
ಕೋಲ್ಕತಾ(ಅ.28): ಈ ಬಾರಿ ಏಕದಿನ ವಿಶ್ವಕಪ್ ಅರ್ಧ ಭಾಗ ಮುಕ್ತಾಯಗೊಂಡಿದ್ದು, ಕೆಲ ತಂಡಗಳು ಸೆಮಿಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿವೆ. ಈ ಪೈಕಿ ಪವಾಡ ಘಟಿಸಿದರೆ ಮಾತ್ರ ಸೆಮೀಸ್‌ಗೇರಬಲ್ಲವು ಎಂಬಂತಿರುವ ತಂಡಗಳಾದ ಬಾಂಗ್ಲಾದೇಶ ಹಾಗೂ ನೆದರ್‌ಲೆಂಡ್ಸ್ ಶನಿವಾರ ಪರಸ್ಪರ ಮುಖಾಮುಖಿಯಾಗಲಿವೆ. ಇದು 2 ತಂಡಕ್ಕೂ ಮಾಡು ಇಲ್ಲವೇ ಮಡಿ ಪಂದ್ಯ.
ಇದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಈ ವಿಶ್ವಕಪ್‌ನ ಮೊದಲ ಪಂದ್ಯ ಕೂಡ ಹೌದು. ಆಫ್ಘನ್ ವಿರುದ್ಧದ ಗೆಲುವಿನೊಂದಿಗೆ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದ ಬಾಂಗ್ಲಾದೇಶ ಆ ಬಳಿಕ ಆಡಿರುವ 4 ಪಂದ್ಯಗಳಲ್ಲೂ ಸೋತಿದೆ. ತಂಡದಲ್ಲಿ ಅನುಭವಿ ಆಟಗಾರರಿದ್ದರೂ ನಿರೀಕ್ಷಿತ ಪ್ರದರ್ಶನ ಮಾತ್ರ ಮೂಡಿಬರುತ್ತಿಲ್ಲ.
ICC World Cup 2023 ಧರ್ಮಶಾಲಾದಲ್ಲಿಂದು ಆಸೀಸ್ vs ಕಿವೀಸ್ ಹೈವೋಲ್ಟೇಜ್ ಫೈಟ್
ಮತ್ತೊಂದೆಡೆ ಡಚ್ ಪಡೆಯು ದಕ್ಷಿಣ ಆಫ್ರಿಕಾ ವಿರುದ್ಧ ತೋರಿದ್ದ ಪ್ರದರ್ಶನ ಬಿಟ್ಟರೆ ಇತರ ಪಂದ್ಯಗಳಲ್ಲಿ ತೀರಾ ಕಳಪೆ ಆಟವಾಡಿದೆ. ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ತಂಡವನ್ನು ಬಲವಾಗಿ ಕಾಡುತ್ತಿದೆ. ಬೌಲರ್‌ಗಳೂ ಉತ್ತಮ ಲಯದಲ್ಲಿಲ್ಲ. ಮತ್ತೊಂದು ಸೋಲು ತಂಡವನ್ನು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲೇ ಬಾಕಿಯಾಗಿಸಲಿದೆ.
ಸಂಭವನೀಯ ಆಟಗಾರರ ಪಟ್ಟಿ ಇಲ್ಲಿದೆ ನೋಡಿ:
ಬಾಂಗ್ಲಾದೇಶ: ತಂಜೀದ್ ಹಸನ್, ಲಿಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೋ, ಶಕೀಬ್ ಅಲ್ ಹಸನ್(ನಾಯಕ), ಮೆಹದಿ ಹಸನ್ ಮಿರಾಜ್, ಮುಷ್ಫಿಕುರ್ ರಹೀಂ(ವಿಕೆಟ್ ಕೀಪರ್), ಮೊಹಮದುಲ್ಲಾ, ನಸುಮ್ ಅಹಮದ್, ಮುಸ್ತಾಫಿಜುರ್ ರೆಹಮಾನ್, ಶೌರೀಫುಲ್ ಇಸ್ಲಾಂ, ಟಸ್ಕಿನ್ ಅಹಮದ್.
ನೆದರ್‌ಲೆಂಡ್ಸ್: ವಿಕ್ರಮ್‌ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್‌ಮನ್, ಬಾಸ ಡಿ ಲೀಡೆ, ತೇಜ್ ನಿದಾಮನೂರು, ಸ್ಕಾಟ್ ಎಡ್ವರ್ಡ್ಸ್(ನಾಯಕ&ವಿಕೆಟ್ ಕೀಪರ್), ಸೈಬ್ರಂದ್ ಇಂಗೆಲ್ಬೆರ್ಚ್, ಲೊಗನ್ ವ್ಯಾನ್ ಬೀಕ್, ರೊಲೇಫ್ ವ್ಯಾನ್ ಡರ್ ಮೆರ್ವೆ, ಆರ್ಯನ್ ದತ್, ಪೌಲ್ ವ್ಯಾನ್ ಮೀಕ್ರೇನ್.
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.