ಸೆಮಿಫೈನಲ್ ಪಂದ್ಯದ ಬೆಸ್ಟ್ ಫೀಲ್ಡರ್ ಅವಾರ್ಡ್‌ನಲ್ಲಿ ಟ್ವಿಸ್ಟ್, ಬಾಜಿರಾವ್‌ಗೆ ಸಿಕ್ಕಿತಾ ಮೆಡಲ್?

By Suvarna News  |  First Published Nov 16, 2023, 7:56 PM IST

ಚಿರತೆಯ ವೇಗ, ಹದ್ದಿನ ಕಣ್ಣು, ರಾಜ ನವಘನ್ ನಂತಹ ಫೀಲ್ಡಿಂಗ್...ಇದು ರಣವೀರ್ ಸಿಂಗ್ ಅಭಿನಯದ ಬಾಜಿರಾವ್ ಚಿತ್ರದ ಡೈಲಾಗ್. ಭಾರತ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಬೆಸ್ಟ್ ಫೀಲ್ಡರ್ ಅವಾರ್ಡ್ ಈ ಎಲ್ಲಾ ಅಂಶಗಳಿರುವ ಆಟಗಾರನಿಗೆ ನೀಡಲಾಗಿದೆ. ಹಾಗಾದರೆ ಮೆಡಲ್ ಪಡೆದ ಕ್ರಿಕೆಟಿಗ ಯಾರು?
 


ಮುಂಬೈ(ನ.16) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದಲ್ಲಿ ವಿಶೇಷ ಟ್ರೆಂಡ್ ಸೃಷ್ಟಿ ಮಾಡಲಾಗಿದೆ. ಅತ್ಯುತ್ತಮ ಫೀಲ್ಡಿಂಗ್ ಮಾಡುವ ಕ್ರಿಕೆಟಿಗನಿಗೆ ಮೆಡಲ್ ನೀಡಿ ಗೌರವಿಸಲಾಗುತ್ತದೆ. ಈ ಮೂಲಕ ಆಟಗಾರರ ಉತ್ತೇಜಿಸುವ ಕಾರ್ಯವನ್ನು ಟೀಂ ಮ್ಯಾನೇಜ್ಮೆಂಟ್ ಮಾಡುತ್ತಿದೆ. ಪ್ರತಿ ಪಂದ್ಯ ಮುಗಿದ ಬೆನ್ನಲ್ಲೇ ಅವಾರ್ಡ್ ವಿತರಿಸಲಾಗುತ್ತಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಬೆಸ್ಟ್ ಫೀಲ್ಡರ್ ಅವಾರ್ಡ್ ಕುತೂಹಲವನ್ನು ಬಿಸಿಸಿಐ ಇಂದು ಬಹಿರಂಗಪಡಿಸಿದೆ. ಈ ಅವರಾಡ್ ಬಾಜಿರಾವ್‌ಗೆ ಸಿಕ್ಕಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕಾರಣ ಹಿಂದಿನ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದ ಸೂರ್ಯಕುಮಾರ್ ಯಾದವ್ ಮೆಡಲ್ ಪ್ರಧಾನ ಮಾಡುವಾಗ ಬಾಜಿರಾವ್ ಚಿತ್ರದ ಡೈಲಾಗ್ ಹೇಳಿದ್ದಾರೆ. ಚಿರತೆಯ ವೇಗ, ಹದ್ದಿನ ಕಣ್ಣು, ಸೌರಾಷ್ಟ್ರ ಆಳಿದ ಖ್ಯಾತ ರಾಜ ನವಘನ್ ನಂತಹ ಫೀಲ್ಡರ್ ಎಂದು ರವೀಂದ್ರ ಜಡೇಜಾಗೆ ನೀಡಲಾಗಿದೆ.

