IND vs ENG; ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ, ಆರಂಭಿಕ ಔಟ್!

By Suvarna NewsFirst Published Aug 2, 2021, 7:53 PM IST
Highlights
  • ಆಗಸ್ಟ್ 4 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭ
  • ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಇಂಜುರಿ ಶಾಕ್
  • ಆರಂಭಿಕ ಬ್ಯಾಟ್ಸ್‌ಮನ್ ಪಂದ್ಯದಿಂದ ಔಟ್

ನಾಂಟಿಂಗ್‌ಹ್ಯಾಮ್(ಆ.02): ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿ ಆಗಸ್ಟ್ 4 ರಿಂದ ಆರಂಭಗೊಳ್ಳಲಿದೆ. ಉಭಯ ತಂಡಗಳು ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ. ಅಭ್ಯಾಸ ಮಾಡುತ್ತಿದ್ದ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಿಂದ ಅಗರ್ವಾಲ್ ಹೊರಗುಳಿಯಲಿದ್ದಾರೆ.

ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿ: ಪೃಥ್ವಿ-ಸೂರ್ಯಗೆ ಒಲಿದ ಸ್ಥಾನ..!

ಅಭ್ಯಾಸದ ವೇಳೆ ಚೆಂಡು ಮಯಾಂಕ್ ಅಗರ್ವಾಲ್ ಹೆಲ್ಮೆಟ್‌ಗೆ ಬಡಿದಿದೆ. ಗಾಯಗೊಂಡ ಮಯಾಂಕ್ ಅಗರ್ವಾಲ್‌ಗೆ ತಕ್ಷಣವೆ ಚಿಕಿತ್ಸೆ ನೀಡಲಾಗಿದೆ. ಆದರೆ ತಲೆನೋವು ಉಲ್ಬಣಿಸಿದೆ. ಹೀಗಾಗಿ ಪರಿಶೀಲನೆ ನಡೆಸಿದ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಇಂಜುರಿ ಕಾರಣ ಮಯಾಂಕ್ ಅಗರ್ವಾಲ್ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ಹೇಳಿದೆ.

ಮಯಾಂಕ್ ಅಗರ್ವಾಲ್‌ ವೈದ್ಯರ ನಿರೀಕ್ಷಣೆಯಲ್ಲಿದ್ದಾರೆ. ಸದ್ಯ ಚೇತರಿಸಿಕೊಂಡಿರುವ ಮಯಾಂಕ್ ಅಗರ್ವಾಲ್ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಅವರ ಆರೋಗ್ಯ ಸ್ಥಿತಿ ಪರಿಗಣಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಅಭ್ಯಾಸ ಪಂದ್ಯ: ಉಮೇಶ್-ಸಿರಾಜ್ ಬೌಲಿಂಗ್‌ ಝಲಕ್‌ ಭಾರತ ಮೇಲುಗೈ

ಮಯಾಂಕ್ ಅಗರ್ವಾಲ್ ಅಲಭ್ಯತೆ ಇದೀಗ ಟೀಂ ಇಂಡಿಯಾ ತಲೆನೋವು ಹೆಚ್ಚಿಸಿದೆ. ಕಾರಣ ಈಗಾಗಲೇ ಇಂಜುರಿ ಕಾರಣದಿಂದ ಟೀಂ ಇಂಡಿಯಾದ ಶುಭಮನ್ ಗಿಲ್, ವಾಶಿಂಗ್ಟನ್ ಸುಂದರ್ ಹಾಗೂ ಆವೇಶ್ ಖಾನ್ ಸರಣಿಗೆ ಅಲಭ್ಯರಾಗಿದ್ದಾರೆ. ಇದರ ಬೆನ್ನಲ್ಲೇ ಮಯಾಂಕ್ ಅರ್ಗವಾಲ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿರುವುದು ಹಿನ್ನಡೆಯಾಗಿದೆ.

ಇಂಜುರಿ ಕಾರಣ ತಂಡದಿಂದ ಹೊರಗುಳಿದ ಆಟಗಾರರ ಬದಲು, ಶ್ರೀಲಂಕಾ ಪ್ರವಾಸ ಮುಗಿಸಿದ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಈಗಾಗಲೇ ತಂಡ ಸೇರಿಕೊಂಡಿದ್ದಾರೆ. ಆದರೆ ಕ್ವಾರಂಟೈನ್ ಅನಿವಾರ್ಯವಾಗಿರುವ ಕಾರಣ 3ನೇ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಲಭ್ಯರಾಗಲಿದ್ದಾರೆ. 

click me!