T20 World Cup ಕಿವೀಸ್ ಎದುರು ಟಾಸ್ ಗೆದ್ದ ಐರ್ಲೆಂಡ್ ಬೌಲಿಂಗ್ ಆಯ್ಕೆ

Published : Nov 04, 2022, 09:13 AM ISTUpdated : Nov 04, 2022, 09:26 AM IST
T20 World Cup ಕಿವೀಸ್ ಎದುರು ಟಾಸ್ ಗೆದ್ದ ಐರ್ಲೆಂಡ್ ಬೌಲಿಂಗ್ ಆಯ್ಕೆ

ಸಾರಾಂಶ

ಅಡಿಲೇಡ್ ಓವಲ್‌ ಮೈದಾನದಲ್ಲಿಂದು ಐರ್ಲೆಂಡ್-ನ್ಯೂಜಿಲೆಂಡ್ ಮುಖಾಮುಖಿ ಐರ್ಲೆಂಡ್ ಎದುರು ಗೆದ್ದು ಸೆಮೀಸ್‌ಗೇರುವ ಕನವರಿಕೆಯಲ್ಲಿ ನ್ಯೂಜಿಲೆಂಡ್ ತಂಡ ಮತ್ತೆ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿ ಐರ್ಲೆಂಡ್ ಕ್ರಿಕೆಟ್ ತಂಡ

ಐರ್ಲೆಂಡ್‌(ನ.04): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 37ನೇ ಪಂದ್ಯದಲ್ಲಿಂದು ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಐರ್ಲೆಂಡ್ ತಂಡದ ನಾಯಕ ಆಂಡ್ರ್ಯೂ ಬಲ್ಬ್ರೈನ್‌ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಸೆಮೀಸ್‌ ಪ್ರವೇಶಿಸುವ ದೃಷ್ಠಿಯಿಂದ ನ್ಯೂಜಿಲೆಂಡ್ ಪಾಲಿಗೆ ಈ ಪಂದ್ಯ ಸಾಕಷ್ಟು ಮಹತ್ವದ್ದೆನಿಸಿದೆ. ಇನ್ನೊಂದೆಡೆ ಬಹುತೇಕ ಸೆಮೀಸ್ ರೇಸ್‌ನಿಂದ ಹೊರಬಿದ್ದಿರುವ ಐರ್ಲೆಂಡ್ ತಂಡವು ಪ್ರತಿಷ್ಠೆಗಾಗಿ ಸೆಣಸಾಟ ನಡೆಸಲಿದೆ.

ಐರ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಈ ಮಹತ್ವದ ಪಂದ್ಯಕ್ಕೆ ಇಲ್ಲಿನ ಅಡಿಲೇಡ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ಉಭಯ ತಂಡಗಳಲ್ಲೂ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಘಾತಕಾರಿ ಸೋಲು ಅನುಭವಿಸಿರುವ ನ್ಯೂಜಿಲೆಂಡ್ ತಂಡವು ಇದೀಗ ಮತ್ತೆ ಗೆಲುವಿನ ಲಯಕ್ಕೆ ಮರಳುವುದರ ಜತೆಗೆ ಗ್ರೂಪ್ 1 ವಿಭಾಗದಿಂದ ಮೊದಲ ತಂಡವಾಗಿ ಸೆಮೀಸ್‌ಗೆ ಅರ್ಹತೆ ಪಡೆಯುವ ಲೆಕ್ಕಾಚಾರದಲ್ಲಿದೆ. 

ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಡೆವೊನ್ ಕಾನ್‌ವೇ ಹಾಗೂ ಫಿನ್ ಅಲೆನ್ ಸ್ಪೋಟಕ ಆರಂಭ ಒದಗಿಸಿಕೊಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಫ್ಸ್‌ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇನ್ನು ಬೌಲಿಂಗ್‌ನಲ್ಲಿ ತ್ರಿವಳಿ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಹಾಗೂ ಲಾಕಿ ಫರ್ಗ್ಯೂಸನ್ ಮಾರಕ ದಾಳಿ ಸಂಘಟಿಸುತ್ತಿದ್ದು, ಸ್ಪಿನ್ನರ್‌ಗಳಾದ ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್‌ ಕೂಡಾ ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಸವಾಲೆನಿಸಿಕೊಂಡಿದ್ದಾರೆ.

T20 World Cup ಐರ್ಲೆಂಡ್‌ ವಿರುದ್ಧ ಗೆದ್ದು ಸೆಮೀಸ್‌ಗೇರುತ್ತಾ ಕಿವೀಸ್‌?

