‘ಡಿ’ ಗುಂಪಿನಲ್ಲಿರುವ ದ.ಆಫ್ರಿಕಾ ಟೂರ್ನಿಯಲ್ಲಿ ಮೊದಲೆರಡೂ ಪಂದ್ಯಗಳಲ್ಲಿ ಗೆದ್ದಿದ್ದು, 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. 2 ಪಂದ್ಯದಲ್ಲೂ ಬೌಲಿಂಗ್‌ನಲ್ಲಿ ಮಾರಕ ದಾಳಿ ಸಂಘಟಿಸಿದ್ದ ತಂಡ, ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿದೆ. ಶ್ರೀಲಂಕಾವನ್ನು 77, ನೆದರ್‌ಲೆಂಡ್ಸ್ ಅನ್ನು 103 ರನ್‌ಗೆ ನಿಯಂತ್ರಿಸಿದ್ದ ದ.ಆಫ್ರಿಕಾ ಬೌಲರ್‌ಗಳು ಬಾಂಗ್ಲಾ ವಿರುದ್ಧವೂ ಅಮೋಘ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.
ನ್ಯೂಯಾರ್ಕ್: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ಮೂಲಕ ಸೂಪರ್-8 ಪ್ರವೇಶಿಸುವ ನಿರೀಕ್ಷೆಯಲ್ಲಿರುವ ದಕ್ಷಿಣ ಆಫ್ರಿಕಾ ಸೋಮವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ.
‘ಡಿ’ ಗುಂಪಿನಲ್ಲಿರುವ ದ.ಆಫ್ರಿಕಾ ಟೂರ್ನಿಯಲ್ಲಿ ಮೊದಲೆರಡೂ ಪಂದ್ಯಗಳಲ್ಲಿ ಗೆದ್ದಿದ್ದು, 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. 2 ಪಂದ್ಯದಲ್ಲೂ ಬೌಲಿಂಗ್‌ನಲ್ಲಿ ಮಾರಕ ದಾಳಿ ಸಂಘಟಿಸಿದ್ದ ತಂಡ, ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿದೆ. ಶ್ರೀಲಂಕಾವನ್ನು 77, ನೆದರ್‌ಲೆಂಡ್ಸ್ ಅನ್ನು 103 ರನ್‌ಗೆ ನಿಯಂತ್ರಿಸಿದ್ದ ದ.ಆಫ್ರಿಕಾ ಬೌಲರ್‌ಗಳು ಬಾಂಗ್ಲಾ ವಿರುದ್ಧವೂ ಅಮೋಘ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.
ಅತ್ತ ಬಾಂಗ್ಲಾ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 2 ವಿಕೆಟ್‌ಗಳಿಂದ ಮಣಿಸಿತ್ತು. ಸೂಪರ್-8 ಪ್ರವೇಶಿಸಲು ಎದುರು ನೋಡುತ್ತಿರುವ ತಂಡ ಆಫ್ರಿಕಾಕ್ಕೆ ಆಘಾತ ನೀಡುವ ವಿಶ್ವಾಸದಲ್ಲಿದೆ.
ಪಂದ್ಯ ಆರಂಭ: ರಾತ್ರಿ 8 ಗಂಟೆಗೆ,
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್, ಡಿಡಿ ಸ್ಪೋರ್ಟ್ಸ್.
ಆಸೀಸ್‌ಗೆ ತಲೆಬಾಗಿದ ಹಾಲಿ ಚಾಂಪಿಯನ್ ಇಂಗ್ಲೆಂಡ್
ಬ್ರಿಡ್ಜ್‌ಟೌನ್(ಬಾರ್ಬಡೊಸ್): ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಮೊದಲ ಗೆಲುವಿಗಾಗಿ ಮತ್ತಷ್ಟು ಸಮಯ ಕಾಯಬೇಕಿದೆ. ಸ್ಕಾಟ್ಲೆಂಡ್ ವಿರುದ್ಧದ ಮೊದಲ ಪಂದ್ಯ ಮಳೆಯಿಂದ ರದ್ದಾಗಿ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಇಂಗ್ಲೆಂಡ್, ಶನಿವಾರ ರಾತ್ರಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 36 ರನ್ ಸೋಲನುಭವಿಸಿತು. ತಂಡ ಸದ್ಯ 2 ಪಂದ್ಯಗಳಲ್ಲಿ ಕೇವಲ 1 ಅಂಕ ಸಂಪಾದಿಸಿದ್ದು, ಸತತ 2 ಜಯದೊಂದಿಗೆ 4 ಅಂಕ ಹೊಂದಿರುವ ಆಸೀಸ್ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ಮೊದಲು ಬ್ಯಾಟ್ ಮಾಡಿದ ಆಸೀಸ್ 7 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು. ಇದು ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಮೊದಲ 200+ ಸ್ಕೋರ್. ಸ್ಫೋಟಕ ಆರಂಭ ಒದಗಿಸಿದ ವಾರ್ನರ್-ಟ್ರ್ಯಾವಿಸ್ ಹೆಡ್ ಮೊದಲ 5 ಓವರಲ್ಲೇ 70 ರನ್ ಸಿಡಿಸಿದರು.
