T20 World Cup: ಬಾಂಗ್ಲಾಗೆ ಮಾಡು ಇಲ್ಲವೇ ಮಡಿ ಪಂದ್ಯ

By Suvarna News  |  First Published Oct 19, 2021, 8:52 AM IST

* ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಿದೆ ಕ್ವಾಲಿಫೈಯರ್ ಪಂದ್ಯಗಳು

* ಬಾಂಗ್ಲಾದೇಶಕ್ಕಿಂದು ಆತಿಥೇಯ ಓಮನ್ ಸವಾಲು

* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಬಾಂಗ್ಲಾದೇಶ


ಅಲ್‌ ಅಮೆರಾತ್‌(ಅ.19‌): ಟಿ20 ವಿಶ್ವಕಪ್‌ (ICC T20 World Cup) ಅರ್ಹತಾ ಸುತ್ತಿನ ಆರಂಭಿಕ ಪಂದ್ಯದಲ್ಲಿ ಸೋತು ಆಘಾತ ಅನುಭವಿಸಿದ್ದ ಬಾಂಗ್ಲಾದೇಶ (Bangladesh Cricket Team) ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಂಗಳವಾರ ಒಮಾನ್‌ ವಿರುದ್ಧ ಸೆಣಸಾಡಲಿದೆ. 

ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡ ಸ್ಕಾಟ್ಲೆಂಡ್‌ ವಿರುದ್ಧ ಅಚ್ಚರಿಯ ರೀತಿಯಲ್ಲಿ ಸೋಲುಂಡಿತ್ತು. ಹೀಗಾಗಿ ವಿಶ್ವಕಪ್‌ ಸೂಪರ್‌ 12ರ ಸುತ್ತು ಪ್ರವೇಶಿಸುವ ಕಾತರದಲ್ಲಿರುವ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಇನ್ನೊಂದೆಡೆ, ತನ್ನ ಮೊದಲ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ 10 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿರುವ ಅತಿಥೇಯ ಒಮಾನ್‌ ತಂಡ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದು, ಬಾಂಗ್ಲಾವನ್ನು ಸೋಲಿಸಿ ಪ್ರಧಾನ ಸುತ್ತಿನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಕಾತರಿಸುತ್ತಿದೆ.

Tap to resize

Latest Videos

undefined

ಬಾಂಗ್ಲಾ ತಂಡದ ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್‌ (Shakib al Hasan), ಮುಷ್ಪಿಕುರ್ ರಹೀಮ್‌, ಮೊಹಮ್ಮದುಲ್ಲಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಿದರೆ ಗೆಲುವು ಕಷ್ಟವಲ್ಲ. ಒತ್ತಡದ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

ಪ್ರಧಾನ ಸುತ್ತಿಗೇರುವ ಉತ್ಸಾಹದಲ್ಲಿ ಸ್ಕಾಟ್ಲೆಂಡ್‌

ಅಲ್‌ ಅಮೆರಾತ್: ಟಿ20 ವಿಶ್ವಕಪ್‌ನ ಪ್ರಧಾನ ಸುತ್ತು ಪ್ರವೇಶಿಸುವ ನೆಚ್ಚಿನ ತಂಡ ಎನಿಸಿಕೊಂಡಿದ್ದ ಬಾಂಗ್ಲಾದೇಶಕ್ಕೆ ಮೊದಲ ಪಂದ್ಯದಲ್ಲಿ ಸೋಲುಣಿಸಿದ್ದ ಸ್ಕಾಟ್ಲೆಂಡ್‌, ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಮಂಗಳವಾರ ಪಪುವಾ ನ್ಯೂಗಿನ ವಿರುದ್ಧ ಆಡಲಿದೆ. 

T20 World Cup 2021: ಅಭ್ಯಾಸ ಪಂದ್ಯದಲ್ಲಿ ಶುಭಾರಂಭ, ಇಂಗ್ಲೆಂಡ್ ಮಣಿಸಿದ ಭಾರತ!

