ಮೊಹಮ್ಮದ್ ಶಮಿ ತಾಯಿ ಆಸ್ಪತ್ರೆ ದಾಖಲು, ಫೈನಲ್ ಆರಂಭಗೊಂಡ ಬೆನ್ನಲ್ಲೇ ಅನಾರೋಗ್ಯ!

By Suvarna News  |  First Published Nov 19, 2023, 5:14 PM IST

ಭಾರತ ಹಾಗೂ ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಶುಭಕೋರಿದ್ದ ಮೊಹಮ್ಮದ್ ಶಮಿ ತಾಯಿ, ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಫೈನಲ್ ಪಂದ್ಯ ಆರಂಭಕ್ಕೆ ಕೆಲವೇ ನಿಮಿಷಗಳ ಮೊದಲು ಶಮಿ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಲಖನೌ(ನ.19) ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಆರಂಭದಲ್ಲೇ ಟೀಂ ಇಂಡಿಯಾ ಆಘಾತ ಎದುರಾಗಿದೆ. ಪ್ರಮುಖ ವಿಕೆಟ್ ಪತನ ತಂಡದ ಆತಂಕ ಹೆಚ್ಚಿಸಿದೆ. ಇತ್ತ ಅಭಿಮಾನಿಗಳು ಗಲಿಬಿಲಿಗೊಂಡಿದ್ದಾರೆ. ಈ ಆಘಾತದ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಿದೆ. ಫೈನಲ್ ಪಂದ್ಯ ಆರಂಭಗೊಂಡ ಬೆನ್ನಲ್ಲೇ ವೇಗಿ ಮೊಹಮ್ಮದ್ ಶಮಿ ತಾಯಿ ಅಂಜುಮ್ ಅರಾ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.

ಐಬಿಸಿ 24 ಮಾಧ್ಯಮದ ವರದಿ ಪ್ರಕಾರ, ಮೊಹಮ್ಮದ್ ಶಮಿ ತಾಯಿ ಅಂಜುಮ್ ಅರಾಗೆ ಇಂದು ಬೆಳಗ್ಗೆಯಿಂದಲೇ ಜ್ವರ ಕಾಡಿದೆ. ಜ್ವರದ ನಡುವೆಯೂ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ ಶುಭಕೋರಿದ್ದರು. ಈ ಪಂದ್ಯದಲ್ಲೂ ಮೊಹಮ್ಮದ್ ಶಮಿ ವಿಕೆಟ್ ಕಬಳಿಸಲಿ, ತಂಡದ ಎಲ್ಲರೂ ಉತ್ತಮ ಪ್ರದರ್ಶನ ನೀಡಿ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಹಾರೈಸಿದ್ದರು. ಪಂದ್ಯ ಆರಂಭಗೊಳ್ಳುತ್ತಿದ್ದಂತೆ ಅಂಜುಮ್ ಅರಾ ಜ್ವರದಿಂದ ಬಳಲಿದ್ದಾರೆ ಎಂದು ವರದಿ ಮಾಡಿದೆ.

Latest Videos

undefined

ಭಾರತದ 4 ವಿಕೆಟ್ ಪತನ, 1.3ಲಕ್ಷ ಅಭಿಮಾನಿಗಳಿಂದ ಹನುಮಾನ್ ಚಾಲೀಸ ಪಠಣ ವಿಡಿಯೋ ವೈರಲ್!

ಆಸ್ಪತ್ರೆಯಲ್ಲಿ ವೈದ್ಯರು ತಂಡ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ವೈರಲ್ ಫೀವರ್‌ನಿಂದ ಅಂಜುಮ್ ಅರಾ ಬಳಲಿದ್ದಾರೆ. ಆತಂಕಪಡುವ ಅಗತ್ಯವಿಲ್ಲ. ಕೆಲ ಹೊತ್ತು ವಿಶ್ರಾಂತಿ ಪಡೆದು ಮನೆಗೆ ಮರಳಬಹುದು ಎಂದು ವೈದ್ಯರು ಸೂಚಿಸಿದ್ದಾರೆ. ಇದರಿಂದ ಆತಂಕವೊಂದು ದೂರವಾಗಿದೆ.

ಭಾರತದ ಸೆಮಿಫೈನಲ್ ಪ್ರವೇಶದಲ್ಲಿ ವೇಗಿ ಮೊಹಮ್ಮದ್ ಶಮಿ ಪಾತ್ರ ಮಹತ್ವವಾಗಿದೆ. ಆರಂಭಿಕ 4 ಪಂದ್ಯಗಳಿಂದ ಮೊಹಮ್ಮದ್ ಶಮಿ ಹೊರಗುಳಿದಿದ್ದರು. ಹಾರ್ದಿಕ್ ಪಾಂಡ್ಯ ಗಾಯದಿಂದ ಟೂರ್ನಿಯಿಂದ ಹೊರಬಿದ್ದ ಕಾರಣ, ಪಾಂಡ್ಯ ಸ್ಥಾನದಲ್ಲಿ ತಂಡ ಸೇರಿಕೊಂಡ ಶಮಿ ಬೆಂಕಿ ಬೌಲಿಂಗ್ ದಾಳಿ ನಡೆಸಿದ್ದಾರೆ. 6 ಪಂದ್ಯದಲ್ಲಿ 23 ವಿಕೆಟ್ ಕಬಳಿಸಿ ಭಾರತದ ಪರ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸದ ಬೌಲರ್ ಅನ್ನೋ ದಾಖಲೆ ಬರೆದಿದ್ದಾರೆ. 

7,546 ದಿನದ ಬಳಿಕ ಅಂಕಿ ಸಂಖ್ಯೆ ಜೊತೆ ಗೂಗಲ್ ಹೇಳುತ್ತಿದೆ ಭಾರತಕ್ಕೆ ಟ್ರೋಫಿ!

ಅತೀ ವೇಗದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಪೂರೈಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶಮಿ 17 ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ದಾಖಲೆ ಬರೆದಿದ್ದಾರೆ. ಇದೀಗ ಭಾರತ ಹಾಗೂ ಆಸ್ಟೇಲಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಹಿನ್ನಡೆಯಾಗಿದೆ. ಇದೀಗ ಭಾರತದ ಗೆಲುವು ಬೌಲರ್‌ಗಳ ಕೈಯಲ್ಲಿದೆ. ಹೀಗಾಗಿ ಶಮಿ ಬೌಲಿಂಗ್ ಪ್ರಮುಖವಾಗಲಿದೆ.

click me!