ಐಸಿಸಿ ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ-ನ್ಯೂಜಿಲೆಂಡ್ ಸೆಣಸಾಟ
ಮೊದಲ ಸೆಮೀಸ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯ
ಮತ್ತೊಮ್ಮೆ ಫೈನಲ್‌ಗೇರುವ ವಿಶ್ವಾಸದಲ್ಲಿ ನ್ಯೂಜಿಲೆಂಡ್ ತಂಡ
ಸಿಡ್ನಿ(ನ.09): ಐಸಿಸಿ ಟೂರ್ನಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ನ್ಯೂಜಿಲೆಂಡ್ ಈವರೆಗೂ ಏಕದಿನ, ಟಿ20 ವಿಶ್ವಕಪ್ ಗೆದ್ದಿಲ್ಲ. ತಂಡಕ್ಕೆ ಪ್ರಶಸ್ತಿ ಬರ ನೀಗಿಸಲು ಈ ಬಾರಿ ಮತ್ತೊಂದು ಅವಕಾಶವಿದ್ದು, ಬುಧವಾರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಫೈನಲ್‌ಗೇರುವ ಕಾತರದಲ್ಲಿದೆ. ಸೂಪರ್-12ರ ಹಂತದಲ್ಲಿ ‘ಗ್ರೂಪ್ ಆಫ್ ಡೆತ್’ ಎಂದೇ ಕರೆಸಿಕೊಳ್ಳುತ್ತಿದ್ದ ಗುಂಪು 1ರಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನಿಯಾಗಿಯೇ ನಾಕೌಟ್‌ಗೇರಿತ್ತು. ಅತ್ತ ಪಾಕಿಸ್ತಾನ ತಂಡ ಭಾರತ, ಜಿಂಬಾಬ್ವೆ ವಿರುದ್ಧ ಸೋತರೂ ಅದೃಷ್ಟದ ಬಾಗಿಲ ಮೂಲಕ ‘ಬಿ’ಗುಂಪಿನಿಂದ ಅಂತಿಮ 4ರ ಘಟ್ಟಪ್ರವೇಶಿಸಿದೆ.
ಯಾರನ್ನೂ ಹೆಚ್ಚಾಗಿ ನೆಚ್ಚಿಕೊಳ್ಳದೇ ಸಂಘಟಿತ ಪ್ರದರ್ಶನ ತೋರಿದ್ದ ಕಿವೀಸ್, ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಪ್ರೇಲಿಯಾ, ಬಳಿಕ ಶ್ರೀಲಂಕಾ, ಐರ್ಲೆಂಡ್‌ಗೆ ಸೋಲುಣಿಸಿತ್ತು. ಫಿನ್ ಆ್ಯಲೆನ್, ಗ್ಲೆನ್ ಫಿಲಿಫ್ಸ್, ಡೆವೋನ್ ಕಾನ್‌ವೇ ಸೇರಿದಂತೆ ಸ್ಫೋಟಕ ಬ್ಯಾಟರ್‌ಗಳ ದಂಡೇ ತಂಡದಲ್ಲಿದ್ದು, ನಾಯಕ ವಿಲಿಯಮ್ಸನ್ ಕೂಡಾ ಫಾಮ್‌ರ್‍ಗೆ ಮರಳಿದ್ದಾರೆ. ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್ ಅಲ್ರೌಂಡ್ ಆಟ ತಂಡಕ್ಕೆ ನೆರವಾಗುತ್ತಿದೆ. ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಫಗ್ರ್ಯೂಸನ್ ಸೇರಿ ಪ್ರಚಂಡ ವೇಗಿಗಳ ಬಲ ತಂಡಕ್ಕಿದೆ. ಇಶ್ ಸೋಧಿ ತಮ್ಮ ಸ್ಪಿನ್ ಅಸ್ತ್ರದ ಮೂಲಕವೇ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.
