ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್‌ಗೆ ವಡಾ ಪಾವ್ ಎಂದ ಬೋಗ್ಲೆ, ಸಿಡಿದೆದ್ದ ಫ್ಯಾನ್ಸ್!

By Suvarna News  |  First Published Nov 15, 2023, 4:07 PM IST

ಭಾರತ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕಮೆಂಟೇಟರ್ ಹರ್ಷಾ ಬೋಗ್ಲೆ, ಪರೋಕ್ಷವಾಗಿ ರೋಹಿತ್ ಶರ್ಮಾಗೆ ವಡಾ ಪಾವ್ ಕಮೆಂಟ್ ಪಾಸ್ ಮಾಡಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 


ಮುಂಬೈ(ನ.15) ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವಕಪ್ ಸೆಮಿಫೈನಲ್ ಪಂದ್ಯ ಆರಂಭದಲ್ಲೇ ರೋಚಕತೆ ಹೆಚ್ಚಿಸಿದೆ. ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದೆ. ನಾಯಕ ರೋಹಿತ್ ಶರ್ಮಾ 29 ಎಸೆತದಲ್ಲಿ 47 ರನ್ ಚಚ್ಚಿದ್ದಾರೆ. ಇದರಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ರೋಹಿತ್ ಶರ್ಮಾಗೆ, ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ವಡಾ ಪಾವ್ ಕಮೆಂಟ್ ಪಾಸ್ ಮಾಡಿದ್ದಾರೆ. ಇದು ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದೆ. ಇಡೀ ಟೂರ್ನಿಯಲ್ಲಿ ರೋಹಿತ್ ಶರ್ಮಾ ತಂಡಕ್ಕಾಗಿ ಆಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಮಾರಕ ಬೌಲರ್‌ಗಳಿಗೆ ಬೌಂಡರಿ ಸಿಕ್ಸರ್ ಬಾರಿಸಿದ್ದಾರೆ. ಇದರ ನಡುವೆ ವಡಾ ಪಾವ್ ಎಂಬ ಕಮೆಂಟ್ ಪಾಸ್ ಮಾಡುತ್ತೀದ್ದೀರಿ ಎಂದರೆ ಆತ ಇನ್ನೇನು ಮಾಡಬೇಕಿತ್ತು? ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ಆರಂಭಿಸಿದ ಭಾರತ 4.4 ಓವರ್‌ಗಲ್ಲಿ 45 ರನ್ ಸಿಡಿಸಿತ್ತು. ರೋಹಿತ್ ಶರ್ಮಾ 34 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಕಮೆಂಂಟೇಟರ್ ಹರ್ಷಾ ಬೋಗ್ಲೆ, ನನ್ನ ವಡಾ ಪಾವ್ ಹಿಡಿದುಕೊಳ್ಳಿ ಎಂದು ಪರೋಕ್ಷವಾಗಿ ರೋಹಿತ್ ಶರ್ಮಾಗೆ ಕಮೆಂಟ್ ಪಾಸ್ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಬೋಗ್ಲೆ ಈ ಕಮೆಂಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

Tap to resize

Latest Videos

ಕ್ರಿಸ್ ಗೇಲ್ ರೆಕಾರ್ಡ್ ನುಚ್ಚುನೂರು, ವಿಶ್ವಕಪ್‌ನಲ್ಲಿ ಸಿಕ್ಸರ್ ಚಚ್ಚುವುದರಲ್ಲಿ ರೋಹಿತ್ ಬಲು ಜೋರು..!

ರೋಹಿತ್ ಶರ್ಮಾ ಫಿಟ್ನೆಸ್ ಕುರಿತು ಹಲವು ಬಾರಿ ಚರ್ಚೆಗಳಾಗಿವೆ. ಈ ವೇಳೆ ರೋಹಿತ್ ಶರ್ಮಾಗೆ ವಡಾ ಪಾವ್ ಎಂದು ಟೀಕೆ ವ್ಯಕ್ತಪಡಿಸಿದ ಹಲವು ಘಟನೆಗಳಿವೆ. ಇತರ ಕ್ರಿಕೆಟಿಗರಂತೆ ರೋಹಿತ್ ಶರ್ಮಾ ಫಿಟ್ನೆಸ್ ಕಾಪಾಡಿಕೊಂಡಿಲ್ಲ, ವಡಾ ಪಾವ್ ರೀತಿ ಆಗಿದ್ದಾರೆ ಅನ್ನೋ ಟೀಕೆಗಳು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಇವೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳಿಬಂದಿತ್ತು. ಇದೀದ ಹರ್ಷಾ ಬೋಗ್ಲೆ ಭಾರತ ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಕಮೆಂಟರಿ ಮಾಡುತ್ತಿರುವ ಸಂದರ್ಭದಲ್ಲಿ ಈ ಕಮೆಂಟ್ ಪಾಸ್ ಮಾಡಿ ಅಭಿಮಾನಿಗಳು ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ರೋಹಿತ್ ಶರ್ಮಾ ತಂಡಕ್ಕಾಗಿ ಆಡುತ್ತಾರೆ. ಯಾವುದೇ ವೈಯುಕ್ತಿ ದಾಖಲೆಗಾಗಿ ಆಡುತ್ತಿಲ್ಲ. ತೀವ್ರ ಒತ್ತಡದ ಪಂದ್ಯದಲ್ಲಿ ರೋಹಿತ್ ಶರ್ಮಾ ನ್ಯೂಜಿಲೆಂಡ್ ಬೌಲರ್ ಮೇಲೆ ಸವಾರಿ ಮಾಡಿದ್ದಾರೆ. ಇದು ಟೀಂ ಇಂಡಿಯಾದ ಆತ್ಮವಿಶ್ವಾಸವನ್ನೇ ಹೆಚ್ಚಿಸಿದೆ. ಆರಂಭಿಕ ಹಂತದಲ್ಲಿ ರೋಹಿತ್ ಬ್ಯಾಟಿಂಗ್‌ನಿಂದ ಇತರ ಬ್ಯಾಟ್ಸ್‌ಮನ್ ಮೇಲಿನ ಒತ್ತಡವೂ ಕಡಿಮೆಯಾಗಿದೆ. ಇನ್ನು ಲೀಗ್ ಹಂತದ ಪಂದ್ಯದಲ್ಲೂ ರೋಹಿತ್ ಶರ್ಮಾ ನಾಯಕತ್ವ, ಫೀಲ್ಡಿಂಗ್, ಬ್ಯಾಟಿಂಗ್ ಯಾವುದೂ ಕಳಪೆಯಾಗಿಲ್ಲ. ಹೀಗಿರುವಾಗ ಕಮೆಂಟೇಟರ್ ಈ ರೀತಿಯ ಕಮೆಂಟ್ ಪಾಸ್ ಮಾಡುವುದು ಎಷ್ಟು ಸರಿ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ವಿಶ್ವಕಪ್ ಟೂರ್ನಿಗಳಲ್ಲಿ ಕೊಹ್ಲಿಗೆ ಇವರೇ ವಿಲನ್.! ವಿರಾಟ್ ಕಟ್ಟಿಹಾಕಲು ಕಿವೀಸ್ ಬಳಿಯಿದೆ ವಿಶೇಷ ಅಸ್ತ್ರ
 

click me!