ICC Women's World Cup: ಭಾರತದ ಸೆಮೀಸ್‌ ಲೆಕ್ಕಾಚಾರ ಹೇಗೆ?

Published : Mar 23, 2022, 06:48 AM IST
ICC Women's World Cup: ಭಾರತದ ಸೆಮೀಸ್‌ ಲೆಕ್ಕಾಚಾರ ಹೇಗೆ?

ಸಾರಾಂಶ

* ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸೆಮೀಸ್ ಕನಸು ಜೀವಂತ * ಬಾಂಗ್ಲಾದೇಶವನ್ನು ಮಣಿಸಿ ಗೆಲುವಿನ ಹಳಿಗೆ ಮರಳಿದ ಭಾರತ * ದಕ್ಷಿಣ ಆಫ್ರಿಕಾ ಎದುರು ಕೊನೆಯ ಪಂದ್ಯ ಗೆದ್ದರೆ, ನೇರವಾಗಿ ಸೆಮೀಸ್‌ಗೆ ಲಗ್ಗೆ

ಹ್ಯಾಮಿಲ್ಟನ್(ಮಾ.23)‌: ಯಸ್ತಿಕಾ ಭಾಟಿಯಾ (Yastika Bhatia) ಅವರ ಅರ್ಧಶತಕ ಹಾಗೂ ಸ್ನೇಹ ರಾಣಾ (Sneh Rana) ಅವರ ಆಲ್ರೌಂಡ್‌ ಪ್ರದರ್ಶನದ ನೆರವಿನಿಂದ ಭಾರತ, ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ (ICC Women's World Cup) ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 110 ರನ್‌ಗಳ ಬೃಹತ್‌ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿತು. ಭಾಟಿಯಾ 80 ಎಸೆತಗಳಲ್ಲಿ 50 ರನ್‌ ಗಳಿಸಿದರು. ಸ್ನೇಹ 27, ಪೂಜಾ ವಸ್ತ್ರಾಕರ್‌ 30 ರನ್‌ ಕೊಡುಗೆ ನೀಡಿದರು. 

ಸಾಧಾರಣ ಗುರಿಯನ್ನು ರಕ್ಷಿಸಿಕೊಂಡ ಭಾರತ, ಬಾಂಗ್ಲಾದೇಶವನ್ನು 40.3 ಓರಲ್ಲಿ 119 ರನ್‌ಗೆ ಆಲೌಟ್‌ ಮಾಡಿತು. ಸ್ನೇಹ 30 ರನ್‌ಗೆ 4 ವಿಕೆಟ್‌ ಕಬಳಿಸಿದರು. ಟೂರ್ನಿಯಲ್ಲಿ ಭಾರತಕ್ಕಿದು 3ನೇ ಗೆಲುವು. ಈ ದೊಡ್ಡ ಅಂತರದ ಜಯದೊಂದಿಗೆ ಭಾರತ ತನ್ನ ನೆಟ್‌ ರನ್‌ರೇಟ್‌ (0.768) ಅನ್ನು ಉತ್ತಮಗೊಳಿಸಿಕೊಂಡಿತು. ಈ ಗೆಲುವಿನೊಂದಿಗೆ ಮಿಥಾಲಿ ರಾಜ್ ಪಡೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಹೀಗಿದೆ ನೋಡಿ ಭಾರತದ ಸೆಮೀಸ್ ಹಾದಿ:

