ಟಾಪ್ ಆರ್ಡರ್ ಕಳಚಿದರೂ ಅಬ್ಬರಿಸಿದ ಟೀಂ ಇಂಡಿಯಾ; ಇಂಗ್ಲೆಂಡ್‌ಗೆ ಕಠಿಣ ಗುರಿ!

By Suvarna NewsFirst Published Mar 18, 2021, 9:05 PM IST
Highlights

ಇಂಗ್ಲೆಂಡ್ ವಿರುದ್ಧದ ಟಿ20  ಸರಣಿ ಕೈತಪ್ಪುವ ಭೀತಿ ಇದೀಗ ಟೀಂ ಇಂಡಿಯಾಗೆ ಎದುರಾಗಿದೆ. ಮತ್ತೆ ಟಾಪ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಆದರೆ ಮಧ್ಯಮ ಕ್ರಮಾಂಕದ ಅಬ್ಬರದಿಂದ ಕೊಹ್ಲಿ ಸೈನ್ಯ, ಇಂಗ್ಲೆಂಡ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಅಹಮ್ಮದಾಬಾದ್(ಮಾ.18):  ಮತ್ತೆ ಅದೆ ಕಳಪೆ ಪ್ರದರ್ಶನ, ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತೆ ಫ್ಲಾಪ್. ಈ ಬಾರಿ ನಾಯಕ ವಿರಾಟ್ ಕೊಹ್ಲಿ ಕೂಡ ಬಹುಬೇಗ ವಿಕೆಟ್ ಕೈಚೆಲ್ಲಿದರು. ಆದರೆ ಸೂರ್ಯಕುಮಾರ್ ಯಾದವ್, ಪಂತ್, ಶ್ರೇಯಸ್ ಅಯ್ಯರ್ ಹೋರಾಟದಿಂದ ಟೀಂ ಇಂಡಿಯಾ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 186 ರನ್ ಟಾರ್ಗೆಟ್ ನೀಡಿದೆ. 

ಮೊದಲ ಎಸೆತದಲ್ಲೇ ಸಿಕ್ಸರ್; ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ದಾಖಲೆ!.

ರೋಹಿತ್ ಶರ್ಮಾ 12, ಕೆಎಲ್ ರಾಹುಲ್ 14 ಹಾಗೂ ನಾಯಕ ವಿರಾಟ್ ಕೊಹ್ಲಿ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ ಹೋರಾಟ ಟೀಂ ಇಂಡಿಯಾಗೆ ಚೇತರಿಕ ನೀಡಿದರು. ಸೂರ್ಯಕುಮಾರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 

ಸೂರ್ಯಕುಮಾರ್ ಯಾದವ್ 57 ರನ್ ಸಿಡಿಸಿ ಔಟಾದರು. ಇತ್ತ ರಿಷಬ್ ಪಂತ್ 30 ರನ್ ಸಿಡಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಹಾಗೂ ಹಾರ್ಧಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಟೀಂ ಇಂಡಿಯಾಗೆ ನೆರವಾಯಿತು. ಪಾಂಡ್ಯ 11 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ 37 ರನ್ ಕಾಣಿಕೆ ನೀಡಿದರು.

ಶಾರ್ದೂಲ್ ಠಾಕೂರ್ ಅಜೇಯ 10 ರನ್ ಸಿಡಿಸಿದರು. ಅಂತಿಮವಾಗಿ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 185 ರನ್  ಸಿಡಿಸಿತು. ಈ ಮೂಲಕ ಇಂಗ್ಲೆಂಡ್‌ಗೆ 186 ರನ್ ಟಾರ್ಗೆಟ್ ನೀಡಿದೆ. 

click me!