ಮತ್ತೊಂದೆಡೆ ಐರ್ಲೆಂಡ್‌ ಸದ್ಯ 3 ಅಂಕ ಹೊಂದಿದ್ದು, ಗೆದ್ದರೂ ನಾಕೌಟ್‌ಗೇರುವುದು ಕಷ್ಟ. ಹೀಗಿದ್ದೂ ಐರ್ಲೆಂಡ್ ತಂಡವು ಬ್ಯಾಟಿಂಗ್‌ನಲ್ಲಿ ಪೌಲ್ ಸ್ಟರ್ಲಿಂಗ್, ನಾಯಕ ಆಂಡ್ರ್ಯೂ ಬಲ್ಬ್ರೈನ್, ಲಾರ್ಕನ್ ಟುಕರ್, ಹ್ಯಾರಿ ಟೆಕ್ಟರ್ , ಕುರ್ಟಿಸ್ ಕ್ಯಾಂಪರ್ ಅವರಂತಹ ಬ್ಯಾಟರ್‌ಗಳಿದ್ದು, ಕಿವೀಸ್ ಬೌಲಿಂಗ್ ಪಡೆಯ ಎದುರು ಅಬ್ಬರಿಸಲು ಎದುರು ನೋಡುತ್ತಿದ್ದಾರೆ. ನ್ಯೂಜಿಲೆಂಡ್ ಪಾಲಿಗೆ ಈ ಪಂದ್ಯ ಸೆಮೀಸ್‌ ಕನಸಾಗಿದ್ದರೇ, ಐರ್ಲೆಂಡ್ ಪಾಲಿಗೆ ಇದು ಪ್ರತಿಷ್ಠೆಯ ಪಂದ್ಯ ಎನಿಸಿಕೊಂಡಿದೆ.

ಸದ್ಯ ನ್ಯೂಜಿಲೆಂಡ್ ತಂಡವು 4 ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲು ಹಾಗೂ ಒಂದು ರದ್ದಾದ ಪಂದ್ಯದೊಂದಿಗೆ ಗ್ರೂಪ್ 1 ಅಂಕಪಟ್ಟಿಯಲ್ಲಿ 5 ಅಂಕಗಳ ಸಹಿತ ಅಗ್ರಸ್ಥಾನದಲ್ಲಿದೆ. ಈ ಪಂದ್ಯದ ಗೆಲುವು ಕೇನ್ ವಿಲಿಯಮ್ಸನ್ ಪಡೆಯ ಸೆಮೀಸ್‌ ಸ್ಥಾನವನ್ನು ಖಚಿತಪಡಿಸಲಿದೆ. ಇನ್ನು ಐರ್ಲೆಂಡ್ ತಂಡವು 4 ಪಂದ್ಯಗಳನ್ನಾಡಿ ಒಂದು ಗೆಲುವು, ಎರಡು ಸೋಲು ಹಾಗೂ ಒಂದು ರದ್ದಾದ ಪಂದ್ಯದ ಸಹಿತ ಕೇವಲ 3 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಈಗಾಗಲೇ ಬಹುತೇಕ ಸೆಮೀಸ್ ಹಾದಿಯಿಂದ ಹೊರಬಿದ್ದಿದೆ.

ತಂಡಗಳು ಹೀಗಿವೆ ನೋಡಿ

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್‌ವೇ(ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್‌(ನಾಯಕ), ಗ್ಲೆನ್ ಫಿಲಿಫ್ಸ್‌, ಡೇರಲ್ ಮಿಚೆಲ್, ಜೇಮ್ಸ್‌ ನೀಶಮ್‌, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್‌, ಲಾಕಿ ಫರ್ಗ್ಯೂಸನ್, ಇಶ್ ಸೋಧಿ.

ಐರ್ಲೆಂಡ್: ಪೌಲ್ ಸ್ಟರ್ಲಿಂಗ್, ಆಂಡ್ರ್ಯೂ ಬಲ್ಬ್ರೈನ್(ನಾಯಕ), ಲಾರ್ಕನ್ ಟುಕರ್(ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕುರ್ಟಿಸ್ ಕ್ಯಾಂಪರ್, ಜಾರ್ಜ್‌ ಡಾಕ್ರೆಲ್‌, ಗೆರೆತ್ ಡೆನ್ಲಿ, ಮಾರ್ಕ್‌ ಅಡೈರ್, ಫಿನ್ ಹ್ಯಾಂಡ್, ಬ್ಯಾರಿ ಮೆಕಾರ್ಥಿ, ಜೋಶ್ವಾ ಲಿಟ್ಲ್‌. 

ಪಂದ್ಯ: ಬೆಳಗ್ಗೆ 9.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಹಾಟ್‌ಸ್ಟಾರ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