ಭಾರತ-ಆಸ್ಟ್ರೇಲಿಯಾ 2ನೇ ಪಂದ್ಯಕ್ಕೆ DLS ಅನ್ವಯ, 33 ಓವರ್‌ನಲ್ಲಿ 317 ರನ್ ಟಾರ್ಗೆಟ್!

By Suvarna News  |  First Published Sep 24, 2023, 8:38 PM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯ ಮಳೆಯಿಂದ ಸ್ಥಗಿತಗೊಂಡ ಕಾರಣ ಡಕ್ ವರ್ತ್ ಲೂಯಿಸ್ ನಿಯಮ ಅನ್ವಯಿಸಲಾಗಿದೆ. ಹೀಗಾಗಿ 50 ಓವರ್ ಪಂದ್ಯವನ್ನು 33 ಓವರ್‌ಗೆ ಕಡಿತಗೊಳಿಸಲಾಗಿದೆ. 317ರನ್ ಟಾರ್ಗೆಟ್ ನೀಡಲಾಗಿದೆ
 


ಇಂದೋರ್(ಸೆ.24) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ  ಏಕದಿನ ಪಂದ್ಯ ಮತ್ತೆ ಆರಂಭಗೊಂಡಿದೆ. ಮಳೆಯಿಂದ ಹಚ್ಚಿನ ಸಮಯ ಪಂದ್ಯ ಸ್ಥಗಿತಗೊಂಜ ಕಾರಣ ಓವರ್ ಕಡಿತಗೊಳಿಸಲಾಗಿದೆ. 50 ಓವರ್ ಪಂದ್ಯವನ್ನು 33 ಓವರ್‌ಗೆ ಕಡಿತಗೊಳಿಸಲಾಗಿದೆ. ಇಷ್ಟೇ ಅಲ್ಲ ಆಸ್ಟ್ರೇಲಿಯಾ ಗೆಲುವಿಗೆ 317ರನ್ ಟಾರ್ಗೆಟ್ ನೀಡಲಾಗಿದೆ. 

ಆಸ್ಟ್ರೇಲಿಯಾ ಚೇಸಿಂಗ್ ವೇಳೆ ಮಳೆ ವಕ್ಕರಿಸಿದ ಕಾರಣ ಪಂದ್ಯ ಸ್ಥಗಿತಗೊಂಡಿತ್ತು. ಆಸ್ಟ್ರೇಲಿಯಾ 9 ಓವರ್‌ಗೆ 2 ವಿಕೆಟ್ ಕಳೆದುಕೊಂಡು 52 ರನ್ ಸಿಡಿಸಿತ್ತು.  ಡೇವಿಡ್ ವಾರ್ನರ್ ಅಜೇಯ 26 ಹಾಗೂ ಮಾರ್ನಸ್ ಲಬುಶೆನ್ ಅಜೇಯ 17 ರನ್ ಸಿಡಿಸಿದ್ದರು.  ಈ ವೇಳೆ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತ್ತು. ಆದರೆ ಕೆಲ ಹೊತ್ತು ಮಳೆ ವಕ್ಕರಿಸಿದ ಕಾರಣ ಪಂದ್ಯ ಆರಂಭ ವಿಳಂಬವಾಗಿತ್ತು. ಹೀಗಾಗಿ ಓವರ್ ಕಡಿತಗೊಳಿಸಲಾಗಿದೆ. ಇದೀಗ ಆಸ್ಟ್ರೇಲಿಯಾಗೆ ಕಠಿಣ ಸವಾಲು ಎದುರಾಗಿದೆ. ಕಠಿಣ ಗುರಿ ಕಾರಣ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾಗಿದ್ದಾರೆ. 

Latest Videos

undefined

ಗಿಲ್-ಅಯ್ಯರ್ ತಲಾ ನೂರು, ಆಸೀಸ್‌ಗೆ ಪಂದ್ಯ ಗೆಲ್ಲಲು ಗುರಿ ನಾನೂರು..!

ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಆಸ್ಟ್ರೇಲಿಯಾದ ಪ್ರಮುಖ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ವೇಗದ ದಾಳಿ ನಡೆಸಿದರೆ, ಆರ್ ಅಶ್ವಿನ್ ಸ್ಪಿನ್ ದಾಳಿ ಆರಂಭಿಸಿದ್ದಾರೆ. 

ದ್ವಿತೀಯ ಏಕದಿನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆಕ್ರಮಣಕಾರಿ ಆಟ ಪ್ರದರ್ಶಿಸಿತ್ತು. ಭಾರತದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಬೃಹತ್ ಮೊತ್ತ ದಾಖಲಾಯಿತು. ರುತುರಾಜ್ ಗಾಯಕ್ವಾಡ್ 8 ರನ್ ಸಿಡಿಸಿ ನಿರಾಸೆ ಅನುಭವಿಸಿದರೆ. ಆದರೆ ಇನ್ನುಳಿದ ಬ್ಯಾಟ್ಸ್‌ಮನ್ ಅಬ್ಬರಿಸಿದರು.  ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಸೆಂಚುರಿ ಸಿಡಿಸಿ ಮಿಂಚಿದರು. ಗಿಲ್ 104 ರನ್ ಸಿಡಿಸಿದರೆ ಅಯ್ಯರ್ 105 ರನ್ ಸಿಡಿಸಿದರು.

ನಾಯಕ ಕೆಎಲ್ ರಾಹುಲ್ 52 ರನ್ ಕಾಣಿಕೆ ನೀಡಿದರು. ಇನ್ನು ಇಶಾನ್ ಕಿಶನ್ 31 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಅಜೇಯ 72 ರನ್ ಸಿಡಿಸಿದರು.ರವೀಂದ್ರ ಜಡೇಡಾ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್ ನಷ್ಟಕ್ಕೆ 399 ರನ್ ಸಿಡಿಸಿತು.

Asian Games: ಬಾಂಗ್ಲಾವನ್ನು ಅನಾಯಾಸವಾಗಿ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಮಹಿಳಾ ಟೀಂ ಇಂಡಿಯಾ

click me!