Latest Videos

ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿಕಡಿಮೆ ಮೊತ್ತ ದಾಖಲಿಸಿ ಪಾಕ್ ಎದುರು ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾ..!

By Naveen KodaseFirst Published Jun 10, 2024, 10:44 AM IST
Highlights

ಇಲ್ಲಿನ ನಾಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಪಾಕಿಸ್ತಾನದ ವೇಗಿಗಳ ಮಾರಕ ದಾಳಿಗೆ ತತ್ತರಿಸಿ 19 ಓವರ್‌ಗಳಲ್ಲಿ ಕೇವಲ 119 ರನ್‌ಗಳಿಸಿ ಸರ್ವಪತನ ಕಂಡಿತು. ಇದು ಟೀಂ ಇಂಡಿಯಾ, ಪಾಕಿಸ್ತಾನ ಎದುರು ಟಿ20 ಕ್ರಿಕೆಟ್‌ನಲ್ಲಿ ದಾಖಲಿಸಿದ ಕನಿಷ್ಠ ಮೊತ್ತ ಎನಿಸಿತು.

ನ್ಯೂಯಾರ್ಕ್‌: 2024ರ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮತ್ತೊಮ್ಮೆ ಪಾಕಿಸ್ತಾನ ಎದುರು ಟೀಂ ಇಂಡಿಯಾ ಗೆದ್ದು ತನ್ನ ದಾಖಲೆ ಉತ್ತಮಪಡಿಸಿಕೊಂಡಿದೆ. ಲೋ ಸ್ಕೋರಿಂಗ್ ಮ್ಯಾಚ್ ಆಗಿದ್ದರೂ ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ರೋಚಕತೆ ಕಾಯ್ದುಕೊಂಡಿದ್ದ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ 6 ರನ್ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಇನ್ನು ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತ ರಕ್ಷಿಸಿಕೊಂಡ ತಂಡಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಯಿತು.

ಹೌದು, ಇಲ್ಲಿನ ನಾಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಪಾಕಿಸ್ತಾನದ ವೇಗಿಗಳ ಮಾರಕ ದಾಳಿಗೆ ತತ್ತರಿಸಿ 19 ಓವರ್‌ಗಳಲ್ಲಿ ಕೇವಲ 119 ರನ್‌ಗಳಿಸಿ ಸರ್ವಪತನ ಕಂಡಿತು. ಇದು ಟೀಂ ಇಂಡಿಯಾ, ಪಾಕಿಸ್ತಾನ ಎದುರು ಟಿ20 ಕ್ರಿಕೆಟ್‌ನಲ್ಲಿ ದಾಖಲಿಸಿದ ಕನಿಷ್ಠ ಮೊತ್ತ ಎನಿಸಿತು. ಇನ್ನು ಇದಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ, ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಎದುರು ಆಲೌಟ್ ಆಗಿತ್ತು. 2007ರಿಂದ ಇಲ್ಲಿಯವರೆಗೂ ಭಾರತ ಹಾಗೂ ಪಾಕಿಸ್ತಾನ ತಂಡಗಳು 12 ಬಾರಿ ಮುಖಾಮುಖಿಯಾಗಿದ್ದು, ಇದೇ ಮೊದಲ ಬಾರಿಗೆ ಭಾರತ ತಂಡವು ಬದ್ದ ಎದುರಾಳಿ ಪಾಕಿಸ್ತಾನ ಎದುರು ಸರ್ವಪತನ ಕಂಡಿತ್ತು.

T20 World Cup 2024 ಬಾಂಗ್ಲಾದೇಶ ವಿರುದ್ಧ ಗೆದ್ದು ಸೂಪರ್-8ಗೇರುತ್ತಾ ಆಫ್ರಿಕಾ?

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಆದರೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಮಾರಕ ದಾಳಿ ನಡೆಸಿ 4 ಓವರ್‌ನಲ್ಲಿ ಕೇವಲ 14 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಅದರಲ್ಲೂ 19ನೇ ಓವರ್‌ನಲ್ಲಿ ಬುಮ್ರಾ ಕೇವಲ 3 ರನ್ ನೀಡುವ ಮೂಲಕ ಪಾಕ್ ಗೆಲುವಿನ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದರು. ಹೀಗಾಗಿ ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು 18 ರನ್‌ಗಳ ಅಗತ್ಯವಿತ್ತು. 20ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ಆರ್ಶದೀಪ್ ಸಿಂಗ್ ಕೇವಲ 11 ರನ್ ನೀಡುವ ಮೂಲಕ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

SCINTILLATING from Jasprit Bumrah 🔥

The key moments 📲 https://t.co/cL6aKL2ooO pic.twitter.com/yL4luGC1Uj

— ICC (@ICC)

ಕಾಕತಾಳೀಯ ಎನ್ನುವಂತೆ ಬರೋಬ್ಬರಿ ಒಂದು ದಶಕದ ಹಿಂದೆ ಶ್ರೀಲಂಕಾ ತಂಡವು ಮಾಡಿದ್ದ ಅಪರೂಪದ ದಾಖಲೆಯನ್ನು ಸರಿಗಟ್ಟುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಎದುರು ಶ್ರೀಲಂಕಾ ತಂಡವು ಮೊದಲು ಬ್ಯಾಟ್ ಮಾಡಿ 119 ರನ್ ಕಲೆಹಾಕಿತ್ತು. ಬಳಿಕ ಕಿವೀಸ್ ತಂಡವನ್ನು ಕೇವಲ 60 ರನ್‌ಗಳಿಗೆ ಆಲೌಟ್ ಮಾಡಿ ಲಂಕಾ ಗೆಲುವಿನ ನಗೆ ಬೀರಿತ್ತು. ಇದೀಗ ಟೀಂ ಇಂಡಿಯಾ ಕೂಡಾ 119 ರನ್ ರಕ್ಷಿಸಿಕೊಳ್ಳುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಅತಿಕಡಿಮೆ ಮೊತ್ತ ರಕ್ಷಿಸಿಕೊಂಡ ಜಂಟಿ ತಂಡ ಎನ್ನುವ ಅಪರೂಪದ ಕೀರ್ತಿಗೆ ಲಂಕಾ ಜತೆಗೆ ಭಾರತ ಸೇರ್ಪಡೆಯಾಗಿದೆ.

click me!