* ಲೀಡ್ಸ್ ಟೆಸ್ಟ್‌ನಲ್ಲಿ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ರಾಹುಲ್
* ಎಚ್ಚರಿಕೆ ಆರಂಭದ ಹೊರತಾಗಿಯೂ ವಿಕೆಟ್ ಕೈಚೆಲ್ಲಿದ ಟೀಂ ಇಂಡಿಯಾ
* ಇನ್ನೂ 320 ರನ್‌ಗಳ ಹಿನ್ನೆಡೆಯಲ್ಲಿದೆ ವಿರಾಟ್ ಕೊಹ್ಲಿ ಪಡೆ
ಲೀಡ್ಸ್(ಆ.27): ಬೃಹತ್ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶಿಸಿತಾದರೂ, ಆರಂಭವನ್ನು ಉತ್ತಮ ಜತೆಯಾಟವಾಗಿಸುವಲ್ಲಿ ರಾಹುಲ್ ವಿಫಲವಾಗಿದ್ದಾರೆ. ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಭಾರತ ಒಂದು ವಿಕೆಟ್ ಕಳೆದುಕೊಂಡು 34 ರನ್ ಬಾರಿಸಿದ್ದು, ಇನ್ನೂ 320 ರನ್‌ಗಳ ಭಾರೀ ಹಿನ್ನೆಡೆಯಲ್ಲಿದೆ.
Lunch in Leeds 🍲
KL Rahul departs with the hosts in command. | | https://t.co/AZCdNvbRbc pic.twitter.com/5qSfPcVWnG
ಹೌದು, ಇಂಗ್ಲೆಂಡ್ ತಂಡವನ್ನು 432 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಎಚ್ಚರಿಕೆಯ ಆರಂಭವನ್ನು ಪಡೆಯಿತು. 18.5 ಓವರ್‌ಗಳನ್ನು ದಿಟ್ಟವಾಗಿ ಎದುರಿಸಿದ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ 34 ರನ್‌ಗಳನ್ನು ಬಾರಿಸಿದರು. ಲಂಚ್ ಬ್ರೇಕ್‌ಗೆ ಕೇವಲ ಒಂದು ಎಸೆತ ಬಾಕಿಯಿದ್ದಾಗ ರಾಹುಲ್, ಬೇರ್‌ಸ್ಟೋವ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಬೇಕಾಯಿತು. ರಾಹುಲ್ ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದರು, ಇದೀಗ ಎರಡನೇ ಇನಿಂಗ್ಸ್‌ನಲ್ಲಿ 54 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿ ಕ್ರೆಗ್ ಓವರ್‌ಟನ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ರೋಹಿತ್ ಶರ್ಮಾ 61 ಎಸೆತಗಳನ್ನು ಎದುರಿಸಿ 25 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
undefined
Ind vs Eng ಲೀಡ್ಸ್ ಟೆಸ್ಟ್: ಇಂಗ್ಲೆಂಡ್ ಆಲೌಟ್ @432, ರೂಟ್ ಪಡೆಗೆ 354 ರನ್‌ಗಳ ಮುನ್ನಡೆ
ಲೀಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 78 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತನ್ನ ನಾಯಕ ಜೋ ರೂಟ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 432 ರನ್ ಕಲೆಹಾಕಿತು. ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 354 ರನ್‌ಗಳ ಮುನ್ನಡೆ ಸಾಧಿಸಿತ್ತು.