undefined
ಬೌಲಿಂಗ್ ಬಲ
ಅತ್ತ ಪಾಕ್ ಬೌಲಿಂಗ್ ಪಡೆ ಮಿಂಚಿದ್ದು ಬಿಟ್ಟರೆ ಟೂರ್ನಿಯಲ್ಲಿ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆರಂಭಿಕ ಜೋಡಿ ಬಾಬರ್ ಆಜಂ-ಮೊಹಮದ್ ರಿಜ್ವಾನ್‌ರನ್ನೇ ತಂಡ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಅವರ ವೈಫಲ್ಯ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಶಾನ್ ಮಸೂದ್, ಇಫ್ತಿಕಾರ್ ಅಹ್ಮದ್ ತಂಡಕ್ಕೆ ನೆರವಾಗುತ್ತಿದ್ದಾರೆ. ಆಲ್ರೌಂಡರ್ ಶಾದಾಬ್ ಖಾನ್ ಸದ್ಯ ತಂಡದ ಟ್ರಂಪ್‌ಕಾರ್ಡ್ ಎನಿಸಿಕೊಂಡಿದ್ದು, ಅವರ ಪ್ರದರ್ಶನದ ಮೇಲೆ ಫಲಿತಾಂಶ ಅವಲಂಬಿತವಾಗಿದೆ. ನಿರ್ಣಾಯಕ ಘಟ್ಟದಲ್ಲಿ ಶಾಹೀನ್ ಅಫ್ರಿದಿ ಲಯಕ್ಕೆ ಮರಳಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಹಾರಿಸ್ ರೌಫ್, ನಸೀಂ ಶಾ, ವಾಸಿಂ ಪ್ರಚಂಡ ವೇಗದ ಮೂಲಕವೇ ಎದುರಾಳಿಗಳನ್ನು ನಡುಗಿಸಬಲ್ಲರು.
T20 World Cup: ಮಳೆಯಿಂದ 2 ಸೆಮೀಸ್ ಪಂದ್ಯಗಳು ರದ್ದಾದ್ರೆ, ಯಾವ ತಂಡಗಳಿಗಿವೆ ಫೈನಲ್‌ಗೇರುವ ಅವಕಾಶ?
ಪಂದ್ಯ: ಸಿಡ್ನಿ ಕ್ರೀಡಾಂಗಣ
ಸಮಯ: ಮಧ್ಯಾಹ್ನ 1.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸಂಭವನೀಯ ಆಟಗಾರರ ಪಟ್ಟಿ
ನ್ಯೂಜಿಲೆಂಡ್: ಫಿನ್ ಆ್ಯಲೆನ್, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಫ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫಗ್ರ್ಯೂಸನ್, ಟ್ರೆಂಟ್ ಬೌಲ್ಟ್
ಪಾಕಿಸ್ತಾನ: ಬಾಬರ್ ಆಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಶಾನ್ ಮಸೂದ್, ಇಫ್ತಿಕಾರ್ ಅಹಮದ್, ಮೊಹಮ್ಮದ್ ಹಾರಿಸ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಇಮಾದ್ ವಾಸಿಂ, ನಸೀಂ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ
ಪಿಚ್ ರಿಪೋರ್ಚ್
ಇದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆ ಇದೆ. ಸ್ಪಿನ್ನರ್‌ಗಳೂ ಪ್ರಮುಖ ಪಾತ್ರ ವಹಿಸಬಹುದು. ಇಲ್ಲಿ ನಡೆದ ಟೂರ್ನಿಯ 6 ಪಂದ್ಯಗಳಲ್ಲಿ 5ರಲ್ಲಿ ಮೊದಲು ಬ್ಯಾಟ್ ಮಾಡಿದ ಜಯಗಳಿಸಿದೆ. ಹೀಗಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಬಹುದು.
3 ಸೆಮೀಸಲ್ಲೂ ಪಾಕ್‌ಗೆ ಜಯ
ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಪಾಕ್-ಕಿವೀಸ್ 3 ಬಾರಿ ಮುಖಾಮುಖಿಯಾಗಿದ್ದು, ಮೂರು ಪಂದ್ಯಗಳಲ್ಲಿ ಪಾಕ್ ಜಯಗಳಿಸಿದೆ. 1992, 1999ರ ಏಕದಿನ ವಿಶ್ವಕಪ್ ಸೆಮೀಸ್, 2007ರ ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ಕಿವೀಸ್ ಪಾಕ್‌ಗೆ ಶರಣಾಗಿತ್ತು.