ದಾಖಲೆ ಜೊತೆಯಾಟ ಮೂಲಕ ಭಾರತದ ತಲೆನೋವು ಹೆಚ್ಚಿಸಿದ ನ್ಯೂಜಿಲೆಂಡ್‌ಗೆ ಮೊಹಮ್ಮದ್ ಶಮಿ ಶಾಕ್ ನೀಡಿದ್ದಾರೆ. ಇದರೊಂದಿಗೆ ನ್ಯೂಜಿಲೆಂಡ್ ಅಬ್ಬರದ ಬ್ಯಾಟಿಂಗ್‌ಗೆ ಬ್ರೇಕ್ ಬಿದ್ದಿದೆ. ಇತ್ತ ಮೊಹಮ್ಮದ್ ಶಮಿ ದಿಗ್ಗಜರ ದಾಖಲೆ ಪುಡಿ ಮಾಡಿದ್ದಾರೆ
ಮುಂಬೈ(ನ.15) ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ರೋಚಕತೆ ಹೆಚ್ಚಾಗಿದೆ. ಭಾರತದ ಬೃಹತ್ ಟಾರ್ಗೆಟ್‌ಗೆ ಉತ್ತರವಾಗಿ ನ್ಯೂಜಿಲೆಂಡ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭಿಕ 2 ವಿಕೆಟ್ ಬಹುಬೇಗನೆ ಪತನಗೊಂಡರೂ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡರಿಲ್ ಮಿಚೆಲ್ ದಾಖಲೆಯ ಜೊತೆಯಾಟ ಭಾರತದ ತಲೆನೋವು ಹೆಚ್ಚಿಸಿತ್ತು. ಆದರೆ ಮತ್ತೆ ಮೊಹಮ್ಮದ್ ಶಮಿ ದಾಳಿ ಸಂಘಟಿಸುವ ಮೂಲಕ ನ್ಯೂಜಿಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದ್ದರೆ. ಅಬ್ಬರದ ಬ್ಯಾಟಿಂಗ್‌ಗೆ ಬ್ರೇಕ್ ಬಿದ್ದಿದೆ. ಇಷ್ಟೇ ಅಲ್ಲ ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಕಬಳಿಸಿದ ಬೌಲರ್ ಅನ್ನೋ ದಾಖಲೆ ಮೊಹಮ್ಮದ್ ಶಮಿ ಹೆಸರಿಗೆ ದಾಖಲಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಸಾಧನೆ
ಮೊಹಮ್ಮದ್ ಶಮಿ: 17 ಇನ್ನಿಂಗ್ಸ್
ಮಿಚೆಲ್ ಸ್ಟಾರ್ಕ್: 19 ಇನ್ನಿಂಗ್ಸ್
ಲಸಿತ್ ಮಲಿಂಗ: 25 ಇನ್ನಿಂಗ್ಸ್
ಟ್ರೆಂಟ್ ಬೋಲ್ಟ್: 28 ಇನ್ನಿಂಗ್ಸ್
ಅಯ್ಯರ್ ಸೆಂಚುರಿ ಸೆಲೆಬ್ರೇಷನ್ ಇಮಿಟೇಟ್ ಮಾಡಿದ ರೋಹಿತ್, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ 50 ವಿಕೆಟ್ ಕಬಳಿಸಲು 795 ಎಸೆತ ಎಸೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮಿಚೆಲ್ ಸ್ಟಾರ್ಕ್ 50ರ ವಕೆಟ್ ಸಾಧನೆಗೆ 941 ಎಸೆತ ಎಸೆದಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತದಲ್ಲಿ 50 ವಿಕೆಟ್ ಸಾಧನೆಗೆ ಶಮಿ ಪಾತ್ರರಾಗಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಎಸೆತದಲ್ಲಿ 50 ವಿಕೆಟ್ ಸಾಧನೆ
ಮೊಹಮ್ಮದ್ ಶಮಿ: 795 ಎಸೆತ
ಮಿಚೆಲ್ ಸ್ಟಾರ್ಕ್ : 941 ಎಸೆತ
ಲಸಿತ್ ಮಲಿಂಗ: 1187 ಎಸೆತ
ಗ್ಲೆನ್ ಮೆಗ್ರಾಥ್ : 1540 ಎಸೆತ
ಟ್ರೆಂಟ್ ಬೋಲ್ಟ್ : 1543 ಎಸೆತ
ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಸಾಧನೆ ಮಾಡಿದ ದಿಗ್ಗಜರ ಸಾಲಿನಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 7ನೇ ಬೌಲರ್ ಅನ್ನೋ ಹಿರಿಮೆಗೆ ಶಮಿ ಪಾತ್ರರಾಗಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಸಾಧನೆ
ಗ್ಲೆನ್ ಮೆಗ್ರಾಥ್ : 71 ವಿಕೆಟ್
ಮುತ್ತಯ್ಯ ಮುರಳೀಧರನ್ : 68 ವಿಕೆಟ್
ಮಿಚೆಲ್ ಸ್ಟಾರ್ಕ್ :59 ವಿಕೆಟ್
ಲಸಿತ್ ಮಲಿಂಗ : 56 ವಿಕೆಟ್
ವಾಸಿಮ್ ಅಕ್ರಂ : 55 ವಿಕೆಟ್
ಟ್ರೆಂಟ್ ಬೋಲ್ಟ್ : 53 ವಿಕೆಟ್
ಮೊಹಮ್ಮದ್ ಶಮಿ : 50 ವಿಕೆಟ್
'ತಂಡಕ್ಕಾಗಿ ಆಡು, ಗೆಲುವಿಗಾಗಿ ಆಡು..' ನನ್ನ ಆಟಕ್ಕೆ ಇದೇ ಸ್ಪೂರ್ತಿ: ವಿರಾಟ್ ಕೊಹ್ಲಿ
ಸೆಮಿಫೈನಲ್ ಪಂದ್ಯದಲ್ಲಿ ಮಿಚೆಲ್ ಹಾಗೂ ವಿಲಿಯಮ್ಸನ್ 181 ರನ್ ಜೊತೆಯಾಟ ಭಾರತದ ಆತಂಕ ಹೆಚ್ಚಿಸಿತ್ತು. ಬೌಂಡರಿ ಸಿಕ್ಸರ್ ಮೂಲಕ ನ್ಯೂಜಿಲೆಂಡ್ ಕೂಡ ದಿಟ್ಟ ಹೋರಾಟ ನೀಡಿತು. ಇದೇ ವೇಳೆ ಸ್ಟ್ರಾಟರ್ಜಿ ಬದಲಿಸಿದ ನಾಯಕ ರೋಹಿತ್ ಶರ್ಮಾ, ಮತ್ತೆ ಶಮಿ ದಾಳಿ ಸಂಘಟಿಸಿದರು. ಆರಂಭಿಕ 2 ವಿಕೆಟ್ ಕಬಳಿಸಿ ಭಾರತಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟ ಮೊಹಮ್ಮದ್ ಶಮಿ, ನ್ಯೂಜಿಲೆಂಡ್ ಜೊತೆಯಾಕ್ಕೆ ಬ್ರೇಕ್ ಹಾಕಿದರು. ಕೇನ್ ವಿಲಿಯಮ್ಸನ್ 69 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಮಿಚೆಲ್ ಸೆಂಚುರಿ ಸಂಭ್ರಮ ಆಚರಿಸಿದರು. ಆದರೆ ಟಾಮ್ ಲಾಥಮ್ ಖಾತೆ ತೆರೆಯಲು ಶಮಿ ಅವಕಾಶ ನೀಡಲಿಲ್ಲ.