T20 World Cup: ನಮೀಬಿಯಾಗೆ ಕಠಿಣ ಗುರಿ ನೀಡಿದ ಆಫ್ಘನ್‌

By Suvarna NewsFirst Published Oct 31, 2021, 5:27 PM IST
Highlights

* ನಮೀಬಿಯಾಗೆ ಕಠಿಣ ಗುರಿ ನೀಡಿದ ಆಫ್ಘಾನಿಸ್ತಾನ

* ಮೊಹಮ್ಮದ್‌ ಶೆಹಜಾದ್ ಹಾಗೂ ನಬಿ ಸ್ಪೋಟಕ ಬ್ಯಾಟಿಂಗ್

* ಗೆಲ್ಲಲು 161 ರನ್‌ ಗುರಿ ಪಡೆದ ನಮೀಬಿಯಾ

ಅಬುಧಾಬಿ(ಅ.31): ಆರಂಭಿಕ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಶೆಹಜಾದ್ (Mohammad Shahzad) (45) ಹಾಗೂ ಮೊಹಮ್ಮದ್ ನಬಿ(32) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆಫ್ಘಾನಿಸ್ತಾನ ತಂಡವು 5 ವಿಕೆಟ್‌ ಕಳೆದುಕೊಂಡು 160 ರನ್‌ ಗಳಿಸಿದ್ದು, ಗೆಲ್ಲಲು ನಮೀಬಿಯಾಗೆ (Namibia Cricket Team) ಕಠಿಣ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲಿಳಿದ ಆಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ (Afghanistan Cricket Team) ಮೊಹಮ್ಮದ್ ಶೆಹಜಾದ್ ಹಾಗೂ ಹಜರುತ್ತುಲ್ಲಾ ಝಝೈ ಮೊದಲ ವಿಕೆಟ್‌ಗೆ 53 ರನ್‌ಗಳ ಜತೆಯಾಟವಾಡುವ ಉತ್ತಮ ಆರಂಭ ಒದಗಿಸಿಕೊಟ್ಟರು. ಹಜರುತ್ತುಲ್ಲಾ ಝಝೈ (Hazratullah Zazai) 33 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ರಹಮತ್ತುಲ್ಲಾ ಗುರ್ಬಾಜ್‌ (Rahmanullah Gurbaz) ಕೇವಲ 4 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಸ್ಪೋಟಕ ಬ್ಯಾಟಿಂಗ್‌ ನಡೆಸಿದ ಮೊಹಮ್ಮದ್ ಶೆಹಜಾದ್ 33 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 45 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

T20 World Cup: ಕಿವೀಸ್ ಎದುರು ಐಸಿಸಿ ಕಹಿ ನೆನಪನ್ನು ಅಳಿಸಿ ಹಾಕುತ್ತಾ ಟೀಂ ಇಂಡಿಯಾ..?

ಇನ್ನು ವೃತ್ತಿಜೀವನ ಕೊನೆಯ ಪಂದ್ಯವನ್ನಾಡಲು ಕಣಕ್ಕಿಳಿದ ಮಾಜಿ ನಾಯಕ ಅಸ್ಗರ್ ಅಫ್ಘಾನ್‌ (Asghar Afghan) ಕೇವಲ 23 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 31 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ನಜೀಬುಲ್ಲಾ ಜದ್ರಾನ್‌ 7 ಬಾರಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮೊಹಮ್ಮದ್ ನಬಿ ಕೇವಲ 17 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್‌ ಸಿಡಿಸುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ತಲುಪಿಸಿದರು.

ಮೊಹಮ್ಮದ್ ಶಮಿ ನಿಂದಕರ ಬಾಯಿ ಮುಚ್ಚಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಟ್ಟ ನುಡಿ...!

ನಮೀಬಿಯಾ ಪರ ಲೋಫ್ಟಿ ಈಟನ್‌ 4 ಓವರ್‌ನಲ್ಲಿ 21 ರನ್‌ ನೀಡಿ 2 ವಿಕೆಟ್‌ ಒಪ್ಪಿಸಿದರು. ಇನ್ನು ರುಬಿನ್‌ ಟ್ರಂಪಲ್‌ಮೆನ್‌ 34 ರನ್‌ ನೀಡಿ 2 ವಿಕೆಟ್‌ ಪಡೆದಿದ್ದರು. ಜೆಜೆ ಸ್ಮಿತ್‌ 22 ರನ್‌ ನೀಡಿ ಒಂದು ವಿಕೆಟ್ ಪಡೆದರು.

ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಸ್ಕಾಟ್ಲೆಂಡ್, ನಮೀಬಿಯಾ ಹಾಗೂ ಆಫ್ಘಾನಿಸ್ತಾನ ತಂಡವು ಸ್ಥಾನ ಪಡೆದಿವೆ. ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಈಗಾಗಲೇ ಮೂರು ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲೂ ಗೆಲುವಿನ ನಗೆ ಬೀರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಫ್ಘಾನಿಸ್ತಾನ, ನಮೀಬಿಯಾ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿವೆ. ಭಾರತ, ಪಾಕಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡಗಳು ಇನ್ನೂ ಗೆಲುವಿನ ಖಾತೆ ತೆರೆದಿವೆ.

T20 World Cup 2021: ಒಂದೇ ಓವರ್‌ಲ್ಲಿ 4 ಸಿಕ್ಸರ್, ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

ಸೆಮೀಸ್‌ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಆಫ್ಘಾನಿಸ್ತಾನ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆಫ್ಘಾನಿಸ್ತಾನ ತಂಡವು ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ದ 130 ರನ್‌ಗಳ ಜಯ ದಾಖಲಿಸಿತ್ತು. ಇದಾದ ಬಳಿಕ ಪಾಕಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವು ರೋಚಕ ಸೋಲು ಅನುಭವಿಸಿತ್ತು. 

ಸಂಕ್ಷಿಪ್ತ ಸ್ಕೋರ್

ಆಫ್ಘಾನಿಸ್ತಾನ ಕ್ರಿಕೆಟ್ ತಂಡ: 160/5

ಮೊಹಮ್ಮದ್ ಶೆಹಜಾದ್‌: 45
ಲೋಫ್ಟಿ-ಈಟನ್: 21/2

click me!