IND vs NZ ನ್ಯೂಜಿಲೆಂಡ್‌ಗೆ ಟೀಂ ಇಂಡಿಯಾ ವೇಗಿಗಳ ಶಾಕ್, 108 ರನ್‌ಗೆ ಆಲೌಟ್!

By Suvarna NewsFirst Published Jan 21, 2023, 4:13 PM IST
Highlights

ಟೀಂ ಇಂಡಿಯಾ ದಾಳಿಗೆ ನ್ಯೂಜಿಲೆಂಡ್ ತತ್ತರಿಸಿದೆ. ಕೇವಲ 34. 3 ಓವರ್‌ಗಳಲ್ಲಿ 108 ರನ್‌ಗೆ ನ್ಯೂಜಿಲೆಂಡ್ ಆಲೌಟ್ ಆಗಿದೆ.

ರಾಯಪುರ(ಜ.21):  ಭಾರತ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತತ್ತರಿಸಿದೆ. ಭಾರತೀಯ ವೇಗಿಗಳ ದಾಳಿಗೆ ಬೆದರಿದ ನ್ಯೂಜಿಲೆಂಡ್ 108 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ನ್ಯೂಜಿಲೆಂಡ್ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಇದೀಗ ಟೀಂ ಇಂಡಿಯಾಗೆ 109 ರನ್ ಟಾರ್ಗೆಟ್ ನೀಡಲಾಗಿದೆ. ವೇಗಿಗಳಿಗೆ ಹೆಚ್ಚಿನ ನರೆವು ನೀಡುವ ಈ ಪಿಚ್‌ನಲ್ಲಿ ಭಾರತವೂ ಎಚ್ಚರಿಕೆ ಹೆಜ್ಜೆ ಇಡಬೇಕಿದೆ.

ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿ ಆರಂಭದಿಂದಲೇ ಭಾರತ ಹಿಡಿತ ಸಾಧಿಸಿತು. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಹಾಗೂ ಹಾರ್ದಿಕ್ ಪಾಂಡ್ಯ ವೇಗಕ್ಕೆ ನ್ಯೂಜಿಲೆಂಡ್ ಪೆವಿಲಿಯನ್ ಪರೇಡ್ ನಡೆಸಿತು. ಮೊದಲ ಓವರ್‌ನಲ್ಲೇ ನ್ಯೂಜಿಲೆಂಡ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಫಿನ್ ಅಲೆನ್ ಡಕೌಟ್ ಆದರು. 

ರಾಜ್ಯ ಅಂಡರ್ - 14 ತಂಡಕ್ಕೆ ದ್ರಾವಿಡ್‌ ಪುತ್ರ ಅನ್ವಯ್‌ ನಾಯಕ: ಸ್ವಜನಪಕ್ಷಪಾತ ಟೀಕೆಗೆ ಮಾಜಿ ಕ್ರಿಕೆಟಿಗ ಪ್ರತಿಕ್ರಿಯೆ..

ಹೆನ್ರಿ ನಿಕೋಲಸ್ ಕೇವಲ 2 ರನ್ ಸಿಡಿಸಿ ಔಟಾದರು. ಡರಿಲ್ ಮಿಚೆಲ್ 1 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಡೇವೊನ್ ಕಾನ್ವೆ 7 ರನ್ ಸಿಡಿಸಿ ಔಟಾದರು. ನಾಯಕ ಟಾಮ್ ಲಾಥಮ್ 1 ರನ್‌ಗೆ ಸುಸ್ತಾದರು. ನ್ಯೂಜಿಲೆಂಡ್ 15 ರನ್‌ಗಳಿಸುವಷ್ಟರಲ್ಲೇ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿ ಎದುರಿಸಿತು.

