T20 World Cup ಹಾಲಿ ಚಾಂಪಿಯನ್ ಅಸ್ಟ್ರೇಲಿಯಾಗಿಂದು ಐರ್ಲೆಂಡ್ ಸವಾಲು..!

By Naveen Kodase  |  First Published Oct 31, 2022, 12:35 PM IST

ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಆಸ್ಟ್ರೇಲಿಯಾ-ಐರ್ಲೆಂಡ್ ಮುಖಾಮುಖಿ
ಸುಲಭ ಗೆಲುವಿನ ನಿರೀಕ್ಷೆಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ
ಮತ್ತೊಂದು ಅಚ್ಚರಿ ಫಲಿತಾಂಶ ಎದುರು ನೋಡುತ್ತಿರುವ ಐರ್ಲೆಂಡ್


ಬ್ರಿಸ್ಬೇನ್‌(ಅ.31): ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ ಸೋಮವಾರ ಐರ್ಲೆಂಡ್‌ ವಿರುದ್ಧ ಗೆಲಲ್ಲೇಬೇಕಿದೆ. ಇಂಗ್ಲೆಂಡ್‌ಗೆ ಸೋಲುಣಿಸಿರುವ ಐರ್ಲೆಂಡ್‌ ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಲು ಎದುರು ನೋಡುತ್ತಿದ್ದರೂ, ಆಸ್ಪ್ರೇಲಿಯಾವೇ ಗೆಲ್ಲುವ ಫೇವರಿಟ್‌ ಎನಿಸಿದೆ. ಉಭಯ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಒಮ್ಮೆ ಮುಖಾಮುಖಿಯಾಗಿದ್ದವು. ಅದು 2012ರಲ್ಲಿ. ಆ ಪಂದ್ಯದಲ್ಲಿ ಆಸೀಸ್‌ 7 ವಿಕೆಟ್‌ ಜಯ ಸಾಧಿಸಿತ್ತು. ಸದ್ಯ ಆಸೀಸ್‌ ಮತ್ತೊಂದು ಭರ್ಜರಿ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ. ಕೊನೆ 2 ಪಂದ್ಯಗಳಲ್ಲಿ ಆಸೀಸ್‌ ಗೆದ್ದರಷ್ಟೇ ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಸಾಧ್ಯ ಎನಿಸಿದೆ.

ಶ್ರೀಲಂಕಾ ಎದುರು ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಇದೀಗ ಮತ್ತೊಂದು ಸುಲಭದ ಜಯವನ್ನು ಎದುರು ನೋಡುತ್ತಿದೆ. ನಾಯಕ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋನಿಸ್ ಹಾಗೂ ಟಿಮ್ ಡೇವಿಡ್ ಅಬ್ಬರಿಸಿದರೆ, ಬೃಹತ್ ಮೊತ್ತ ದಾಖಲಿಸುವುದು ಆಸ್ಟ್ರೇಲಿಯಾ ತಂಡಕ್ಕೆ ಕಷ್ಟವಾಗಲಾರದು. ಇನ್ನು ಬೌಲಿಂಗ್‌ನಲ್ಲಿ ತ್ರಿವಳಿ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್‌, ಐರ್ಲೆಂಡ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

Tap to resize

Latest Videos

undefined

Virat Kohli ಖಾಸಗಿತನಕ್ಕೆ ಧಕ್ಕೆ; ಹೋಟೆಲ್ ರೂಂ ವಿಡಿಯೋ, ಅಸಮಾಧಾನ ಹೊರಹಾಕಿದ ಮಾಜಿ ನಾಯಕ..!

ಇನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಐರ್ಲೆಂಡ್ ತಂಡವು ಗೆಲುವು ಸಾಧಿಸಬೇಕಿದ್ದರೇ ಎಲ್ಲಾ ಆಟಗಾರರು100% ಪ್ರದರ್ಶನ ತೋರಲೇಬೇಕಿದೆ. ಬಲಿಷ್ಠ ಇಂಗ್ಲೆಂಡ್‌ ವಿರುದ್ದ ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಐರ್ಲೆಂಡ್ ತಂಡವು ಬ್ಯಾಟಿಂಗ್‌ನಲ್ಲಿ ಪೌಲ್ ಸ್ಟರ್ಲಿಂಗ್, ಆಂಡಿ ಬಲ್ಬ್ರೈನ್, ಲಾರ್ಕನ್ ಟಕ್ಕರ್, ಹ್ಯಾರಿ ಟೆಕ್ಟರ್ ಹಾಗೂ ಕುರ್ಟಿಸ್ ಕಾಂಪರ್ ಅವರನ್ನು ನೆಚ್ಚಿಕೊಂಡಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್(ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌, ಮಿಚೆಲ್ ಸ್ಟಾರ್ಕ್‌, ಆಡಂ ಜಂಪಾ, ಜೋಶ್ ಹೇಜಲ್‌ವುಡ್.

ಐರ್ಲೆಂಡ್: ಪೌಲ್ ಸ್ಟರ್ಲಿಂಗ್, ಆಂಡಿ ಬಲ್ಬ್ರೈನ್, ಲಾರ್ನ್ ಟಕ್ಕರ್, ಹ್ಯಾರಿ ಟೆಕ್ಟರ್, ಕುರ್ಟಿಸ್ ಕ್ಯಾಂಪರ್, ಜಾರ್ಜ್ ಡಾಕ್ರೆಲ್‌, ಗೆರಾತ್ ಡೆನ್ಲಿ, ಮಾರ್ಕ್ ಅಡೈರ್, ಫಿನ್ ಹ್ಯಾಡ್, ಬ್ಯಾರಿ ಮೆಕ್ಯಾಥಿ, ಜೋಶ್ ಲಿಟ್ಲ್.

ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!