ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

By Suvarna News  |  First Published Jun 15, 2021, 12:41 PM IST

* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ 15 ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಪ್ರಕಟ

* ತಂಡ ಕೂಡಿಕೊಂಡ ಕೇನ್‌ ವಿಲಿಯಮ್ಸನ್‌, ಬಿ.ಜೆ, ವ್ಯಾಟ್ಲಿಂಗ್

* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಜೂನ್ 18ರಿಂದ ಆರಂಭ


ಸೌಥಾಂಪ್ಟನ್‌(ಜೂ.15): ಭಾರತ ವಿರುದ್ದ ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ಆರಂಭವಾಗಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಬಲಿಷ್ಠ ನ್ಯೂಜಿಲೆಂಡ್ ಕ್ರಿಕೆಟ್ ತಂಡವನ್ನು ಕೋಚ್‌ ಗ್ಯಾರಿ ಸ್ಟೆಡ್ ಪ್ರಕಟಿಸಿದ್ದು, ಕೇನ್‌ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಮೊಣಕೈ ಗಾಯದಿಂದಾಗಿ ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕೇನ್ ವಿಲಿಯಮ್ಸನ್‌ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಂಡ ಕೂಡಿಕೊಂಡಿದ್ದಾರೆ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲಾಥಮ್ ತಂಡವನ್ನು ಮುನ್ನೆಡೆಸಿ ಇಂಗ್ಲೆಂಡ್ ಎದುರು ಕಿವೀಸ್ ತಂಡ 8 ವಿಕೆಟ್‌ಗಳ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಬಿ.ಜೆ. ವ್ಯಾಟ್ಲಿಂಗ್ ಸಹಾ ಕಿವೀಸ್ ತಂಡ ಕೂಡಿಕೊಂಡಿದ್ದಾರೆ. 

Latest Videos

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌: ನ್ಯೂಜಿಲೆಂಡ್‌ಗೆ ಹೆಚ್ಚು ಅನುಕೂಲವೆಂದ ಪೂಜಾರ

ಭಾರತ ತಂಡವು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿಯೇ ಕಾಣುತ್ತಿದೆ. ತಂಡದಲ್ಲಿ ಎಲ್ಲರೂ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರೆಷ್ಟು ನಮಗೆ ಸವಾಲಾಗಬಲ್ಲರು ಎನ್ನುವುದರ ಬಗ್ಗೆ ನಾವು ಯೋಚಿಸುವುದಿಲ್ಲ, ನಮ್ಮ ತಂಡ ಓರ್ವ ತಜ್ಞ ಸ್ಪಿನ್ನರ್ ಹಾಗೂ ಓರ್ವ ಆಲ್ರೌಂಡರ್‌ನೊಂದಿಗೆ ಕಣಕ್ಕಿಳಿಯುವುದಾಗಿ ಇಂಗ್ಲೆಂಡ್ ಕೋಚ್ ಸ್ಟೆಡ್‌ ತಿಳಿಸಿದ್ದಾರೆ.

The have named a 15-member squad for the Final 👇 pic.twitter.com/g2T4XNCrMW

— ICC (@ICC)

ಮಿಚೆಲ್ ಸ್ಯಾಂಟ್ನರ್ ಬದಲಿಗೆ 32 ವರ್ಷದ ಎಡಗೈ ಸ್ಪಿನ್ನರ್‌ ಅಜಾಬ್ ಪಟೇಲ್‌ಗೆ ಕಿವೀಸ್ ತಂಡದಲ್ಲಿ ಸ್ಥಾನ ನೀಡಲಾಗಿದೆ. 

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ನ್ಯೂಜಿಲೆಂಡ್ ತಂಡ ಹೀಗಿದೆ ನೋಡಿ:

ಕೇನ್ ವಿಲಿಯಮ್ಸನ್(ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಡೆವೊನ್ ಕಾನ್‌ವೇ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲಾಥಮ್, ಹೆನ್ರಿ ನಿಕೋಲಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿ.ಜೆ. ವ್ಯಾಟ್ಲಿಂಗ್ ಮತ್ತು ವಿಲ್ ಯಂಗ್.
 

click me!