ಗ್ಲೆನ್ ಪಿಲಿಫ್ಸ್ ಹಾಗೂ ಮಿಚೆಲ್ ಬ್ರೇಸ್‌ವೆಲ್ ಜೊತೆಯಾಟ ನ್ಯೂಜಿಲೆಂಡ್‌ಗೆ ನೆರವಾಯಿತು. ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಿಟ್ಟ ಹೋರಾಟ ನೀಡಿದ ಬ್ರೇಸ್‌ವೆಲ್ ಮಹತ್ವದ ಪಂದ್ಯದಲ್ಲಿ 22 ರನ್ ಸಿಡಿಸಿ ಔಟಾದರು. ಇದರೊಂದಿಗೆ ನ್ಯೂಜಿಲೆಂಡ್ ಮೊತ್ತ 56ಕ್ಕೆ ಏರಿಕೆಯಾಯಿತು. ಇತ್ತ ಪಿಲಿಫ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಜೊತೆಯಾಟ ಆರಂಭಗೊಂಡಿತು.

ಪಿಲಿಫ್ಸ್ ಹಾಗೂ ಸ್ಯಾಂಟ್ನರ್ ಜೊತೆಯಾಟದಿಂದ ನ್ಯೂಜಿಲೆಂಡ್ ಚೇತತರಿಸಿಕೊಂಡಿತು. ಇಷ್ಟೇ ಅಲ್ಲ 100 ರನ್ ಗಡಿ ದಾಟಿತು. ಆದರೆ ಸ್ಯಾಂಟ್ನರ್ 27 ರನ್ ಸಿಡಿಸಿ ನಿರ್ಗಮಿಸಿದರು. ಇದರೊಂದಿಗೆ ಬ್ರೇಸ್‌ವೆಲ್ ಹಾಗೂ ಸ್ಯಾಂಟ್ನರ್ ಜೊತೆಯಾಟಕ್ಕೂ ಬ್ರೇಕ್ ಬಿದ್ದಿತು. ಗ್ಲೆನ್ ಪಿಲಿಪ್ಸ್ 36 ರನ್ ಕಾಣಿಕೆ ನೀಡಿದರು. ಅಂತಿಮವಾಗಿ ಬ್ಲೈರ್ ಟಿಕ್ನರ್ ವಿಕೆಟ್ ಪತನಗೊಂದಿಗೆ ನ್ಯೂಜಿಲೆಂಡ್ 34.3 ಓವರ್‌ಗಳಲ್ಲಿ 108 ರನ್‌ಗೆ ಆಲೌಟ್ ಆಯಿತು.

IPL 2023: ಭರ್ಜರಿ ಸಿಕ್ಸರ್‌ ಮೂಲಕ ಅಭ್ಯಾಸ ಆರಂಭಿಸಿದ ಮಹೇಂದ್ರ ಸಿಂಗ್ ಧೋನಿ..!

ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ 2, ಮೊಹಮ್ಮದ್ ಸಿರಾಜ್ 1, ಶಾರ್ದುಲ್ ಠಾಕೂರ್ 1, ಕುಲ್ದೀಪ್ ಯಾದವ್ 1 ಹಾಗೂ ವಾಶಿಂಗ್ಟನ್ ಸುಂದರ್ 2 ವಿಕೆಟ್ ಕಬಳಿಸಿದರು.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 2ನೇ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಹೀಗಾಗಿ ಈ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ಟೀಂ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಇತ್ತ ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯದಲ್ಲಿ ತಿರೇಗೇಟು ನೀಡಿ ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಲು ಹವಣಿಸುತ್ತಿದೆ. ಆದರೆ ಬೌಲಿಂಗ್‌ನಲ್ಲಿ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ. ನ್ಯೂಜಿಲೆಂಡ್ ತಂಡವನ್ನು 108ರನ್‌ಗೆ ಆಲೌಟ್ ಮಾಡಿ ಭಾರತಕ್ಕೆ ಸುಲಭ ಟಾರ್ಗೆಟ್ ಪಡೆದುಕೊಂಡಿದೆ. 

click me!