INDvSL ಮೊಹಮ್ಮದ್ ಶಮಿ ದಾಳಿಗೆ ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಪುಡಿ ಪುಡಿ!

By Suvarna News  |  First Published Nov 2, 2023, 9:07 PM IST

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್ ಭರ್ಜರಿ ಗೆಲುವಿನ ಮೂಲಕ ಹಲವು ದಾಖಲೆ ಬರೆದಿದೆ. ಭಾರಿ ಅಂತರದ ಗೆಲುವಿಗೆ ಮುನ್ನುಡಿ ಬರೆದ ಭಾರತೀಯ ಬೌಲರ್ಸ್ ಹಲವು ದಾಖಲೆ ಬರೆದಿದ್ದಾರೆ. ಈ ಪೈಕಿ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಹಿಂದಿಕ್ಕಿದ್ದಾರೆ.


ಮುಂಬೈ(ನ.02) ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನಕ್ಕೆ ಇತರ ತಂಡಗಳು ಬೆಚ್ಚಿ ಬಿದ್ದಿದೆ. ಶ್ರೀಲಂಕಾ ವಿರುದ್ದ 357 ರನ್ ಸಿಡಿಸಿದ ಭಾರತ, ಲಂಕಾ ತಂಡವನ್ನು ಕೇವಲ 55 ರನ್‌ಗೆ ಆಲೌಟ್ ಮಾಡಿ ಬರೋಬ್ಬರಿ 302 ರನ್ ಗೆಲುವು ದಾಖಲಿಸಿದೆ. ಇದು ಶ್ರೀಲಂಕಾ ವಿರುದ್ಧ ಭಾರತದ 2ನೇ ಅತೀ ದೊಡ್ಡ ಗೆಲುವಾಗಿದೆ. ಈ ಗೆಲುವಿನೊಂದಿಗೆ ಭಾರತ, 2023ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಲಂಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ವೇಗಿ ಮೊಹಮ್ಮದ್ ಶಮಿ ಕೂಡುಗೆ ಪ್ರಮುಖವಾಗಿದೆ. ಶಮಿ ಪ್ರಮುಖ 5 ವಿಕೆಟ್ ಕಬಳಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ. ಶಮಿ ದಾಳಿಗೆ ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಪುಡಿಯಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧಕರ ಪಟ್ಟಿಯಲ್ಲಿ ಜಹೀರ್ ಖಾನ್ ಹಾಗೂ ಜಾವಗಲ್ ಶ್ರೀನಾಥ್ 44 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದರು. ಆದರೆ ಲಂಕಾ ವಿರುದ್ಧ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಒಟ್ಟು 45 ವಿಕೆಟ್ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ.

Tap to resize

Latest Videos

INDvSL 55 ರನ್‌ಗೆ ಶ್ರೀಲಂಕಾ ಆಲೌಟ್, ವಿಶ್ವಕಪ್ ಸೆಮಿಫೈನಲ್ ಸ್ಥಾನ ಖಚಿತಪಡಿಸಿದ ಭಾರತ!

ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯರು
 ಮೊಹಮ್ಮದ್ ಶಮಿ: 45 ವಿಕೆಟ್
ಜಹೀರ್ ಖಾನ್: 44 ವಿಕೆಟ್
ಜಾವಗಲ್ ಶ್ರೀನಾಥ್: 44 ವಿಕೆಟ್
ಜಸ್ಪ್ರೀತ್ ಬುಮ್ರಾ: 33 ವಿಕೆಟ್
ಅನಿಲ್ ಕುಂಬ್ಳೆ: 31 ವಿಕೆಟ್

ವಿಶ್ವಕಪ್ ಟೂರ್ನಿ ಒಂದು ಆವೃತ್ತಿಯಲ್ಲಿ ಗರಿಷ್ಠ 4 ಪ್ಲಸ್ ವಿಕೆಟ್ ಗೊಂಚಲು ಪಡೆದ ಸಾಧಕರ ಸಾಲಿನಲ್ಲಿ ಮೊಹಮ್ಮದ್ ಶಮಿ 3ನೇ ಸ್ಥಾನದಲ್ಲಿದ್ದಾರೆ. ವಿಶೇಷ ಅಂದರೆ ಶಮಿ ಎರಡು ವಿಶ್ವಕಪ್ ಟೂರ್ನಿಯಲ್ಲಿ ಈ ಸಾಧನ ಮಾಡಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಶಮಿ 3 ಬಾರಿ 4 ಪ್ಲಸ್ ವಿಕೆಟ್ ಕಬಳಿಸಿದ್ದರು. ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಶಮಿ 3 ಬಾರಿ 4 ಪ್ಲಸ್ ವಿಕೆಟ್ ಸಾಧನೆ ಮಾಡಿದ್ದಾರೆ.

ವಿಶ್ವಕಪ್ ಟೂರ್ನಿಯ ಒಂದು ಆವೃತ್ತಿಯಲ್ಲಿ 4 ಪ್ಲಸ್ ವಿಕೆಟ್ ಸಾಧನೆ
ಶಾಹಿದ್ ಆಫ್ರಿದಿ(2011) 4 ಬಾರಿ
ಮಿಚೆಲ್ ಸ್ಟಾರ್ಕ್(2019) 4 ಬಾರಿ
ಮೊಹಮ್ಮದ್ ಶಮಿ(2019) 3 ಬಾರಿ
ಆ್ಯಡಮ್ ಜಂಪಾ(2023) 3 ಬಾರಿ
ಮೊಹಮ್ಮದ್ ಶಮಿ(2023) 3 ಬಾರಿ

ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್ ಕೊಹ್ಲಿ..!
 
ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್ ಸಾಧನೆ ಮಾಡಿದ ಪಟ್ಟಿಯಲ್ಲಿ ಶಮಿ ಮೊದಲ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮೊದಲು ಜಾವಗಲ್ ಶ್ರೀನಾಥ್ ಮೊದಲ ಸ್ಥಾನ ಅಲಂಕರಿಸಿದ್ದರು.

ಏಕದಿನದಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್ ಸಾಧನೆ
ಮೊಹಮ್ಮದ್ ಶಮಿ: 4 ಬಾರಿ
ಜಾವಗಲ್ ಶ್ರೀನಾಥ್ : 3 ಬಾರಿ
ಹರ್ಭಜನ್ ಸಿಂಗ್ : 3 ಬಾರಿ

click me!