T20 World Cup ಜಿಂಬಾಬ್ವೆಗೆ ನೆದರ್‌ಲೆಂಡ್ಸ್‌ ವಿರುದ್ಧ ಮಹತ್ವದ ಪಂದ್ಯ

By Naveen KodaseFirst Published Nov 2, 2022, 8:52 AM IST
Highlights

ಅಡಿಲೇಡ್‌ನಲ್ಲಿಂದು ಜಿಂಬಾಬ್ವೆಗೆ ನೆದರ್‌ಲೆಂಡ್ಸ್‌ ಸವಾಲು
ಮತ್ತೊಂದು ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿ ಜಿಂಬಾಬ್ವೆ
ಹ್ಯಾಟ್ರಿಕ್ ಸೋಲಿನಿಂದ ಹೊರಬರುತ್ತಾ ನೆದರ್‌ಲೆಂಡ್ಸ್‌

ಅಡಿಲೇಡ್‌(ನ.02): ಹೋರಾಟದ ಮನೋಭಾವದೊಂದಿಗೆ ಕೆಲ ರೋಚಕ ಫಲಿತಾಂಶಗಳಿಗೆ ಸಾಕ್ಷಿಯಾಗಿರುವ ಜಿಂಬಾಬ್ವೆ ಟಿ20 ವಿಶ್ವಕಪ್‌ನಲ್ಲಿ ಬುಧವಾರ ನೆದರ್ಲೆಂಡ್‌್ಸ ವಿರುದ್ಧ ಸೆಣಸಾಡಲಿದ್ದು, ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಗೆಲುವು ಅನಿವಾರ್ಯವಾಗಿದೆ. ಒಂದು ವೇಳೆ ಜಿಂಬಾಬ್ವೆ ಗೆದ್ದರೆ ಗುಂಪು-1ರ ಸೆಮೀಸ್‌ ಲೆಕ್ಕಾಚಾರ ಮತ್ತಷ್ಟು ರೋಚಕಗೊಳ್ಳುವುದು ಖಚಿತ. 

ಜಿಂಬಾಬ್ವೆ ತಂಡ ಸದ್ಯ 3 ಅಂಕ ಹೊಂದಿದ್ದು, ಉತ್ತಮ ರನ್‌ ರೇಟ್‌ನೊಂದಿಗೆ ಗೆದ್ದರೆ 2ನೇ ಸ್ಥಾನಕ್ಕೇರುವ ಅವಕಾಶವಿದೆ. ಸೋತರೆ ಸೆಮೀಸ್‌ ಕನಸು ಭಗ್ನಗೊಳ್ಳಲಿದೆ. ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ ಒಂದು ಅಂಕ ಜಿಂಬಾಬ್ವೆ ಖಾತೆ ಸೇರಿತ್ತು. ಇನ್ನು ಪಾಕಿಸ್ತಾನ ವಿರುದ್ದ 1 ರನ್‌ ರೋಚಕ ಜಯ ಸಾಧಿಸುವ ಮೂಲಕ ಸೆಮೀಸ್‌ ಕನಸು ಜೀವಂತವಾಗಿರಿಸಿಕೊಂಡಿತ್ತು. ಆದರೆ ಬಾಂಗ್ಲಾದೇಶ ವಿರುದ್ದ 3 ರನ್‌ಗಳ ರೋಚಕ ಸೋಲು ಅನುಭವಿಸಿತ್ತು. ಇದೀಗ ಜಿಂಬಾಬ್ವೆ ತಂಡವು ನೆದರ್‌ಲೆಂಡ್ಸ್‌ ಎದುರು ಭರ್ಜರಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ.

