
ನವದೆಹಲಿ(ಸೆ.14): ಇಂಗ್ಲೆಂಡ್-ಭಾರತ ನಡುವಿನ 5ನೇ ಟೆಸ್ಟ್ ಕೋವಿಡ್ ಕಾರಣದಿಂದಾಗಿ ರದ್ದಾದ ಬಳಿಕ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಭಾರೀ ನಷ್ಟಕ್ಕೆ ಸಿಲುಕುವ ಆತಂಕಕ್ಕೆ ಗುರಿಯಾಗಿದೆ. ಹೀಗಾಗಿ 5ನೇ ಟೆಸ್ಟ್ ಪಂದ್ಯವನ್ನು ಮುಂಬರುವ ದಿನಗಳಲ್ಲಿ ಆಡುವಂತೆ ಇಲ್ಲವೇ ಬಿಟ್ಟುಕೊಡುವಂತೆ ಇಸಿಬಿ, ಬಿಸಿಸಿಐ ಬಳಿ ಕೇಳುತ್ತಿದೆ ಎನ್ನಲಾಗಿದೆ.
5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ 2-1ರ ಮುನ್ನಡೆ ಸಾಧಿಸಿದೆ. ಒಂದು ವೇಳೆ ಐಸಿಸಿ ಪಂದ್ಯವನ್ನು ರದ್ದು ಎಂದು ಘೋಷಿಸಿದರೆ 5 ಪಂದ್ಯಗಳ ಸರಣಿ 2-1ರ ಅಂತರದಲ್ಲಿ ಭಾರತದ ಪಾಲಾಗಲಿದೆ. ಆಗ ಪಂದ್ಯದ ವಿಮೆ ಹಣ ಇಸಿಬಿಗೆ ಸಿಗುವುದಿಲ್ಲ. ಪಂದ್ಯವನ್ನು ಭಾರತ ಬಿಟ್ಟುಕೊಟ್ಟಿದೆ ಎಂದು ನಿರ್ಧಾರವಾದರೆ, ಆಗ ಸರಣಿ 2-2ರಲ್ಲಿ ಡ್ರಾಗೊಳ್ಳಲಿದ್ದು ಇಸಿಬಿಗೆ ವಿಮೆ ಹಣ ಸಿಗಲಿದೆ. ಪಂದ್ಯವನ್ನು ಬೇರೊಂದು ದಿನ ಆಯೋಜಿಸುವ ಬಗ್ಗೆ ಇಸಿಬಿ ಹಾಗೂ ಬಿಸಿಸಿಐ ಘೋಷಿಸಿದ್ದರೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ.
ಬಾಕಿ ಇರುವ ಒಂದು ಟೆಸ್ಟ್ ಆಡಲು ಸಿದ್ಧ ಎಂದ ಎಂದಿರುವ ಬಿಸಿಸಿಐ, ಮತ್ತೊಂದು ಆಯ್ಕೆಯನ್ನೂ ನೀಡಿದೆ ಎಂದು ತಿಳಿದುಬಂದಿದೆ. ಒಂದು ಬದಲು 2022ರಲ್ಲಿ ಪ್ರವಾಸ ಕೈಗೊಂಡ ವೇಳೆ 3 ಟಿ20 ಜೊತೆ ಹೆಚ್ಚುವರಿಯಾಗಿ 2 ಟಿ20 ಜೊತೆ ಹೆಚ್ಚುವರಿಯಾಗಿ 2 ಟಿ20 ಆಡಲು ಸಿದ್ದವಿರುವುದಾಗಿ ಹೇಳಿದೆ ಎನ್ನಲಾಗಿದೆ.
ಕೋವಿಡ್ ಭೀತಿಗೆ ಟೀಂ ಇಂಡಿಯಾ ಆಟಗಾರರು ಹೆದರಿದ್ದರು: ಸೌರವ್ ಗಂಗೂಲಿ
ಸೆಪ್ಟೆಂಬರ್ 19ರಿಂದ ಯುಎಇ ಚರಣದ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಟೀಂ ಇಂಡಿಯಾ ಆಟಗಾರರು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಆರೋಪಗಳನ್ನು ಅಲ್ಲಗಳೆದಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಆಟಗಾರರು ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನಾಡಲು ನಮ್ಮ ಆಟಗಾರರು ಕೋವಿಡ್ ಭೀತಿಯಿಂದಾಗಿ ಹಿಂದೇಟು ಹಾಕಿದರು ಎಂದು ದಾದಾ ಹೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.