INDvAUS ಫೈನಲ್‌ನಲ್ಲಿ ಭಾರತದ ಬ್ಯಾಟಿಂಗ್‌ಗೆ ಜಯ್ ಶಾ, ಸೂರ್ಯಕುಮಾರ್ ಟ್ರೋಲ್!

Published : Nov 19, 2023, 06:59 PM IST
INDvAUS ಫೈನಲ್‌ನಲ್ಲಿ  ಭಾರತದ ಬ್ಯಾಟಿಂಗ್‌ಗೆ ಜಯ್ ಶಾ, ಸೂರ್ಯಕುಮಾರ್ ಟ್ರೋಲ್!

ಸಾರಾಂಶ

ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಅಬ್ಬರ ಬ್ಯಾಟಿಂಗ್ ಪ್ರದರ್ಶನ ಇರಲಿಲ್ಲ. 240 ರನ್ ಸಿಡಿಸಿ ನಿಟ್ಟುಸಿರುಬಿಟ್ಟಿದೆ. ಭಾರತದ ಬ್ಯಾಟಿಂಗ್‌ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅಬ್ಬರಿಸದ ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವರು ಟ್ರೋಲ್ ಆಗಿದ್ದಾರೆ.

ಅಹಮ್ಮಾದಾಬಾದ್(ನ.19) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಿಣುಕಾಡಿ ಫೈನಲ್ ಪ್ರವೇಶಿಸಿತ್ತು. ಭಾರತ ಅಧಿಕಾರಯುತವಾಗಿ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಚಿತ್ರಣ ಬದಲಾಗಿದೆ. ಭಾರತ ಕಳೆದ 10 ಪಂದ್ಯದಲ್ಲಿ ನೀಡಿದ್ದ ಪ್ರದರ್ಶನವನ್ನು ಇಂದು ಆಸ್ಟ್ರೇಲಿಯಾ ನೀಡಿದೆ. ಆಸ್ಟ್ರೇಲಿಯಾ ಕಳೆದ 10 ಪಂದ್ಯದಲ್ಲಿ ನೀಡಿದ್ದ ಪ್ರದರ್ಶನವನ್ನು ಭಾರತ ನೀಡಿದೆ. 240 ರನ್ ಸಿಡಿಸಿ ಆಸ್ಟ್ರೇಲಿಯಾಗೆ ಸುಲಭ ಟಾರ್ಗೆಟ್ ನೀಡಿದೆ. ಭಾರತದ ಸ್ಲೋ ಬ್ಯಾಟಿಂಗ್ ಪ್ರದರ್ಶನಕ್ಕೆ ಸೂರ್ಯಕುಮಾರ್ ಯಾದವ್ ಸೇರಿದಂತೆ ಕೆಲ ಕ್ರಿಕೆಟಿಗರು ಟ್ರೋಲ್ ಆಗಿದ್ದಾರೆ. ಇದರ ಜೊತೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಟ್ರೋಲ್ ಆಗಿದ್ದಾರೆ.

ಸೂರ್ಯಕುಮಾರ್ ಯಾದವ್ 100 ಓವರ್ ಇದೆ ಎಂದು ಬ್ಯಾಟಿಂಗ್ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಬದಲು ರಿಂಕು ಸಿಂಗ್‌ಗೆ ಅವಕಾಶ ನೀಡಬಹುದಿತ್ತು ಎಂದು ಟೀಕೆ ವ್ಯಕ್ತವಾಗುತ್ತಿದೆ. ಸೂರ್ಯಕುಮಾರ್ ಯಾದವ್ 28 ಎಸೆತದಲ್ಲಿ 18 ರನ್ ಸಿಡಿಸಿ ಔಟಾಗಿದ್ದರು. 28ಕ್ಕೆ 28 ರನ್  ಸಿಡಿಸಿದ್ದರೂ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸುತ್ತಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

ಮೊಹಮ್ಮದ್ ಶಮಿ ತಾಯಿ ಆಸ್ಪತ್ರೆ ದಾಖಲು, ಫೈನಲ್ ಆರಂಭಗೊಂಡ ಬೆನ್ನಲ್ಲೇ ಅನಾರೋಗ್ಯ!

ಇತ್ತ ಜಯ್ ಶಾ ಕೂಡ ಟ್ರೋಲ್ ಆಗಿದ್ದಾರೆ. ಕ್ಷಮಿಸಿ, ಇವತ್ತಿನ ಸ್ಕ್ರಿಪ್ಟ್ ಪ್ರಕಾರ ನಡೆಯಲಿಲ್ಲ ಎಂದು ಟ್ರೋಲ್ ಮಾಡಲಾಗುತ್ತಿದೆ. ಭಾರತದ ಭರ್ಜರಿ ಗೆಲುವಿಗೆ ಪಾಕಿಸ್ತಾನ ಸೇರಿದಂತೆ ಕೆಲ ಅಪರಿಚಿತ ಟ್ವಿಟರ್ ಖಾತೆಗಳಲ್ಲಿ ಟ್ರೋಲ್ ಮಾಡಲಾಗುತ್ತಿತ್ತು. ಜಯ್ ಶಾ ಭಾರತ ಗೆಲುವಿಗೆ ಮೊದಲೇ ಸ್ಕ್ರಿಪ್ಟ್ ರೆಡಿ ಮಾಡಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ಇದೀಗ ಅದೇ ಟ್ರೋಲ್‌ನ ಮುಂದುವರಿದ ಭಾಗ ಇದೀಗ ಮಾಡಲಾಗಿದೆ.

 

 

ಆಸಿಸ್ ವಿರುದ್ಧ ಭಾರತ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ನಾಯಕ ರೋಹಿತ್ ಶರ್ಮಾ 47 ರನ್ ಸಿಡಿಸಿ ಔಟಾಗಿದ್ದರು. ಶುಬಮನ್ ಗಿಲ್ 4 ಹಾಗೂ ಶ್ರೇಯಸ್ ಅಯ್ಯರ್ 4 ರನ್ ಸಿಡಿಸಿ ನಿರ್ಗಮಿಸಿದ್ದರು. ಇತ್ತ ವಿರಾಟ್ ಕೊಹ್ಲಿ ಹೋರಾಟ ನೀಡಿ 54 ರನ್ ಕಾಣಿಕೆ ನೀಡಿದ್ದರು. ರವೀಂದ್ರ ಜಡೇಜಾ ಕೇವಲ 9 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಸೂರ್ಯಕುಮಾರ್ ಯಾದವ್ 18 ರನ್ ಸಿಡಿಸಿ ನಿರ್ಗಮಿಸಿದರು. ಹೋರಾಟ ನೀಡಿದ ಕೆಎಲ್ ರಾಹುಲ್ 66 ರನ್ ಸಿಡಿಸಿದ್ದಾರೆ. 

ಭಾರತದ 4 ವಿಕೆಟ್ ಪತನ, 1.3ಲಕ್ಷ ಅಭಿಮಾನಿಗಳಿಂದ ಹನುಮಾನ್ ಚಾಲೀಸ ಪಠಣ ವಿಡಿಯೋ ವೈರಲ್!

ಮೊಹಮ್ಮದ್ ಶಮಿ 6, ಜಸ್ಪ್ರೀತ್ ಬುಮ್ರಾ 1, ಕುಲ್ದೀಪ್ ಯಾದವ್ 10, ಮೊಹಮ್ಮದ್ ಸಿರಾಜ್ 9 ರನ್ ಸಿಡಿಸಿದರು. ಈ ಮೂಲಕ ಭಾರತ 240 ರನ್‌ಗೆ ಆಲೌಟ್ ಆಗಿದೆ. 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