ಮತ್ತೊಂದೆಡೆ ಈಗಾಗಲೇ ಆಡಿದ ಮೂರೂ ಪಂದ್ಯಗಳಲ್ಲಿ ಸೋಲುವುದರೊಂದಿಗೆ ನೆದರ್ಲೆಂಡ್‌್ಸ ಸೆಮೀಸ್‌ ರೇಸ್‌ನಿಂದ ಹೊರಗುಳಿದಿದ್ದು, ಪ್ರತಿಷ್ಠೆಗಾಗಿ ಆಡಲಿದೆ. ನೆದರ್‌ಲೆಂಡ್ಸ್‌ ತಂಡವು ಮ್ಯಾಕ್ಸ್‌ ಒ ಡೌಡ್, ಬಾಸ್ ಡೆ ಲೀಡೆ, ಟಾಮ್ ಕೂಪರ್, ಕಾಲಿನ್ ಅಕರ್‌ಮನ್ ಸ್ಕಾಟ್ ಎಡ್ವರ್ಡ್ಸ್‌ ಅವರನ್ನು ನೆಚ್ಚಿಕೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ವಿಕ್ರಂಜಿತ್ ಸಿಂಗ್ ಅವರನ್ನು ಹೊರಗಿಟ್ಟು ಸ್ಟಿಫನ್ ಮೈಬರ್ಗ್‌ ಅವರಿಗೆ ನೆದರ್‌ಲೆಂಡ್ಸ್‌ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ.

T20 World Cup ಕಿವೀಸ್ ಮಣಿಸಿ ಸೆಮೀಸ್ ಆಸೆ ಜೀವಂತವಾಗಿರಿಸಿಕೊಂಡ ಇಂಗ್ಲೆಂಡ್..!

ಸದ್ಯ ಜಿಂಬಾಬ್ವೆ ತಂಡವು ಒಂದು ಗೆಲುವು, ಒಂದು ಸೋಲು ಹಾಗೂ ಒಂದು ರದ್ದಾದ ಪಂದ್ಯದ ಸಹಿತ ಒಟ್ಟು 3 ಅಂಕಗಳೊಂದಿಗೆ ಗ್ರೂಪ್ 2 ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನೊಂದಡೆ ಸ್ಕಾಟ್ ಎಡ್ವರ್ಡ್ಸ್‌ ನೇತೃತ್ವದ ನೆದರ್‌ಲೆಂಡ್ಸ್‌ ತಂಡವು ಸೂಪರ್ 12 ಹಂತದಲ್ಲಿ ಆಡಿದ 3 ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಜಿಂಬಾಬ್ವೆ: ವೆಸ್ಲೆ ಮೆದೆವರೆ, ಕ್ರೆಗ್ ಇರ್ವಿನ್, ಮಿಲ್ಟನ್ ಶುಂಭಾ, ಸೀನ್ ವಿಲಿಯಮ್ಸ್‌, ಸಿಕಂದರ್ ರಾಜಾ, ರೇಗಿಸ್ ಚಕಾಬ್ವಾ, ರೆಯನ್ ಬುರ್ಲ್, ಬ್ರಾಡ್ ಇವಾನ್ಸ್‌, ರಿಚರ್ಡ್‌ ಗರಾವ, ಬ್ಲೆಸ್ಸಿಂಗ್ ಮುಜರಬಾನಿ, ಟೆಂಡೈ ಚಟಾರ.

ನೆದರ್‌ಲೆಂಡ್ಸ್‌ ತಂಡ: ಸ್ಟಿಫನ್ ಮೈಬರ್ಗ್‌, ಮ್ಯಾಕ್ ಒ ಡೌಡ್, ಬಾಸ್ ಡಿ ಲೇಡೆ, ಕಾಲಿನ್ ಅಕೆರ್‌ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್‌(ನಾಯಕ&ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶೆರಿಜ್‌ ಅಹಮದ್, ಫ್ರೆಡ್ ಕ್ಲಾಸೇನ್, ಪೌಲ್ ವ್ಯಾನ್ ಮೀಕ್ರೇನ್

ಪಂದ್ಯ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

click me!