2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಉಭಯ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಆಕ್ಲೆಂಡ್(ಜ.26): ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ. ಮೊದಲ ಟಿ20 ಪಂದ್ಯದಲ್ಲೂ ಕಿವೀಸ್ ಪಡೆ ಮೊದಲು ಬ್ಯಾಟಿಂಗ್ ಮಾಡಿತ್ತು.
New Zealand have won the toss and they will bat first in the 2nd T20I. pic.twitter.com/bd8Xnn6fgU
— BCCI (@BCCI)ಉಭಯ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎರಡು ತಂಡಗಳು ಮೊದಲ ಪಂದ್ಯದಲ್ಲಿ ಆಡಿದ ತಂಡದೊಂದಿಗೆ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿವೆ. ಭಾರತದಲ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಹುಸಿಯಾಗಿದೆ.
2ನೇ ಟಿ20 ಪಂದ್ಯಕ್ಕೆ ಸಂಭಾವ್ಯ ಟೀಂ ಇಂಡಿಯಾ ಪ್ರಕಟ..! ಒಂದು ಬದಲಾವಣೆ..?
ಆಕ್ಲೆಂಡ್‌ನಲ್ಲೇ ನಡೆದ ಮೊದಲ ಪಂದ್ಯದಲ್ಲಿ ಎರಡು ತಂಡಗಳು ಸೇರಿ ನಾನೂರಕ್ಕೂ ಅಧಿಕ ರನ್ ಬಾರಿಸಿದ್ದವು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ನ್ಯೂಜಿಲೆಂಡ್ 203 ರನ್ ಕಲೆಹಾಕಿತ್ತು. ಕಿವೀಸ್ ಪರ ಕಾಲಿನ್ ಮನ್ರೋ, ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಇನ್ನು ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಒಂದು ಓವರ್ ಉಳಿಸಿ ಗೆಲುವಿನ ನಗೆ ಬೀರಿತ್ತು.
2ನೇ ಟಿ20: ಈಡನ್ ಪಾರ್ಕ್‌ನಲ್ಲಿಂದು ಮತ್ತೆ ರನ್ ಮಳೆ?
ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಅಂತರವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿ ವಿರಾಟ್ ಪಡೆ ಇದೆ. ಆದರೆ ಆತಿಥೇಯ ನ್ಯೂಜಿಲೆಂಡ್ ಈ ಪಂದ್ಯವನ್ನು ಗೆದ್ದು ಸರಣಿ ಸಮಬಲ ಸಾಧಿಸಲು ಎದುರು ನೋಡುತ್ತಿದೆ.
ತಂಡಗಳು ಹೀಗಿವೆ:
ಭಾರತ:
2nd T20I. India XI: R Sharma, KL Rahul, V Kohli, S Iyer, S Dube, M Pandey, R Jadeja, S Thakur, Y Chahal, M Shami, J Bumrah https://t.co/q1SS95nfkl
— BCCI (@BCCI)ನ್ಯೂಜಿಲೆಂಡ್:
2nd T20I. New Zealand XI: M Guptill, C Munro, K Williamson, C de Grandhomme, R Taylor, T Seifert, M Santner, T Southee, I Sodhi, B Tickner, H Bennett https://t.co/q1SS95nfkl
— BCCI (@BCCI)