
ಚೆನ್ನೈ(ಅ.24): ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು 2022ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೆರೆಯ ಆಫ್ಘಾನಿಸ್ತಾನ ಎದುರು ಆಘಾತಕಾರಿ ಸೋಲು ಕಂಡಿದೆ. ಇದು ಈ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಅನುಭವಿಸಿದ ಹ್ಯಾಟ್ರಿಕ್ ಸೋಲಾಗಿದೆ. ಹೀಗಾಗಿ ಪಾಕಿಸ್ತಾನ ತಂಡದ ಸೆಮೀಸ್ ಹಾದಿ ಮತ್ತಷ್ಟು ದುರ್ಗಮವಾಗಿದೆ. ಪಾಕಿಸ್ತಾನ ತಂಡವು, ಆಫ್ಘಾನ್‌ಗೆ ಶರಣಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಸ್ ಹಾಗೂ ಮೀಮ್ಸ್ ಮುಗಿಲುಮುಟ್ಟಿವೆ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ಪಾಕಿಸ್ತಾನ ಕ್ರಿಕೆಟ್ ತಂಡ ಪರಿಸ್ಥಿತಿಯನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಮೊದಲಿಗೆ ಭಾರತದೆದುರು ಸೋಲು ಕಂಡಿದ್ದ ಪಾಕಿಸ್ತಾನ, ಆ ಬಳಿಕ ಆಸ್ಟ್ರೇಲಿಯಾಗೆ ಶರಣಾಗಿತ್ತು. ಇದೀಗ ತನಗಿಂತ ಕೆಳಗಿನ ಶ್ರೇಯಾಂಕ ಹೊಂದಿರುವ ಆಫ್ಘಾನ್ ಎದುರು ಮುಗ್ಗರಿಸಿದ್ದನ್ನು ಜಾಫರ್ ವಿನೂತನ ಶೈಲಿಯಲ್ಲಿ ಟ್ರೋಲ್ ಮಾಡಿದ್ದಾರೆ.
'ದಿನಕ್ಕೆ 8 ಕೆಜಿ ಮಟನ್ ತಿಂದ್ರೆ ಫಿಟ್ನೆಸ್ ಎಲ್ಲಿಂದ ಬರುತ್ತೆ?': ಪಾಕ್ ಕ್ರಿಕೆಟಿಗರ ಮೇಲೆ ವಾಸೀಂ ಅಕ್ರಂ ಸಿಡಿಮಿಡಿ
ಈ ಮೊದಲು ಆಫ್ಘಾನಿಸ್ತಾನ ತಂಡವು 2019ರ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್‌ಗೆ ಸೋಲಿನ ಶಾಕ್ ನೀಡಿತ್ತು. ಇದೀಗ 2023ರ ವಿಶ್ವಕಪ್‌ನಲ್ಲಿ 1992ರ ವಿಶ್ವಕಪ್ ಚಾಂಪಿಯನ್‌ಗೆ ಆಘಾತ ನೀಡುವಲ್ಲಿ ಆಫ್ಘಾನಿಸ್ತಾನ ತಂಡ ಯಶಸ್ವಿಯಾಗಿದೆ. ಒಂದು ಕಡೆ ಆಫ್ಘಾನಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ನೆಟ್ಟಿಗರು ರೋಸ್ಟ್ ಮಾಡಲಾರಂಭಿಸಿದ್ದಾರೆ.
ಇನ್ನು ಪಂದ್ಯ ಮುಕ್ತಾಯದ ಬಳಿಕ 'ಎ' ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ವಾಸೀಂ ಅಕ್ರಂ, "ಇದು ಅವಮಾನಕಾರಿ. ಕೇವಲ 2 ವಿಕೆಟ್. 280-290 ನಿಜಕ್ಕೂ ದೊಡ್ಡ ಸ್ಕೋರ್. ಈ ಪಿಚ್ ಒದ್ದೆಯಾಗಿರಲಿ ಅಥವಾ ಆಗದೇ ಇರಲಿ, ಫೀಲ್ಡಿಂಗ್ ಅಂತೂ.... ಅವರ ಫಿಟ್ನೆಸ್ ಲೆವೆಲ್ ನೋಡಿ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನದ ಆಟಗಾರರಲ್ಲಿ ಫಿಟ್ನೆಸ್ ಇಲ್ಲ ಎನ್ನುವುದನ್ನು ನಾವೆಲ್ಲರೂ ಮಾತನಾಡುತ್ತಲೇ ಬಂದಿದ್ದೇವೆ. ನಾನು ಬೇಕಿದ್ದರೇ, ಕೆಲವರು ಹೆಸರನ್ನು ಬೇಕಿದ್ದರೂ ಪಾಯಿಂಟ್ ಮಾಡಿ ಹೇಳಬಲ್ಲೆ. ಅವರೆಲ್ಲರದ್ದೂ ಫಿಟ್ನೆಸ್ ಇಲ್ಲ. ಅವರನ್ನೆಲ್ಲ ನೋಡಿದರೆ, ದಿನಕ್ಕೆ 8 ಕೆಜಿ ಮಟನ್ ತಿನ್ನುತ್ತಾರೆ ಎಂದು ಅನಿಸುತ್ತದೆ ಎಂದು ಅಕ್ರಂ ಕಿಡಿಕಾರಿದ್ದಾರೆ.
ಪಾಕ್ ಬಗ್ಗುಬಡಿದ ಆಫ್ಘಾನ್: ಎಕೆ-47ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ಫ್ಯಾನ್ಸ್
ಪಾಕಿಸ್ತಾನ ತಂಡವು ಟ್ರೋಲ್ ಆಗಿದ್ದು ಹೀಗೆ:
ಚೆಪಾಕ್ ಮೈದಾನದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಅಬ್ದುಲ್ ಶಫೀಕ್(58), ನಾಯಕ ಬಾಬರ್ ಅಜಂ(74) ಬಾರಿಸಿದ ಸಮಯೋಚಿತ ಅರ್ಧಶತಕ, ಶದಾಬ್ ಖಾನ್(40) ಹಾಗೂ ಇಫ್ತಿಕಾರ್ ಅಹಮ್ಮದ್(40) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು 282 ರನ್ ಕಲೆಹಾಕಿತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಹಾಗೂ ರೆಹಮತ್ ಶಾ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆ 8 ವಿಕೆಟ್ ಸುಲಭ ಗೆಲುವು ದಾಖಲಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.