T20 World Cup 2024 ಪಾಕಿಸ್ತಾನವನ್ನು ಹೊಡೆದುರುಳಿಸಿದ ಭಾರತ; ರೋಹಿತ್ ಪಡೆಗೆ ರೋಚಕ ಜಯ
ವಾರ್ನರ್ 16 ಎಸೆತಗಳಲ್ಲಿ 39, ಹೆಡ್ 18 ಎಸೆತಗಳಲ್ಲಿ 34 ರನ್ ಸಿಡಿಸಿ ಔಟಾದ ಬಳಿಕ, ನಾಯಕ ಮಿಚೆಲ್ ಮಾರ್ಷ್ 35, ಮ್ಯಾಕ್ಸ್‌ವೆಲ್ 28, ಮಾರ್ಕಸ್ ಸ್ಟೋಯ್ನಿಸ್ 17 ಎಸೆತಗಳಲ್ಲಿ 30 ಹಾಗೂ ಮ್ಯಾಥ್ಯೂ ವೇಡ್ ಔಟಾಗದೆ 17 ರನ್ ಸಿಡಿಸಿ ತಂಡವನ್ನು 200ರ ಗಡಿ ತಲುಪಿಸಿದರು.
ಬೃಹತ್ ಮೊತ್ತ ಬೆನ್ನತ್ತಿದ ಇಂಗ್ಲೆಂಡ್, ಉತ್ತಮ ಆರಂಭದ ಹೊರತಾಗಿಯೂ 20 ಓವರಲ್ಲಿ 6 ವಿಕೆಟ್‌ಗೆ 165 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಾಯಕ ಬಟ್ಲರ್ 28 ಎಸೆತಗಳಲ್ಲಿ 42, ಫಿಲ್ ಸಾಲ್ಟ್ 23 ಎಸೆತಗಳಲ್ಲಿ 37 ರನ್ ಸಿಡಿಸಿ ಗೆಲುವಿನ ಮುನ್ಸೂಚನೆ ನೀಡಿದರೂ, ಮಧ್ಯಮ ಓವರ್‌ಗಳಲ್ಲಿ ರನ್ ಗಳಿಸಲು ತಿಣುಕಾಡಿದ ತಂಡ ಸತತ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಆ್ಯಡಂ ಝಂಪಾ, ಕಮಿನ್ಸ್ ತಲಾ 2 ವಿಕೆಟ್ ಕಿತ್ತರು.
ಸ್ಕೋರ್: ಆಸ್ಟ್ರೇಲಿಯಾ 20 ಓವರಲ್ಲಿ 201/7 (ವಾರ್ನರ್ 39, ಮಾರ್ಷ್ 35, ಜೊರ್ಡನ್ 2-44),
ಇಂಗ್ಲೆಂಡ್ 20 ಓವರಲ್ಲಿ165/6 (ಬಟ್ಲರ್ 42, ಸಾಲ್ಟ್ 37, ಕಮಿನ್ಸ್ 2-23, ಝಂಪಾ 2-28) ಪಂದ್ಯಶ್ರೇಷ್ಠ: ಆ್ಯಡಂ ಝಂಪಾ.
14 ವರ್ಷ ಬಳಿಕ ಗೆಲುವು
ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ 14 ವರ್ಷಗಳ ಬಳಿಕ ಜಯ ದಾಖಲಿಸಿತು. 2007ರಲ್ಲಿ ಇಂಗ್ಲೆಂಡ್ ವಿರುದ್ಧ ಆಸೀಸ್ ಗೆದ್ದಿತ್ತು. ಬಳಿಕ 2010, 2021ರಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, 2022ರಲ್ಲಿ ಪಂದ್ಯ ಮಳೆಗೆ ರದ್ದಾಗಿತ್ತು.