6 ಪಂದ್ಯಗಳನ್ನಾಡಿರುವ ಭಾರತ 3ರಲ್ಲಿ 3ರಲ್ಲಿ ಸೋತು ಒಟ್ಟು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ರೌಂಡ್‌ ರಾಬಿನ್‌ ಹಂತದಲ್ಲಿ ತಂಡಕ್ಕಿನ್ನು 1 ಪಂದ್ಯ ಬಾಕಿ ಇದ್ದು, ಮಾ.27ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಪ್ರೇಲಿಯಾ ಈಗಾಗಲೇ ಸೆಮೀಸ್‌ ಅರ್ಹತೆ ಪಡೆದಿದೆ. 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಬಹುತೇಕ ಸೆಮೀಸ್‌ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನುಳಿದ 2 ಸ್ಥಾನಗಳಿಗೆ ಭಾರತ, ವೆಸ್ಟ್‌ಇಂಡೀಸ್‌ ಹಾಗೂ ಇಂಗ್ಲೆಂಡ್‌ ತಂಡಗಳು ಪೈಪೋಟಿ ನಡೆಸಲಿವೆ. ಗಣಿತೀಯವಾಗಿ ನ್ಯೂಜಿಲೆಂಡ್‌ ಸಹ ಇನ್ನೂ ಹೊರಬಿದ್ದಿಲ್ಲ. ಆದರೆ 6 ಪಂದ್ಯಗಳಿಂದ 4 ಅಂಕ ಹೊಂದಿದ್ದು, ನೆಟ್‌ ರನ್‌ರೇಟ್‌ ಸಹ ಕಳಪೆಯಾಗಿರುವ ಕಾರಣ ಸೆಮೀಸ್‌ಗೇರುವ ಸಾಧ್ಯತೆ ತೀರಾ ಕಡಿಮೆ.

ಭಾರತ ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ ತನ್ನ ಕೊನೆಯ ಪಂದ್ಯದಲ್ಲಿ ವಿಂಡೀಸ್‌, ದ.ಆಫ್ರಿಕಾ ವಿರುದ್ಧ ಸೋಲಬೇಕು. ಆಗ ಭಾರತ ಕೊನೆ ಪಂದ್ಯದಲ್ಲಿ ಸೋತರೂ ಸೆಮೀಸ್‌ಗೇರಲಿದೆ. ದ.ಆಫ್ರಿಕಾ ವಿರುದ್ಧ ವಿಂಡೀಸ್‌ ಗೆದ್ದು, ಪಾಕಿಸ್ತಾನ ಹಾಗೂ ಬಾಂಗ್ಲಾವನ್ನು ಇಂಗ್ಲೆಂಡ್‌ ಮಣಿಸಿದರೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ನಿರ್ಣಾಯಕ ಎನಿಸಲಿದೆ. ಆ ಪಂದ್ಯದಲ್ಲಿ ಭಾರತ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಗೆದ್ದರೆ ಸೆಮೀಸ್‌ಗೇರಲಿದೆ.

ವಿಶ್ವಕಪ್‌: ಆಸ್ಪ್ರೇಲಿಯಾಗೆ ಸತತ 6ನೇ ಗೆಲುವು

ವೆಲ್ಲಿಂಗ್ಟನ್‌: ನಾಯಕಿ ಮೆಗ್‌ ಲ್ಯಾನಿಂಗ್‌ನ ಮನಮೋಹಕ ಶತಕ(ಔಟಾಗದೆ 135)ದ ನೆರವಿನಿಂದ 6 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ, 2022ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಸತತ 6ನೇ ಗೆಲುವು ದಾಖಲಿಸಿದೆ. ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸೀಸ್‌ 5 ವಿಕೆಟ್‌ಗಳ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯಿತು.

ICC Women's World Cup: ಬಾಂಗ್ಲಾ ಎದುರು ಭಾರತ ಭರ್ಜರಿ ಜಯಭೇರಿ, ಸೆಮೀಸ್ ಆಸೆ ಜೀವಂತ

ಗೆಲುವಿಗೆ 272 ರನ್‌ ಗುರಿ ಬೆನ್ನತ್ತಿದ ಆಸ್ಪ್ರೇಲಿಯಾ ಇನ್ನೂ 4.4 ಓವರ್‌ ಬಾಕಿ ಇರುವಂತೆ ಜಯಿಸಿತು. ಲಾರಾ ವೂಲ್ವಾರ್ಟ್‌ 90 ರನ್‌ ಗಳಿಸಿದರು. ಲ್ಯಾನಿಂಗ್‌ 130 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್‌ನೊಂದಿಗೆ 135 ರನ್‌ ಗಳಿಸಿ, ಏಕದಿನದಲ್ಲಿ 15ನೇ ಶತಕ ದಾಖಲಿಸಿದರು. ಟೂರ್ನಿಯಲ್ಲಿ ದ.ಆಫ್ರಿಕಾಕ್ಕಿದು ಮೊದಲ ಸೋಲು.

ಸ್ಕೋರ್‌: ದ.ಆಫ್ರಿಕಾ 271/5, ಆಸ್ಪ್ರೇಲಿಯಾ 272/5


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!