Ind vs Afg: ಇಂದೋರ್‌ನಲ್ಲಿಂದು ಭಾರತಕ್ಕೆ ಸರಣಿ ಗೆಲುವಿನ ತವಕ

By Naveen Kodase  |  First Published Jan 14, 2024, 11:16 AM IST

14 ತಿಂಗಳ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಮರಳಿದ್ದ ನಾಯಕ ರೋಹಿತ್ ಶರ್ಮಾ ಆರಂಭಿಕ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಹೀಗಾಗಿ ವಿಶ್ವಕಪ್‌ಗೂ ಮುನ್ನ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವರಿಗೆ ಮತ್ತೊಂದು ಅವಕಾಶ ಸಿಗಲಿದ್ದು, ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.


ಇಂದೋರ್(ಜ.14): ಸಾಂಘಿಕ ಪ್ರದರ್ಶನದೊಂದಿಗೆ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಹೊಸಕಿ ಹಾಕಿದ್ದ ಟೀಂ ಇಂಡಿಯಾ, ಪ್ರವಾಸಿ ತಂಡದ ವಿರುದ್ಧ ಭಾನುವಾರ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲ್ಲಲು ಭಾರತ ಯೋಜನೆ ರೂಪಿಸಿದ್ದರೆ, ಆಫ್ಘನ್ ಕಮ್‌ಬ್ಯಾಕ್ ಮೂಲಕ ಸರಣಿ ಸಮಬಲಗೊಳಿಸುವ ನಿರೀಕ್ಷೆಯಲ್ಲಿದೆ. ಪಂದ್ಯಕ್ಕೆ ಇಂದೋರ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

14 ತಿಂಗಳ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಮರಳಿದ್ದ ನಾಯಕ ರೋಹಿತ್ ಶರ್ಮಾ ಆರಂಭಿಕ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಹೀಗಾಗಿ ವಿಶ್ವಕಪ್‌ಗೂ ಮುನ್ನ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವರಿಗೆ ಮತ್ತೊಂದು ಅವಕಾಶ ಸಿಗಲಿದ್ದು, ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಗೈರಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯಕ್ಕೆ ಲಭ್ಯರಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಆದರೆ ಇಬ್ಬರಿಂದಲೂ ಸ್ಫೋಟಕ ಆಟದ ಅಗತ್ಯವಿದೆ. ಯುವ ತಾರೆಗಳಾದ ಜಿತೇಶ್ ಶರ್ಮಾ, ಶಿವಂ ದುಬೆ, ರಿಂಕು ಸಿಂಗ್‌ಮತ್ತೊಮ್ಮೆ ಅಬ್ಬರಿಸುವ ಕಾತರದಲ್ಲಿದ್ದಾರೆ.

Tap to resize

Latest Videos

ಮಯಾಂಕ್ ಅಗರ್‌ವಾಲ್ ಭರ್ಜರಿ ಶತಕ: ಪಂಜಾಬ್ ಎದುರು ಕರ್ನಾಟಕ ಬಿಗಿ ಹಿಡಿತ

ಮತ್ತೊಂದೆಡೆ ಆಫ್ಘನ್ ವಿಶ್ವದ ಯಾವುದೇ ಬಲಿಷ್ಠ ತಂಡವನ್ನೂ ಸೋಲಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಈ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿ ಸರಣಿ ಸಮಬಲಗೊಳಿಸಲು ಕಾಯುತ್ತಿದೆ. ತಂಡ ಹೆಚ್ಚಾಗಿ ರಹ್ಮಾನುಲ್ಲಾ ಗುರ್ಬಾಜ್, ಜದ್ರಾನ್, ನಬಿ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದ್ದು, ತಂಡದ ತಾರಾ ಸ್ಪಿನ್ನರ್‌ಗಳು ಮಿಂಚಿದರಷ್ಟೇ ತಂಡಕ್ಕೆ ಗೆಲುವು ಸಾಧ್ಯವಿದೆ

ಸಂಭಾವ್ಯ ಆಟಗಾರರ ಪಟ್ಟಿ: 

ಭಾರತ: ರೋಹಿತ್ ಶರ್ಮಾ(ನಾಯಕ),ಯಶಸ್ವಿ ಜೈಸ್ವಾಲ್/ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್/ರವಿ ಬಿಷ್ಣೋಯಿ, ಆರ್ಶದೀಪ್ ಸಿಂಗ್, ಆವೇಶ್ ಖಾನ್/ಮುಕೇಶ್ ಕುಮಾರ್.

ಆಫ್ಘಾನಿಸ್ತಾನ: ಹಜ್ರತುಲ್ಲಾ/ರೆಹಮತ್, ರೆಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ(ನಾಯಕ), ಅಜ್ಮತುಲ್ಲಾ, ನಜೀಬುಲ್ಲಾ, ಮೊಹಮ್ಮದ್ ನಬಿ, ಕರೀಂ, ಗುಲ್ಬದ್ದಿನ್ ನೈಬ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಫಜಲ್‌ ಹಕ್ ಫಾರೂಕಿ. 

ಪಿಚ್ ರಿಪೋರ್ಟ್: ಇಂದೋರ್ ಪಿಚ್ ಬ್ಯಾಟರ್‌ಗಳ ಪಾಲಿನ ಸ್ವರ್ಗ ಎನಿಸಿಕೊಂಡಿದೆ. ಇಲ್ಲಿ ಮತ್ತೊಮ್ಮೆ ಬೃಹತ್ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಟಾಸ್ ಪ್ರಮುಖ ಪಾತ್ರ ವಹಿಸಬಹುದು.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

click me!