ಆರಂಭಿಕ ಆಘಾತ ಅನುಭವಿಸಿದ್ದರೂ ಬಳಿಕ ಪುಟಿದೆದ್ದು ಬಾಂಗ್ಲಾವನ್ನು ರೋಚಕವಾಗಿ ಸೋಲಿಸಿದ್ದ ಸ್ಕಾಟ್ಲೆಂಡ್‌, ಈ ಪಂದ್ಯವನ್ನೂ ಗೆದ್ದು ಸೂಪರ್‌ 12ರ ಸುತ್ತು ಪ್ರವೇಶಿಸುವುದನ್ನು ಬಹುತೇಖ ಖಚಿತಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, ನ್ಯೂಗಿನಿ ತನ್ನ ಮೊದಲ ಪಂದ್ಯದಲ್ಲಿ ಒಮಾನ್‌ ವಿರುದ್ಧ ಹೀನಾಯ ಸೋಲುಂಡಿತ್ತು. ಹೀಗಾಗಿ ಮುಂದಿನ ಸುತ್ತು ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಪಂದ್ಯ: ಮಧ್ಯಾಹ್ನ 3.30ಕ್ಕೆ

ಕಿವೀಸ್ ಎದುರು ಆಸೀಸ್‌ಗೆ ರೋಚಕ ಜಯ

ಅಬುಧಾಬಿ: ಆಸ್ಟ್ರೇಲಿಯಾ (Australia Cricket Team) ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವು 3 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಿದೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು (New Zealand Cricket Team) ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿಲ್, ಡೇರಲ್‌ ಮಿಚೆಲ್, ಕೇನ್‌ ವಿಲಿಯಮ್ಸನ್ ಹಾಗೂ ಜೇಮ್ಸ್ ನೀಶಮ್ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ 7 ವಿಕೆಟ್ ಕಳೆದುಕೊಂಡು 157 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು.

T20 World Cup: 4 ಎಸೆತಕ್ಕೆ 4 ವಿಕೆಟ್‌, ಐರ್ಲೆಂಡ್ ಎದುರು ಕೇವಲ 106 ರನ್‌ ಬಾರಿಸಿದ ನೆದರ್‌ಲೆಂಡ್ಸ್‌..!

ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಆರಂಭಿಕ ಆಘಾತ ಅನುಭವಿಸಿತು. ಡೇವಿಡ್ ವಾರ್ನರ್ ಶೂನ್ಯ ಸುತ್ತಿ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಇದರ ಹೊರತಾಗಿಯೂ ನಾಯಕ ಫಿಂಚ್‌ ಹಾಗೂ ಮಿಚೆಲ್ ಮಾರ್ಷ್ ತಲಾ 24 ರನ್ ಹಾಗೂ ಸ್ಟೀವ್ ಸ್ಮಿತ್(35) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಇನ್ನೊಂದು ಎಸೆತ ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿತು.

ನಮೀಬಿಯಾ ವಿರುದ್ಧ ಶ್ರೀಲಂಕಾಗೆ ಗೆಲುವು

ಅಬುಧಾಬಿ: ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಶ್ರೀಲಂಕಾ, ನಮೀಬಿಯಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟ ನಮೀಬಿಯಾ 19.3 ಓವರಲ್ಲಿ 96 ರನ್‌ಗೆ ಆಲೌಟ್‌ ಆಯಿತು. ಮಹೀಶ್‌ ಥೀಕ್ಷಣ 3 ವಿಕೆಟ್‌ ಕಬಳಿಸಿದರು. ಸುಲಭ ಗುರಿ ಬೆನ್ನತ್ತಿದ ಶ್ರೀಲಂಕಾ 13.3 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು. ಭನುಕಾ ರಾಜಪಕ್ಷೆ 42 ರನ್‌ ಸಿಡಿಸಿದರು.

click me!