ವೆಸ್ಟ್‌ಇಂಡೀಸ್‌ಗೆ 134 ರನ್ ಜಯ
ಗಯಾನ: ತನ್ನ ಮಾರಕ ಬೌಲಿಂಗ್ ಮೂಲಕ ಉಗಾಂಡವನ್ನು ಕೇವಲ 39 ರನ್‌ಗೆ ಕಟ್ಟಿಹಾ ಕಿದ 2 ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್, 134 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಭಾನುವಾರದ ಪಂದ್ಯದ ಮೂಲಕ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ 2ನೇ ಜಯ ದಾಖಲಿಸಿದ ವಿಂಡೀಸ್ 'ಸಿ' ಗುಂಪಿನಲ್ಲಿ 4 ಅಂಕದೊಂದಿಗೆ 2ನೇ ಸ್ಥಾನಕ್ಕೇರಿದ್ದು, ಉಗಾಂಡ ಆಡಿರುವ 3 ಪಂದ್ಯಗಳಲ್ಲಿ 2ನೇ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ ವಿಂಡೀಸ್ 5 ವಿಕೆಟ್‌ಗೆ 173 ರನ್ ಕಲೆಹಾಕಿತು. ಚಾರ್ಲ್ಸ್ 44, ಆ್ಯಂಡ್ರೆ ರಸೆಲ್ 17 ಎಸೆತಗಳಲ್ಲಿ ಔಟಾಗದೆ 30 ರನ್ ಗಳಿಸಿದರು. ನಾಯಕ ರೋವನ್ ಪೊವೆಲ್ 23, ಶೆರ್ಫಾನೆ ರುಥ ಫೋರ್ಡ್ 22, ನಿಕೋಲಸ್ ಪೂರನ್ 22 ರನ್ ಕೊಡುಗೆ ನೀಡಿದರು.
ಇಂಡೋ-ಪಾಕ್ ವಿಶ್ವಕಪ್ ಫೈಟ್: ಇದೇ ತಂಡ ವಿನ್ ಆಗುತ್ತೆ ಎಂದು 5 ಕೋಟಿ ಬೆಟ್ ಕಟ್ಟಿದ ಈ ಸೆಲಿಬ್ರಿಟಿ ..!
ಗುರಿ ಬೆನ್ನತ್ತಿದ ಉಗಾಂಡಕ್ಕೆ ವಿಂಡೀಸ್ ಸ್ಪಿನ್ನರ್ ಅಕೇಲ್ ಹೊಸೈನ್ ಮಾರಕ ವಾಗಿ ಪರಿಣಮಿಸಿದರು. ಇನ್ನಿಂಗ್ಸ್‌ನ 2ನೇ ಎಸೆತ ದಲ್ಲೇ ವಿಕೆಟ್ ಭೇಟೆ ಆರಂಭಿಸಿದ ಅಕೇಲ್, ಮೊದಲ 7 ಬ್ಯಾಟರ್‌ಗಳ ಪೈಕಿ ಐವರನ್ನು ಪೆವಿಲಿಯನ್‌ಗೆ ಅಟ್ಟಿದರು. 9ನೇ ಕ್ರಮಾಂಕ ದಲ್ಲಿ ಕ್ರೀಸ್‌ಗಿಳಿದ ಜುಮಾ ಮಿಯಾಗಿ(13) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ತಂಡ 12 ಓವರ್‌ಗಳಲ್ಲಿ 39 ರನ್‌ಗೆ ಗಂಟುಮೂಟೆ ಕಟ್ಟಿತು. 4 ಓವರ್‌ಎಸೆದ ಅಕೇಲ್ 11 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಸ್ಕೋರ್:
ವಿಂಡೀಸ್ 20 ಓವರಲ್ಲಿ 173/5 (ಚಾರ್ಲ್ಸ್ 44, ರಸೆಲ್ 30 *, ಮಸಾಬ 2-31),
ಉಗಾಂಡ 12 ಓವರಲ್ಲಿ 3 39/10 (ಮಿಯಾಗಿ 13, ಅಕೇಲ್ 5-11, ಅಲ್ಜಾರಿ 2-6)
ಪಂದ್ಯಶ್ರೇಷ್ಠ: ಅಕೇಲ್ ಹೊಸೈನ್,