ಇಂದಿನಿಂದ ಅಂಡರ್ 19 ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭ

By Suvarna NewsFirst Published Jan 14, 2022, 10:22 AM IST
Highlights

* ಬಹುನಿರೀಕ್ಷಿತ ಅಂಡರ್ 19 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ

* ವೆಸ್ಟ್‌ ಇಂಡೀಸ್‌ನಲ್ಲಿ ಮೊದಲ ಬಾರಿಗೆ ಕಿರಿಯರ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ

* ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ವಿಂಡೀಸ್‌ ಹಾಗೂ ಆಸ್ಪ್ರೇಲಿಯಾ ಮುಖಾಮುಖಿ

ಜಾಜ್‌ರ್‍ಟೌನ್‌(ಜ.14): ಕೋವಿಡ್‌ ಭೀತಿಯ (Coronavirus Threat) ನಡುವೆಯೂ 14ನೇ ಆವೃತ್ತಿಯ ಅಂಡರ್‌-19 ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ಶುಕ್ರವಾರ ಚಾಲನೆ ದೊರೆಯಲಿದೆ. ಇದೇ ಮೊದಲ ಬಾರಿಗೆ ವೆಸ್ಟ್‌ಇಂಡೀಸ್‌ ಟೂರ್ನಿಗೆ ಆತಿಥ್ಯ ವಹಿಸಲಿದ್ದು, 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಶುಕ್ರವಾರ ಆರಂಭಿಕ ಪಂದ್ಯದಲ್ಲಿ ಆತಿಥೇಯ ವಿಂಡೀಸ್‌ ಹಾಗೂ ಆಸ್ಪ್ರೇಲಿಯಾ (West Indies vs Australia) ಮುಖಾಮುಖಿಯಾಗಲಿದ್ದು, ಇನ್ನೊಂದು ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಸ್ಕಾಟ್ಲೆಂಡ್‌ ನಡುವೆ ನಡೆಯಲಿದೆ. 

ಇನ್ನು 4 ಬಾರಿ ಚಾಂಪಿಯನ್‌, 3 ಬಾರಿ ರನ್ನರ್‌-ಅಪ್‌ ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ತನ್ನ ಮೊದಲ ಪಂದ್ಯವನ್ನು ಜನವರಿ 15ಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಬಳಿಕ ಜನವರಿ 19ಕ್ಕೆ ಐರ್ಲೆಂಡ್‌, ಜನವರಿ 22ಕ್ಕೆ ಉಗಾಂಡ ವಿರುದ್ಧ ಸೆಣಸಲಿದೆ. ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು, 10 ಕ್ರೀಡಾಂಗಣಗಳು ಆತಿಥ್ಯ ವಹಿಸಲಿದೆ. ಫೆಬ್ರವರಿ 5ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಟೂರ್ನಿಯನ್ನು ಬಯೋಬಬಲ್‌ನೊಳಗೆ ನಡೆಸಲಾಗುತ್ತಿದೆ.

ಇತ್ತೀಚೆಗಷ್ಟೇ ದುಬೈನಲ್ಲಿ ಮುಕ್ತಾಯವಾದ ಎಸಿಸಿ ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ದಾಖಲೆಯ 8ನೇ ಬಾರಿಗೆ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಡೆಕ್ವರ್ಥ್ ಲೂಯಿಸ್ ನಿಯಮದ ಅನ್ವಯ ಭಾರತ 9 ವಿಕೆಟ್‌ಗಳ ಅಂತರದ ಭರ್ಜರಿ ಜಯ ದಾಖಲಿಸಿತ್ತು.

ಆಸೀಸ್‌-ಇಂಗ್ಲೆಂಡ್‌ ಆ್ಯಷಸ್‌ 5ನೇ ಟೆಸ್ಟ್‌ ಇಂದಿನಿಂದ ಆರಂಭ

ಹೋಬಾರ್ಟ್‌: ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ (Australia vs England) ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿಯ (Ashes Test Series) 5ನೇ ಹಾಗೂ ಅಂತಿಮ ಪಂದ್ಯ ಶುಕ್ರವಾರದಿಂದ ಆರಂಭಗೊಂಡಿದೆ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

Ashes Test: ಕೊನೆಯ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಸರಣಿಯಲ್ಲಿ ನಡೆಯಲಿರುವ 2ನೇ ಹಗಲು-ರಾತ್ರಿ ಪಂದ್ಯ ಇದಾಗಿದೆ. ಸರಣಿಯಲ್ಲಿ 3-0 ಮುನ್ನಡೆ ಹೊಂದಿರುವ ಆಸ್ಪ್ರೇಲಿಯಾ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಹಿಂದಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಇಂಗ್ಲೆಂಡ್‌, ಗೆಲುವಿನೊಂದಿಗೆ ಸರಣಿ ಮುಕ್ತಾಯಗೊಳಿಸುವ ಕನಸು ಕಾಣುತ್ತಿದೆ. ಆಸೀಸ್‌ನ ಆಡುವ ಹನ್ನೊಂದರಲ್ಲಿ ಟ್ರ್ಯಾವಿಸ್‌ ಹೆಡ್‌ ಸ್ಥಾನ ಪಡೆದಿದ್ದು, ಮಾರ್ಕಸ್‌ ಹ್ಯಾರಿಸ್‌ ಹೊರಬಿದ್ದಿದ್ದಾರೆ. ಡೇವಿಡ್ ವಾರ್ನರ್ ಜತೆಗೆ ಉಸ್ಮಾನ್ ಖವಾಜ ಆರಂಭಿಕನಾಗಿ ಆಡಲಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ನಿವೃತ್ತಿ ಹಿಂಪಡೆದ ಲಂಕಾ ಬ್ಯಾಟರ್‌ ಭನುಕ ರಾಜಪಕ್ಸ

ಕೊಲಂಬೊ: 10 ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ (Cricket Retirement) ಘೋಷಿಸಿದ್ದ ಶ್ರೀಲಂಕಾ ಬ್ಯಾಟರ್‌ ಭನುಕ ರಾಜಪಕ್ಸ, ಗುರುವಾರ ತಮ್ಮ ನಿರ್ಧಾರದಿಂದ ಹಿಂದೆ ಹಿಂಪಡೆದಿದ್ದಾರೆ. ಇದನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ (Sri Lanka Cricket) ಖಚಿತಪಡಿಸಿದೆ. 

SA vs India 3rd Test : ಗೆಲುವಿನ ಹಾದಿಯಲ್ಲಿ ದಕ್ಷಿಣ ಆಫ್ರಿಕಾ, ತಿರುಗೇಟು ನೀಡುತ್ತಾ ಟೀಂ ಇಂಡಿಯಾ?

ಕ್ರೀಡಾ ಸಚಿವ ನಮಲ್‌ ರಾಜಪಕ್ಸ ಅವರ ಜೊತೆಗಿನ ಮಾತುಕತೆ ಬಳಿಕ ಭನುಕ ನಿವೃತ್ತಿ ನಿರ್ಧಾರ ಬದಲಿಸಿದರು ಎಂದು ತಿಳಿದುಬಂದಿದೆ. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಭನುಕ ರಾಜಪಕ್ಸ 5 ಏಕದಿನ, 18 ಟಿ20 ಪಂದ್ಯಗಳನ್ನಾಡಿದ್ದು, ಜನವರಿ 3ರಂದು ಕೌಟುಂಬಿಕ ಕಾರಣ ನೀಡಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

click me!