Ind vs Aus: 3 ವರ್ಷಗಳ ಬಳಿಕ ಟೀಂ ಇಂಡಿಯಾ ಕೂಡಿಕೊಂಡ ಮಾರಕ ವೇಗಿ ಉಮೇಶ್ ಯಾದವ್..!

By Naveen KodaseFirst Published Sep 18, 2022, 4:14 PM IST
Highlights

ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯಿಂದ ಹೊರಬಿದ್ದ ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ ಬದಲಿಗೆ ಭಾರತ ತಂಡ ಕೂಡಿಕೊಂಡ ಉಮೇಶ್ ಯಾದವ್
ಮೂರು ವರ್ಷಗಳ ಬಳಿಕ ಭಾರತ ಟಿ20 ತಂಡ ಕೂಡಿಕೊಂಡ ಉಮೇಶ್ ಯಾದವ್

ಮೊಹಾಲಿ(ಸೆ.18): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಸರಣಿ ಆರಂಭಕ್ಕೂ ಮುನ್ನವೇ ಅನುಭವಿ ವೇಗಿ ಮೊಹಮ್ಮದ್ ಶಮಿ, ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಮೊಹಮ್ಮದ್ ಶಮಿ ಅವರ ಬದಲಿಗೆ ಮತ್ತೋರ್ವ ಅನುಭವಿ ವೇಗಿ ಉಮೇಶ್ ಯಾದವ್‌, ಟೀಂ ಇಂಡಿಯಾ ಕೂಡಿಕೊಂಡಿದ್ದಾರೆ. 

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್‌ ತಂಡದ ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ, ಆಸ್ಟ್ರೇಲಿಯಾ ಎದುರಿನ ಸರಣಿಗೂ ಮುನ್ನ ಕೋವಿಡ್ 19 ಸೋಂಕು ತಗುಲಿತ್ತು. ಹೀಗಾಗಿ ಟಿ20 ಸರಣಿಯಿಂದ ಶಮಿ ಹೊರಬಿದ್ದಿದ್ದರು. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 20ರಿಂದ ಮೊಹಾಲಿಯಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲೇ ಉಮೇಶ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಉಮೇಶ್ ಯಾದವ್‌, 2019ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ದವೇ ಕೊನೆಯ ಟಿ20 ಪಂದ್ಯವನ್ನಾಡಿದ್ದರು. ಇದೀಗ ಬರೋಬ್ಬರಿ 3 ವರ್ಷಗಳ ಬಳಿಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಉಮೇಶ್ ಯಾದವ್ ಯಶಸ್ವಿಯಾಗಿದ್ದಾರೆ. 

Update 🚨 - Mohd. Shami tests positive for COVID-19, Navdeep Saini ruled out of India ‘A’ series.

More details ⬇️https://t.co/XEhzkqh4FD

— BCCI (@BCCI)

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಉಭಯ ತಂಡಗಳ ಪಾಲಿಗೆ ತಾಲೀಮಿನ ಸರಣಿ ಎನಿಸಿಕೊಂಡಿರುವ ಟಿ20 ಸರಣಿಯು ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಸಾಕಷ್ಟು ದೀರ್ಘ ಸಮಯದ ಬಳಿಕ ಮೊಹಮ್ಮದ್ ಶಮಿಗೆ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಮೊಹಮ್ಮದ್ ಶಮಿಗೆ ಭಾರತ ಟಿ20 ತಂಡದ ಬಾಗಿಲು ಮುಚ್ಚಲಾಗಿತ್ತು. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಫೈನಲ್‌ ಪ್ರವೇಶಿಸಲು ವಿಫಲವಾದ ಬೆನ್ನಲ್ಲೇ ಹಲವು ಹಿರಿಯ ಆಟಗಾರರು ಶಮಿ ತಂಡದಲ್ಲಿರಬೇಕಿತ್ತು ಎಂದು ಆಗ್ರಹಿಸಿದ್ದರು. ಹೀಗಾಗಿ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮೀಸಲು ಆಟಗಾರರ ರೂಪದಲ್ಲಿ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಇದೀಗ ಶಮಿ, ಭಾರತ ತಂಡದಿಂದ ಹೊರಬಿದ್ದಿದ್ದಾರೆ.

Ind vs Aus: ಆಸ್ಟ್ರೇಲಿಯಾ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಶಾಕ್, ಸ್ಟಾರ್ ವೇಗಿ ಸರಣಿಯಿಂದಲೇ ಔಟ್..!

ಇನ್ನೊಂದೆಡೆ, ಯುವ ವೇಗಿ ನವದೀಪ್ ಸೈನಿ, ಗಾಯದ ಸಮಸ್ಯೆಯಿಂದಾಗಿ ಹಾಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಹಾಗೂ ಮುಂಬರುವ ನ್ಯೂಜಿಲೆಂಡ್ 'ಎ' ವಿರುದ್ದ 3 ಪಂದ್ಯಗಳ ಏಕದಿನ ಸರಣಿಯ ಭಾರತ 'ಎ' ತಂಡದಿಂದಲೂ ಹೊರಬಿದ್ದಿದ್ದಾರೆ. ಇದೀಗ ನ್ಯೂಜಿಲೆಂಡ್ 'ಎ' ವಿರುದ್ದದ ಸರಣಿಗೆ ಆಯ್ಕೆ ಸಮಿತಿಯು ರಿಷಿ ಧವನ್‌ ಅವರಿಗೆ ಬುಲಾವ್ ನೀಡಿದೆ.

click me!