ಭರ್ಜರಿ ಶತಕ ಸಿಡಿಸಿ ಭಾರತಕ್ಕೆ ತಲೆನೋವಾಗಿದ್ದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡರಿಲ್ ಮಿಚೆಲ್ 46ನೇ ಓವರ್‌ನಲ್ಲಿ ಕ್ಯಾಚ್ ನೀಡಿದರು. ಈ ಕ್ಯಾಚನ್ನು ಜಡೇಜಾ ಅದ್ಭುತವಾಗಿ ಹಿಡಿದಿದ್ದರು. ಇನ್ನು ಗ್ಲೆನ್ ಫಿಲಿಪ್ಸ್ ಅಬ್ಬರಕ್ಕೆ ಬ್ರೇಕ್ ಹಾಕಲು ರವೀಂದ್ರ ಜಡೇಜಾ ಅದ್ಭುತ ಕ್ಯಾಚ್ ನೆರವಾಗಿತ್ತು. ಇನ್ನು ಮಾರ್ಕ್ ಚಂಪನ್ ಕ್ರೀಸ್ ಬಂದ ಬೆನ್ನಲ್ಲೇ ರವೀಂದ್ರ ಜಡೇಜಾ ಅದ್ಬುತ ಕ್ಯಾಚ್ ಹಿಡಿದು ಪೆವಿಲಿಯನ್ ಹಾದಿ ತೋರಿಸಿದ್ದರು. ರವೀಂದ್ರ ಜಡೇಜಾ ಫೀಲ್ಡಿಂಗ್‌ನಲ್ಲಿ ಸರಿಸಾಟಿ ಯಾರು ಇಲ್ಲ. ಅದ್ಭುತ ಫೀಲ್ಡಿಂಗ್ ಮೂಲಕ ಜಡೇಜಾ ಮತ್ತೆ ಫೀಲ್ಡಿಂಗ್ ಅವಾರ್ಡ್ ಪಡೆದುಕೊಂಡಿದ್ದಾರೆ. 

Tap to resize

Latest Videos

 

We decided to keep things simple with our medal 🏅 ceremony this time around 👌

But the finishing touches were handed over by last time's winner Surya Kumar Yadav 😎

WATCH 🎥🔽 - By

| | |

— BCCI (@BCCI)

 

ಭಾರತ ವಿಶ್ವಕಪ್​ ಗೆದ್ರೆ ಈ ನಟಿ ಬೆತ್ತಲಾಗ್ತಾರಂತೆ! ಮುಂದೇನು ಮಾಡ್ತಾರೆಂದು ಹೇಳಿದ್ದಾರೆ ಕೇಳಿ...

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿತು. ಪ್ರಮುಖವಾಗಿ ಮೊಹಮ್ಮದ್ ಶಮಿ 7 ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಿದ್ದರು. ಈ ಮೂಲಕ ನ್ಯೂಜಿಲೆಂಡ್ 327 ರನ್ ಸಿಡಿಸಿ ಆಲೌಟ್ ಆಗಿತ್ತು. ಭಾರತ 70 ರನ್ ಭರ್ಜರಿ ಗೆಲುವು ಕಂಡಿತ್ತು.ಈ ಮೂಲಕ ನ್ಯೂಜಿಲೆಂಡ್ ಮಣಿಸಿ ಭಾರತ ಫೈನಲ್ ಪ್ರವೇಶಿಸಿದೆ.

ಬ್ಯಾಟಿಂಗ್‌ನಲ್ಲೂ ಭಾರತ ದಿಟ್ಟ ಹೋರಾಟ ನೀಡಿತ್ತು. ವಿರಾಟ್ ಕೊಹ್ಲಿ ಏಕದಿನದಲ್ಲಿ ದಾಖಲೆಯ 50ನೇ ಶತಕ ಸಿಡಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದರು. ಇತ್ತ ಶ್ರೇಯಸ್ ಅಯ್ಯರ್ 67 ಎಸೆತದಲ್ಲಿ ಸೆಂಚುರಿ ಬಾರಿಸಿ ಭಾರತದ ಬೃಹತ್ ಮೊತ್ತಕ್ಕೆ ನೆರವಾಗಿದ್ದರು. ಶುಭಮನ್ ಗಿಲ್ 66 ಎಸೆತದಲ್ಲಿ 80 ರನ್ ಸಿಡಿಸಿದ್ದರು. ನಾಯಕ ರೋಹಿತ್ ಶರ್ಮಾ 47 ರನ್ ಸಿಡಿಸಿದ್ದರು. ಕೆಎಲ್ ರಾಹುಲ್ ಅಜೇಯ 39 ರನ್ ದಾಖಲಿಸಿದ್ದರು. ಇದರೊಂದಿಗೆ ಭಾರತ 4 ವಿಕೆಟ್ ನಷ್ಟಕ್ಕೆ 397 ರನ್ ಸಿಡಿಸಿತ್ತು.

ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್ ವಾರ್ಷಿಕ ಆದಾಯ & ನೆಟ್‌ವರ್ತ್‌ ಎಷ್ಷು ಗೊತ್ತಾ? 
 

click me!