
ಬ್ರಿಸ್ಬೇನ್(ನ.01): ನೀರಸ ಪ್ರದರ್ಶನದೊಂದಿಗೆ ಐಸಿಸಿ ಟಿ20 ವಿಶ್ವಕಪ್‌ನ ಗುಂಪು 1ರಲ್ಲಿ ಕ್ರಮವಾಗಿ ಕೊನೆ 2 ಸ್ಥಾನಗಳನ್ನು ಹಂಚಿಕೊಂಡಿರುವ ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಸೋತವರು ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರಗುಳಿಯಲಿದ್ದಾರೆ. ಹೀಗಾಗಿ ಇಂದು ನಡೆಯುವ ಪಂದ್ಯವು ಉಭಯ ತಂಡಗಳ ಪಾಲಿಗೆ ವರ್ಚುವಲ್ ನಾಕೌಟ್ ಪಂದ್ಯ ಎನಿಸಿಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ್ದ ಆಫ್ಘನ್‌ಗೆ ಬಳಿಕ ಮಳೆರಾಯ ತೀವ್ರವಾಗಿ ಕಾಡಿದ್ದು, ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಪಂದ್ಯ ರದ್ದಾಗಿದ್ದರಿಂದ ತಂಡ ಸದ್ಯ 2 ಅಂಕಗಳನ್ನಷ್ಟೇ ಹೊಂದಿದೆ. ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ಎದುರು ಗೆಲುವು ಸಾಧಿಸಬೇಕಿದ್ದರೇ ಆಫ್ಘಾನಿಸ್ತಾನ ತಂಡವು ಸಂಘಟಿತ ಪ್ರದರ್ಶನ ತೋರಬೇಕಿದೆ.
T20 World Cup ಐರ್ಲೆಂಡ್ ಬಗ್ಗುಬಡಿದು ಸೆಮೀಸ್ ಕನಸು ಜೀವಂತವಾಗಿಟ್ಟುಕೊಂಡ ಆಸೀಸ್
ಮತ್ತೊಂದೆಡೆ ಅರ್ಹತಾ ಸುತ್ತಿನ ಮೂಲಕ ಸೂಪರ್ 12ಕ್ಕೇರಿದ್ದ ಲಂಕಾ ಐರ್ಲೆಂಡ್ ವಿರುದ್ಧ ಗೆದ್ದರೂ ಆಸ್ಪ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಕೇವಲ 2 ಅಂಕ ಹೊಂದಿರುವ ಲಂಕಾಕ್ಕೂ ಈ ಪಂದ್ಯದಲ್ಲಿ ಗೆದ್ದರಷ್ಟೇ ಸೆಮೀಸ್ ಆಸೆ ಜೀವಂತವಾಗಿರಲಿದೆ. ಪಂದ್ಯಕ್ಕೆ ಮಳೆ ಭೀತಿ ಇದ್ದು, ರದ್ದಾದರೆ ಆಫ್ಘನ್‌ಗೆ ಸತತ 3ನೇ ಪಂದ್ಯ ನಷ್ಟವಾದಂತಾಗಲಿದೆ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ:
ಆಫ್ಘಾನಿಸ್ತಾನ: ಗುಲ್ಬದ್ದೀನ್ ನೈಬ್, ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಉಸ್ಮಾನ್ ಘನಿ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್‌ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಫರೀದ್ ಅಹಮ್ಮದ್, ಫಜಲ್‌ಹಕ್ ಪಾರೂಕಿ.
ಶ್ರೀಲಂಕಾ: ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ. ದಶುನ್ ಶನಕ, ವನಿಂದು ಹಸರಂಗ, ಚಮಿಕಾ ಕರುಣರತ್ನೆ ಮಹೀಶ್ ತೀಕ್ಷಣ, ಕುಸನ್ ರಜಿತಾ, ಲಹಿರು ಕುಮಾರ.
ಪಂದ್ಯ: ಬೆಳಗ್ಗೆ 9.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.