* ಓವಲ್ ಟೆಸ್ಟ್‌ನಲ್ಲಿ ಕಮ್‌ಬ್ಯಾಕ್ ಮಾಡುವತ್ತ ಇಂಗ್ಲೆಂಡ್ ದಿಟ್ಟ ಹೆಜ್ಜೆ
* ಬೇರ್‌ಸ್ಟೋವ್-ಓಲಿ ಪೋಪ್ ಭರ್ಜರಿ ಜತೆಯಾಟ
* ಮತ್ತೆರಡು ವಿಕೆಟ್ ಕಬಳಿಸಿ ಮಿಂಚಿದ ಉಮೇಶ್ ಯಾದವ್
ಲಂಡನ್(ಸೆ.03): ಓಲಿ ಪೋಪ್ ಹಾಗೂ ಜಾನಿ ಬೇರ್‌ಸ್ಟೋವ್ ಆರನೇ ವಿಕೆಟ್‌ಗೆ ಮುರಿಯದ 77 ರನ್‌ಗಳ ಜತೆಯಾಟವಾಡುವ ಮೂಲಕ ಓವಲ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿದ್ದಾರೆ. ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಇದೀಗ ಚೇತರಿಕೆಯತ್ತ ಮುಖ ಮಾಡಿದೆ. ಎರಡನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 139 ರನ್ ಬಾರಿಸಿದ್ದು, ಇನ್ನು ಕೇವಲ 52 ರನ್‌ಗಳ ಹಿನ್ನಡೆಯಲ್ಲಿದೆ.
ಹೌದು, ಮೊದಲ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 53 ರನ್ ಬಾರಿಸಿದ್ದ ಇಂಗ್ಲೆಂಡ್ ಎರಡನೇ ದಿನ ಖಾತೆ ತೆರೆಯುವ ಮುನ್ನವೇ ನೈಟ್ ವಾಚ್‌ಮನ್ ಕ್ರೆಗ್ ಓವರ್‌ಟನ್‌ರನ್ನು ವೇಗಿ ಉಮೇಶ್ ಯಾದವ್ ತಾವೆಸೆದ ಮೊದಲ ಓವರ್‌ನಲ್ಲೇ ಪೆವಿಲಿಯನ್ನಿಗಟ್ಟಿದರು. ಇದಾಗಿ ಕೆಲವೇ ಓವರ್‌ಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಡೇವಿಡ್ ಮಲಾನ್(31) ಅವರನ್ನು ಬಲಿ ಪಡೆಯುವಲ್ಲಿ ಉಮೇಶ್ ಯಾದವ್ ಮತ್ತೊಮ್ಮೆ ಯಶಸ್ವಿಯಾದರು. ಈ ವೇಳೆ 62 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತ್ತು.
Ind vs Eng ಓವಲ್ ಟೆಸ್ಟ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಕಂಗಾಲು..!
ಪೋಪ್-ಬೇರ್‌ಸ್ಟೋವ್ ಜುಗಲ್ಬಂದಿ: ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ 6ನೇ ವಿಕೆಟ್‌ಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೇರ್‌ಸ್ಟೋವ್ ಹಾಗೂ ಓಲಿ ಪೋಪ್ ಆಸರೆಯಾದರು. ಬೇರ್‌ಸ್ಟೋವ್ 63 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ ಅಜೇಯ 34 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಓಲಿ ಪೋಪ್ 66 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 38 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
4ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಶಾರ್ದೂಲ್ ಠಾಕೂರ್ ಸಮಯೋಚಿತ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 191 ರನ್ ಬಾರಿಸಿ ಸರ್ವಪತನ ಕಂಡಿತ್ತು.