
ಲಂಡನ್(ಸೆ.04): ಭಾರತ-ಇಂಗ್ಲೆಂಡ್ ನಡುವಿನ ಕಳೆದೆರಡು ಟೆಸ್ಟ್ ಪಂದ್ಯದ ವೇಳೆ ‘ಜಾರ್ವೊ69’ ಎನ್ನುವ ಹೆಸರುಳ್ಳ ಭಾರತೀಯ ಜೆರ್ಸಿ ಧರಿಸಿ ಮೈದಾನಕ್ಕೆ ನುಗ್ಗಿದ್ದ ಡೇನಿಯಲ್ ಜಾರ್ವಿಸ್, ಶುಕ್ರವಾರವೂ ಮೈದಾನದೊಳಗೆ ಕಾಣಿಸಿಕೊಂಡರು. ಮತ್ತೊಮ್ಮೆ ಪಂದ್ಯಕ್ಕೆ ಅಡ್ಡಿಪಡಿಸಿದ ಪರಿಣಾಮ ಜಾರ್ವಿಸ್‌ರನ್ನು ದಕ್ಷಿಣ ಲಂಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸತತ 3ನೇ ಬಾರಿಗೆ ಭದ್ರತಾ ಲೋಪವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಮಾಜಿ ಕ್ರಿಕೆಟಿಗರು, ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಶುಕ್ರವಾರ ಬೌಲಿಂಗ್ ಮಾಡುವುದಾಗಿ ಮೈದಾನಕ್ಕೆ ನುಗ್ಗಿದ ಜಾರ್ವೊ, ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋವ್‌ಗೆ ಡಿಕ್ಕಿ ಹೊಡೆದರು. ಭದ್ರತಾ ಸಿಬ್ಬಂದಿ ಜಾರ್ವೊರನ್ನು ಮೈದಾನದಿಂದ ಹೊರಗಟ್ಟಿದರು. ಲೀಡ್ಸ್ ಕ್ರೀಡಾಂಗಣಕ್ಕೆ ಜಾರ್ವೊಗೆ ಆಜೀವ ನಿಷೇಧ ಹೇರಲಾಗಿದೆ.
Ind vs Eng ಇಂಗ್ಲೆಂಡ್ ಕಟ್ಟಿಹಾಕುವ ಟೀಂ ಇಂಡಿಯಾದಾಸೆಗೆ ಪೋಪ್-ವೋಕ್ಸ್ ತಣ್ಣೀರು
ಟೀಂ ಇಂಡಿಯಾ ಜೆರ್ಸಿ ತೊಟ್ಟು ಮೈದಾನದೊಳಗೆ ಪ್ರವೇಶಿಸಿ ಆಟಕ್ಕೆ ಅಡ್ಡಿಪಡಿಸುವ ಇಂಗ್ಲೆಂಡ್‌ನ ಕ್ರಿಕೆಟ್ ಅಭಿಮಾನಿ ಡೇನಿಯಲ್ ಜಾರ್ವಿಸ್ ಅಲಿಯಾಸ್ ‘ಜಾರ್ವೊ 69’ಗೆ ಯಾರ್ಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಹೆಡಿಂಗ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ಆಜೀವ ನಿಷೇಧ ಹೇರಿದೆ. ಅಲ್ಲದೇ ದಂಡವನ್ನು ವಿಧಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.