Ind vs Ban: ಭಾರತ-ಬಾಂಗ್ಲಾದೇಶ ಸರಣಿ ಎಲ್ಲಿ? ಯಾವಾಗ? ನೇರ ಪ್ರಸಾರವೆಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

By Naveena K VFirst Published Dec 3, 2022, 5:14 PM IST
Highlights

ಭಾರತ-ಬಾಂಗ್ಲಾದೇಶ ತಂಡಗಳ ನಡುವಿನ ಏಕದಿನ ಸರಣಿ ಡಿಸೆಂಬರ್ 04ರಿಂದ ಆರಂಭ
ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸಿರುವ ಟೀಂ ಇಂಡಿಯಾ
ಭಾರತೀಯ ಕಾಲಮಾನ ಬೆಳಗ್ಗೆ 11.30ರಿಂದ ಪಂದ್ಯ ಆರಂಭ

ಬೆಂಗಳೂರು(ಡಿ.03): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿದೆ. ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯು ಡಿಸೆಂಬರ್ 04ರಿಂದ ಆರಂಭವಾಗಲಿದ್ದು, ಇದಾದ ಬಳಿಕ ಉಭಯ ತಂಡಗಳು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

ಕಳೆದ ತಿಂಗಳಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ವಿಶ್ರಾಂತಿಗೆ ಜಾರಿದ್ದರು. ಹೀಗಾಗಿ ನ್ಯೂಜಿಲೆಂಡ್ ಎದುರಿನ ಸರಣಿಯಿಂದ ಈ ಆಟಗಾರರು ಹೊರಗುಳಿದಿದ್ದರು. ಇದೀಗ ಈ ಎಲ್ಲಾ ಆಟಗಾರರು ಭಾರತ ತಂಡ ಕೂಡಿಕೊಂಡಿದ್ದು, ಬಾಂಗ್ಲಾದೇಶ ಎದುರಿನ ಸರಣಿಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. 

The two Captains unveil the ODI series trophy on the eve of the 1st ODI at SBNCS, Mirpur. pic.twitter.com/h08tPXn69b

— BCCI (@BCCI)

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಢಾಕಾದ ಮೀರ್‌ಪುರ್‌ ಕ್ರೀಡಾಂಗಣದಲ್ಲಿ ಡಿಸೆಂಬರ್ 4, ಡಿಸೆಂಬರ್ 7, ಡಿಸೆಂಬರ್ 10ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 14ರಿಂದ 18ರ ವರೆಗೂ ಛಟ್ಟೋಗ್ರಾಮ್‌ನಲ್ಲಿ ಮೊದಲ ಟೆಸ್ಟ್‌, ಡಿ.22ರಿಂದ 26ರ ವರೆಗೂ ಢಾಕಾದಲ್ಲಿ 2ನೇ ಟೆಸ್ಟ್‌ ನಡೆಯಲಿದೆ.

Ind vs Ban ಬಾಂಗ್ಲಾದೇಶ ವಿರುದ್ದ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಮೌನ ಮುರಿದ ಮೊಹಮ್ಮದ್ ಶಮಿ..!

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 04ರಂದು,  ಢಾಕಾದ ಮೀರ್‌ಪುರ್‌ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ 11.30ಕ್ಕೆ ಆರಂಭವಾಗಲಿದೆ. ಈ ಪಂದ್ಯವನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ.

ಬಾಂಗ್ಲಾದೇಶ ಎದುರಿನ ಏಕದಿನ ಸರಣಿಗೆ ಭಾರತದ ಪರಿಷ್ಕೃತ ತಂಡ ಹೀಗಿದೆ ನೋಡಿ

ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್(ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್(ವಿಕೆಟ್ ಕೀಪರ್), ಇಶಾನ್ ಕಿಶನ್, ಶಹಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಕುಲ್ದೀಪ್ ಸೆನ್.

ಭಾರತ ಎದುರಿನ ಸರಣಿಗೆ ಬಾಂಗ್ಲಾದೇಶ ತಂಡ ಹೀಗಿದೆ ನೋಡಿ:

ತಮಿಮ್ ಇಕ್ಬಾಲ್(ನಾಯಕ), ಲಿಟನ್ ದಾಸ್, ಅನ್ಮುಲ್ ಹಕ್, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ, ಅಫಿಫ್ ಹೊಸೈನ್, ಯಾಸಿರ್ ಅಲಿ, ಮೆಹದಿ ಹಸನ್, ಮುಷ್ತಾಫಿಜುರ್ ರೆಹಮಾನ್, ಟಸ್ಕಿನ್ ಅಹಮದ್, ಹಸನ್ ಮೊಹಮೂದ್, ಎಬಾದತ್ ಹೊಸೈನ್, ನಸುಮ್ ಅಹಮದ್, ಮೆಹಮೂದ್ ಉಲ್ಲಾಹ್, ನಜ್ಮುಲ್ ಹೊಸೈನ್ ಶಾಂಟೊ, ನೂರುಲ್ ಹಸನ್ ಸೋಹನ್.

click me!