* 2024ರ ಐಸಿಸಿ ಟಿ20 ವಿಶ್ವಕಪ್ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಿದ್ದತೆ
* ಹಾರ್ದಿಕ್ ಪಾಂಡ್ಯ ನೇತೃತ್ವದದಲ್ಲಿ ಯುವ ಪಡೆ ಕಟ್ಟಲು ಬಿಸಿಸಿಐ ಚಿಂತನೆ
* ಹಿರಿಯ ಆಟಗಾರರಿಗೆ ಟಿ20 ವಿಶ್ವಕಪ್‌ನಿಂದ ಗೇಟ್‌ಪಾಸ್ ಸಾಧ್ಯತೆ
ಬೆಂಗಳೂರು(ಜು.04): ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ಈಗಾಗ್ಲೇ ಟೀಂ ಇಂಡಿಯಾವನ್ನು ಅನೌನ್ಸ್ ಮಾಡಲಾಗಿದೆ. ಆದ್ರೆ, T20 ತಂಡದ ಸೆಲೆಕ್ಷನ್ ಇನ್ನು ಆಗಿಲ್ಲ. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇದರಿಂದ ಸೀನಿಯರ್ಗಳ T20 ಕರಿಯರ್ ಕಥೆ ಏನು..? ಅನ್ನೋ ಪ್ರಶ್ನೆ ಮೂಡಿದೆ.
2022ರ ವಿಶ್ವಕಪ್ ನಂತರ ಒಂದೇ ಒಂದು T20 ಪಂದ್ಯವಾಡಿಲ್ಲ ಸೀನಿಯರ್ ಕ್ರಿಕೆಟರ್ಸ್..!
undefined
ಕಳೆದ ವರ್ಷ ನಡೆದ T20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಯಾವುದೇ T20 ಸರಣಿ ಆಡಿಲ್ಲ. ಇದರಿಂದ ಇವರ ಟಿ20 ಕರಿಯರ್ ಆಲ್ಮೋಸ್ಟ್ ಕ್ಲೋಸ್ ಎನ್ನಲಾಗ್ತಿದೆ. ವಿರಾಟ್ ಕೊಹ್ಲಿಗೀಗ 34 ವರ್ಷವಾದ್ರೆ, ರೋಹಿತ್ ಶರ್ಮಾಗೆ 36 ವರ್ಷ ವಯಸ್ಸಾಗಿದೆ. ಇದರಿಂದ ಇವರಿಬ್ಬರನ್ನ T20 ಕ್ರಿಕೆಟ್ನಿಂದ ದೂರವಿಡೋದು BCCI ಪ್ಲಾನ್ ಆಗಿದೆ.
ಏಕದಿನ ವಿಶ್ವಕಪ್ ಮುಗಿದ ಕೆಲವೇ ತಿಂಗಳಲ್ಲಿ T20 ವಿಶ್ವಕಪ್ ಸಮರ ನಡೆಯಲಿದೆ. 2007ರ ನಂತರ ಭಾರತ ಈವರೆಗು ಚುಟುಕು ವಿಶ್ವಕಪ್ ಸಮರ ಗೆದ್ದಿಲ್ಲ. ಅಲ್ಲದೇ ಕಳೆದೆರೆಡು T20 ವಿಶ್ವಕಪ್ ಟೂರ್ನಿಗಳಲ್ಲಿ ತಂಡ ಹೀನಾಯ ಪ್ರದರ್ಶನ ನೀಡಿದೆ. ಈ ಎಲ್ಲಾ ಕಾರಣಗಳಿಂದಾಗಿ ಮುಂದಿನ ವರ್ಷ ಟಿ20 ಕಪ್ ಗೆಲ್ಲಲೇಬೇಕು ಅಂತ ಬಿಸಿಸಿಐ ಪಣ ತೊಟ್ಟಿದೆ. ಇದಕ್ಕಾಗಿ ಬಿಸಿರಕ್ತದ ಹುಡುಗರಿಂದ ಕೂಡಿದ ತಂಡ ಕಟ್ಟುವ ಯೋಜನೆ ಹಾಕಿಕೊಂಡಿದೆ.
ಕ್ರೀಡಾಸ್ಫೂರ್ತಿಗೆ ಕೇರ್ ಆಫ್ ಅಡ್ರೆಸ್ ಮಹಿ..! ಮೋಸ ಮಾಡಿ ಗೆಲುವು ಸಾಧಿಸ್ತಾ ಆಸ್ಟ್ರೇಲಿಯಾ..?
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಾತ್ರ ಅಲ್ಲ. ಇನ್ನು ಹಲವು ಆಟಗಾರರು T20 ಇಂಟರ್ನ್ಯಾಷನಲ್ ಕರಿಯರ್ ಕೂಡ ಎಂಡ್ ಅಗಲಿದೆ. ಆ ಲಿಸ್ಟ್ನಲ್ಲಿ ವೇಗಿ ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ. ಆದ್ರೆ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕೆ.ಎಲ್ ರಾಹುಲ್ ಈ ಮೂವರು ಇನ್ನು ಒಂದೆರೆಡು ವರ್ಷ ಟಿ20 ಕ್ರಿಕೆಟ್ ಆಡಲಿದ್ದಾರೆ ಎನ್ನಲಾಗಿದೆ.