T20 World Cup ನೆದರ್‌ಲೆಂಡ್ಸ್ ಎದುರು ಟಾಸ್ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್ ಆಯ್ಕೆ

By Naveen KodaseFirst Published Nov 2, 2022, 9:16 AM IST
Highlights

ಅಡಿಲೇಡ್‌ನಲ್ಲಿಂದು ಜಿಂಬಾಬ್ವೆ-ನೆದರ್‌ಲೆಂಡ್ಸ್‌ ಸೆಣಸಾಟ
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಜಿಂಬಾಬ್ವೆ
ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಆಯ್ಕೆ

ಅಡಿಲೇಡ್‌(ನ.02): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 34ನೇ ಪಂದ್ಯದಲ್ಲಿಂದು ನೆದರ್‌ಲೆಂಡ್ಸ್‌ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಜಿಂಬಾಬ್ವೆ ತಂಡದ ನಾಯಕ ಕ್ರೇಗ್ ಇರ್ವಿನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದು ಕೊಂಡಿದ್ದಾರೆ. ಉಭಯ ತಂಡದಲ್ಲೂ ಕೆಲ ಮಹತ್ವದ ಬದಲಾವಣೆ ಮಾಡಿದೆ.

ಜಿಂಬಾಬ್ವೆ ಹಾಗೂ ನೆದರ್‌ಲೆಂಡ್ಸ್‌ ತಂಡಗಳ ನಡುವಿನ ಸೆಣಸಾಟಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಜಿಂಬಾಬ್ವೆ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡಲಾಗಿದ್ದು, ಬ್ರಾಡ್ ಇವಾನ್ಸ್‌ ಬದಲಿಗೆ ಲೂಕ್ ಜೋಂಗ್ವೆ ಜಿಂಬಾಬ್ವೆ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ನೆದರ್‌ಲೆಂಡ್ಸ್ ತಂಡದಲ್ಲಿ ಟಿಮ್ ಪ್ರಿಂಗಲ್ ಬದಲಿಗೆ ಬ್ರೆಂಡನ್ ಗ್ಲೋವರ್ ತಂಡ ಕೂಡಿಕೊಂಡಿದ್ದಾರೆ.

T20 World Cup ಜಿಂಬಾಬ್ವೆಗೆ ನೆದರ್‌ಲೆಂಡ್ಸ್‌ ವಿರುದ್ಧ ಮಹತ್ವದ ಪಂದ್ಯ

ಸೆಮೀಸ್‌ ಪ್ರವೇಶಿಸುವ ದೃಷ್ಟಿಯಿಂದ ಜಿಂಬಾಬ್ವೆ ತಂಡದ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.  ಜಿಂಬಾಬ್ವೆ ತಂಡ ಸದ್ಯ 3 ಅಂಕ ಹೊಂದಿದ್ದು, ಉತ್ತಮ ರನ್‌ ರೇಟ್‌ನೊಂದಿಗೆ ಗೆದ್ದರೆ 2ನೇ ಸ್ಥಾನಕ್ಕೇರುವ ಅವಕಾಶವಿದೆ. ಸೋತರೆ ಸೆಮೀಸ್‌ ಕನಸು ಭಗ್ನಗೊಳ್ಳಲಿದೆ. ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಒಂದು ಅಂಕ ಜಿಂಬಾಬ್ವೆ ಖಾತೆ ಸೇರಿತ್ತು. ಇನ್ನು ಪಾಕಿಸ್ತಾನ ವಿರುದ್ದ 1 ರನ್‌ ರೋಚಕ ಜಯ ಸಾಧಿಸುವ ಮೂಲಕ ಸೆಮೀಸ್‌ ಕನಸು ಜೀವಂತವಾಗಿರಿಸಿಕೊಂಡಿತ್ತು. ಆದರೆ ಬಾಂಗ್ಲಾದೇಶ ವಿರುದ್ದ 3 ರನ್‌ಗಳ ರೋಚಕ ಸೋಲು ಅನುಭವಿಸಿತ್ತು. ಇದೀಗ ಜಿಂಬಾಬ್ವೆ ತಂಡವು ನೆದರ್‌ಲೆಂಡ್ಸ್‌ ಎದುರು ಭರ್ಜರಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ.

Toss update from Adelaide 🏏

Zimbabwe have opted to bat against Netherlands in Match 22 of Super 12. | | 📝: https://t.co/YYZiU8BZwC pic.twitter.com/oAtgTmToeQ

— T20 World Cup (@T20WorldCup)

ಸದ್ಯ ಜಿಂಬಾಬ್ವೆ ತಂಡವು ಒಂದು ಗೆಲುವು, ಒಂದು ಸೋಲು ಹಾಗೂ ಒಂದು ರದ್ದಾದ ಪಂದ್ಯದ ಸಹಿತ ಒಟ್ಟು 3 ಅಂಕಗಳೊಂದಿಗೆ ಗ್ರೂಪ್ 2 ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನೊಂದಡೆ ಸ್ಕಾಟ್ ಎಡ್ವರ್ಡ್ಸ್‌ ನೇತೃತ್ವದ ನೆದರ್‌ಲೆಂಡ್ಸ್‌ ತಂಡವು ಸೂಪರ್ 12 ಹಂತದಲ್ಲಿ ಆಡಿದ 3 ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ತಂಡಗಳು ಹೀಗಿವೆ ನೋಡಿ:

ಜಿಂಬಾಬ್ವೆ: ವೆಸ್ಲೆ ಮೆದೆವರೆ, ಕ್ರೆಗ್ ಇರ್ವಿನ್, ಮಿಲ್ಟನ್ ಶುಂಭಾ, ಸೀನ್ ವಿಲಿಯಮ್ಸ್‌, ಸಿಕಂದರ್ ರಾಜಾ, ರೇಗಿಸ್ ಚಕಾಬ್ವಾ, ಲೂಕ್ ಜೋಂಗ್ವೆ, ರೆಯನ್ ಬುರ್ಲ್, ರಿಚರ್ಡ್‌ ಗರಾವ, ಬ್ಲೆಸ್ಸಿಂಗ್ ಮುಜರಬಾನಿ, ಟೆಂಡೈ ಚಟಾರ.

ನೆದರ್‌ಲೆಂಡ್ಸ್‌ ತಂಡ: ಸ್ಟಿಫನ್ ಮೈಬರ್ಗ್‌, ಮ್ಯಾಕ್ ಒ ಡೌಡ್, ಬಾಸ್ ಡಿ ಲೇಡೆ, ಕಾಲಿನ್ ಅಕೆರ್‌ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್‌(ನಾಯಕ&ವಿಕೆಟ್ ಕೀಪರ್), ಲೋಗನ್ ವ್ಯಾನ್ ಬೀಕ್, ಶೆರಿಜ್‌ ಅಹಮದ್, ಫ್ರೆಡ್ ಕ್ಲಾಸೇನ್, ಪೌಲ್ ವ್ಯಾನ್ ಮೀಕ್ರೇನ್, ಬ್ರೆಂಡನ್ ಗ್ಲೋವರ್

click me!