ICC Rankings: ದೇವದತ್ ಪಡಿಕ್ಕಲ್‌ಗೆ ಬಂಪರ್, ಗಿಲ್- ಬುಮ್ರಾಗೆ ಹಿನ್ನಡೆ!

Published : Sep 02, 2026, 06:31 PM IST
Devdutt Padikkal

ಸಾರಾಂಶ

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ ದೇವದತ್ ಪಡಿಕ್ಕಲ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ಆದರೆ, ನಾಯಕ ಶುಭ್ಮನ್ ಗಿಲ್ ಹಾಗೂ ಗಾಯಾಳು ಜಸ್ಪ್ರೀತ್ ಬುಮ್ರಾ ತಮ್ಮ ರ‍್ಯಾಂಕಿಂಗ್‌ನಲ್ಲಿ ಕುಸಿತ ಅನುಭವಿಸಿದ್ದಾರೆ. ರಿಷಭ್ ಪಂತ್ ಭಾರತೀಯ ಬ್ಯಾಟರ್‌ಗಳ ಪೈಕಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ದುಬೈ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ಮಿಂಚಿದ್ದ ಟೀಂ ಇಂಡಿಯಾದ ದೇವದತ್ ಪಡಿಕ್ಕಲ್, ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಎರಡು ಸೆಂಚುರಿ ಸೇರಿದಂತೆ 328 ರನ್ ಬಾರಿಸಿದ್ದ ಪಡಿಕ್ಕಲ್, ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಐದು ಸ್ಥಾನ ಜಿಗಿದು 54ನೇ ಸ್ಥಾನಕ್ಕೆ ಬಂದಿದ್ದಾರೆ. ಇದೇ ವೇಳೆ, ಶ್ರೀಲಂಕಾದಲ್ಲಿ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿದ್ದ ಭಾರತದ ನಾಯಕ ಶುಭ್ಮನ್ ಗಿಲ್, ಎರಡು ಸ್ಥಾನಗಳನ್ನು ಕಳೆದುಕೊಂಡು 9ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಭಾರತೀಯ ಬ್ಯಾಟರ್‌ಗಳ ಪೈಕಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 7ನೇ ಸ್ಥಾನದಲ್ಲಿ ಮುಂದುವರಿದು, ಟಾಪ್ ಆಟಗಾರನಾಗಿ ಉಳಿದುಕೊಂಡಿದ್ದಾರೆ. ಯುವ ಓಪನರ್ ಯಶಸ್ವಿ ಜೈಸ್ವಾಲ್ 11ನೇ ಸ್ಥಾನದಲ್ಲೇ ಇದ್ದಾರೆ. ಶ್ರೀಲಂಕಾದ ಸೋನಲ್ ದಿನೂಷ, ಕೊಲಂಬೊ ಟೆಸ್ಟ್‌ನಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದಾಗಿ 29 ಸ್ಥಾನ ಮೇಲೇರಿ 25ನೇ ರ‍್ಯಾಂಕ್‌ಗೆ ತಲುಪಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಎರಡನೇ ಸ್ಥಾನದಲ್ಲಿದ್ದಾರೆ. ಒಂದು ಸ್ಥಾನ ಕೆಳಗಿಳಿದ ಇಂಗ್ಲೆಂಡ್‌ನ ಜೋ ರೂಟ್ ಮೂರನೇ ಸ್ಥಾನದಲ್ಲಿದ್ದಾರೆ.

ಜಸ್ಪ್ರೀತ್ ಬುಮ್ರಾಗೆ ಹಿನ್ನಡೆ:

ಗಾಯದ ಕಾರಣ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೂ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಹಿನ್ನಡೆಯಾಗಿದೆ. ಎರಡನೇ ಸ್ಥಾನದಲ್ಲಿದ್ದ ಬುಮ್ರಾ ಈಗ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದರೆ, ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಬುಮ್ರಾ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಸೆಪ್ಟೆಂಬರ್ ಮಧ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಬುಮ್ರಾ ಅವರನ್ನು ಆಯ್ಕೆ ಮಾಡಲಾಗಿದ್ದರೂ, ಅವರು ಫಿಟ್‌ನೆಸ್ ಸಾಬೀತುಪಡಿಸಿದ ನಂತರವೇ ಆಡಲಿದ್ದಾರೆ.

ಇನ್ನುಳಿದ ಬೌಲರ್‌ಗಳ ಪೈಕಿ, ಭಾರತದ ಮೊಹಮ್ಮದ್ ಸಿರಾಜ್ ಒಂದು ಸ್ಥಾನ ಮೇಲೇರಿ 17ನೇ ಸ್ಥಾನಕ್ಕೆ ಬಂದಿದ್ದಾರೆ. ಪಾಕಿಸ್ತಾನ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ 8 ವಿಕೆಟ್ ಪಡೆದ ಇಂಗ್ಲೆಂಡ್ ವೇಗಿ ಓಲಿ ರಾಬಿನ್ಸನ್ 6 ಸ್ಥಾನ ಜಿಗಿದು ಐದನೇ ಸ್ಥಾನಕ್ಕೇರಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನ ಟಾಪ್-10 ಬ್ಯಾಟರ್‌ಗಳ ಪಟ್ಟಿ ಹೀಗಿದೆ:

1. ಹ್ಯಾರಿ ಬ್ರೂಕ್

2. ಜೋ ರೂಟ್

3. ಸ್ಟೀವ್ ಸ್ಮಿತ್

4. ಟ್ರ್ಯಾವಿಸ್ ಹೆಡ್

5. ತೆಂಬಾ ಬವುಮಾ

6. ರಚಿನ್ ರವೀಂದ್ರ

7. ರಿಷಭ್ ಪಂತ್

8. ಡೇರಲ್ ಮಿಚೆಲ್

9. ಶುಭ್‌ಮನ್ ಗಿಲ್

10. ಕಮಿಂದು ಮೆಂಡಿಸ್

ಟೆಸ್ಟ್‌ ಕ್ರಿಕೆಟ್‌ನ ಟಾಪ್-10 ಬೌಲರ್‌ಗಳ ಪಟ್ಟಿ ಹೀಗಿದೆ:

1. ಮಿಚೆಲ್ ಸ್ಟಾರ್ಕ್

2. ಮ್ಯಾಟ್ ಹೆನ್ರಿ

3. ಜಸ್ಪ್ರೀತ್ ಬುಮ್ರಾ

4. ಪ್ಯಾಟ್ ಕಮಿನ್ಸ್

5. ಓಲಿ ರಾಬಿನ್‌ಸನ್

6. ಮಾರ್ಕೊ ಯಾನ್ಸನ್

7. ಕಗಿಸೋ ರಬಾಡ

8. ಸ್ಕಾಟ್ ಬೊಲೆಂಡ್

9. ನೂಮನ್ ಅಲಿ

10. ಜೋಸ್ ಹೇಜಲ್‌ವುಡ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: 9 ವರ್ಷವಾದರೂ ಮುರಿಯದ ವಿಶ್ವ ದಾಖಲೆ! ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಈ 5 ನಾಯಕರು ಇವರೆ!
BCCI ಉನ್ನತ ಮಟ್ಟದ ಸಭೆ : 5 ಮುಖ್ಯ ಅಜೆಂಡಾ ಚರ್ಚೆ, ನಾಳೆಯೇ ರೋಹಿತ್ ಶರ್ಮಾ ಭವಿಷ್ಯ ನಿರ್ಧಾರ