್ಯ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ

ದುಬೈ(ಅ.24): ಅಭಿಮಾನಿಗಳು ಕಾದು ಕುಳಿತಿದ್ದ ಬದ್ಧವೈರಿಗಳ ಕದನ ಬಂದೇ ಬಿಟ್ಟಿದೆ. T20 World Cup 2021 ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ(India vs Pakistan) ನಡುವಿನ ಹೈವೋಲ್ಟೇಜ್ ಪಂದ್ಯ ಆರಂಭಗೊಂಡಿದೆ. ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

ಟೀಂ ಇಂಡಿಯಾ ಪ್ಲೇಯಿಂಗ್ 11:
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ(ನಾಯಕ), ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ 

ಪಾಕಿಸ್ತಾನ ಪ್ಲೇಯಿಂಗ್ 11:
ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್, ಫಕರ್ ಜಮನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಆಲಿ, ಇಮಾದ್ ವಾಸಿಮ್, ಶದಬ್ ಖಾನ್, ಹಸನ್ ಆಲಿ, ಹ್ಯಾರಿಸ್ ರೌಫ್, ಶಾಹೀನ್ ಆಫ್ರಿದಿ

ದುಬೈನಲ್ಲಿ ಟಾಸ್ ಗೆದ್ದ ತಂಡ  ಅರ್ಧ ಪಂದ್ಯ ಗೆದ್ದಂತೆ ಅನ್ನೋ ಮಾತಿದೆ. ಇದಕ್ಕ ಅಂಕಿ ಅಂಶಗಳು ಪೂರಕವಾಗಿದೆ. ಐಪಿಎಲ್ ಹಾಗೂ ಇತರ ಪಂದ್ಯದಲ್ಲಿ ಈ ಮಾತು ನಿಜವಾಗಿದೆ. ಸೆಕೆಂಡ್ ಬೌಲಿಂಗ್ ಮಾಡುವ ತಂಡಕ್ಕೆ ಡ್ಯೂ ಫ್ಯಾಕ್ಟರ್ ಪರಿಣಾಮ ಬೀರಲಿದೆ ಅನ್ನೋದು ಬಹಿರಂಗ ಸತ್ಯ. ಉಭಯ ತಂಡ ಉತ್ತಮ ಸ್ಪಿನ್ನರ್ಸ್ ಹೊಂದಿದ್ದಾರೆ. ಹೀಗಾಗಿ ಹೋರಾಟ ಮತ್ತಷ್ಟು ಜಿದ್ದಾಜಿದ್ದಿನಿಂದ ಕೂಡಿರಲಿದೆ.

T20 World Cup IND vs PAK; ಈ ಪಂದ್ಯ ನಮಗೆ ಬಿಟ್ಟು ಬಿಡಿ, ಧೋನಿಗೆ ಪಾಕ್ ಯುವತಿಯ ಮನವಿ!

ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯ. ಅಂಕಿ ಅಂಶ ದಾಖಲೆಗಳಿಗಿಂತ ಇಂದು ದಿಟ್ಟ ಹೋರಾಟ ನೀಡುವ ತಂಡಕ್ಕೆ ಮಾತ್ರ ಗೆಲುವು ಸಾಧ್ಯ. ಇತ್ತ ಉಭಯ ತಂಡದ ಅಭಿಮಾನಿಗಳು ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ. ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಇದೀಗ ಕುತೂಹಲದ ಕೇಂದ್ರಬಿಂದುವಾಗಿದೆ.

ದುಬೈನಲ್ಲಿ ನಡೆದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಲೋ ಸ್ಕೋರಿಂಗ್ ಗೇಮ್ ಆಗಿತ್ತು. ಆದರೆ ಈ ಪಂದ್ಯ ಹೈಸ್ಕೋರಿಂಗ್ ಗೇಮ್ ಆಗಲಿದೆ ಅನ್ನೋದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ. ಆದರೆ ಉಭಯ ತಂಡದ ಕ್ರಿಕೆಟಿಗರು ಇದು ಮತ್ತೊಂದು ಪಂದ್ಯವಿದ್ದಂತೆ ಎಂದಿದ್ದಾರೆ.

T20 World Cup Ind vs Pak ಟೀಂ ಇಂಡಿಯಾವನ್ನು ಗೆಲ್ಲಿಸ್ತಾರಾ ಮೆಂಟರ್ ಧೋನಿ..?

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮತ್ತೊಂದು ಕ್ರಿಕೆಟ್ ಪಂದ್ಯವಿದ್ದಂತೆ. ಟಿ20 ಟೂರ್ನಿಗಾಗಿ ಉತ್ತಮ ಪಿಚ್ ಸಜ್ಜುಗೊಳಿಸಲಾಗಿದೆ. ಈ ಪಂದ್ಯದಲ್ಲಿ ಉತ್ತಮ ಹೋರಾಟ ನೀಡುವ ವಿಶ್ವಾಸವಿದೆ. ಕಂಡೀಷನ್‌ಗೆ ತಕ್ಕಂತೆ ಹೊಂದಿಕೊಂಡು ಆಡಬೇಕಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇತ್ತ ಬಾಬರ್ ಅಜಮ್, ಟೀಂ ಇಂಡಿಯಾ ವಿರುದ್ಧ ಈ ಬಾರಿ ಪಾಕಿಸ್ತಾನ ಗೆಲುವು ಸಾಧಿಸಲಿದೆ. ಹಿಂದಿನ ಅಂಕಿ ಅಂಶಗಳಿಗಿಂತ ಈ ಬಾರಿ ಪಾಕಿಸ್ತಾನ ತಂಡ ಹೆಚ್ಚು ಬಲಿಷ್ಠವಾಗಿದೆ ಎಂದು ಬಾಬರ್ ಅಜಮ್ ಹೇಳಿದ್ದಾರೆ.

Ind Vs Pak ಪಂದ್ಯ 'ರಾಷ್ಟ್ರಧರ್ಮಕ್ಕೆ' ವಿರುದ್ಧ : ಬಾಬಾ ರಾಮದೇವ್

ಪಾಕಿಸ್ತಾನ ಪ್ರವಾಸಕ್ಕೆ ಇತರ ತಂಡಗಳು ಹಿಂದೇಟು ಹಾಕುತ್ತಿರುವ ಕಾಲದಿಂದ ಪಾಕಿಸ್ತಾನ ಯುಇಎ ಯನ್ನು ತನ್ನ ನೆಲೆ ಮಾಡಿಕೊಂಡಿದೆ. ಹೀಗಾಗಿ ಪಾಕಿಸ್ತಾನ ಹೆಚ್ಚಿನ ಪಂದ್ಯಗಳನ್ನು ದುಬೈನಲ್ಲಿ ಆಡಿದೆ. ಇತ್ತ ಟೀಂ ಇಂಡಿಯಾ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯನ್ನು ದುಬೈ ಕ್ರೀಡಾಂಗಣದಲ್ಲಿ ಆಡಿದೆ. ಹೀಗಾಗಿ ಉಭಯ ತಂಡಗಳಿಗೆ ದುಬೈ ಕ್ರೀಡಾಂಗಣದಲ್ಲಿ ಆಡಿದ ಅನುಭವ ಹೊಂದಿದೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!